ತೇಜ್ ಬಹಾದ್ದೂರ್
ತೇಜ್ ಬಹಾದ್ದೂರ್ ಸಂಸ್ಮರಣೆ
ತೇಜ್ ಬಹಾದ್ದೂರ್ ಸಿಖ್ಖರ ಒಂಬತ್ತನೆಯ ಗುರು. ಇಂದು ಧರ್ಮರಕ್ಷಣೆಗಾಗಿ ಅವರು ಹುತಾತ್ಮರಾದ ದಿನ.
ತೇಜ್ ಬಹಾದ್ದೂರ್ ಅವರು ಆರನೆಯ ಗುರು ಹರಗೋವಿಂದ್ ಸಿಂಗ್ ಅವರ ಪುತ್ರರಾಗಿ 1621ರ ಏಪ್ರಿಲ್ 1ರಂದು ಅಮೃತಸರದಲ್ಲಿ ಜನಿಸಿದರು. ಅವರ ಹುಟ್ಟು ಹೆಸರು ತ್ಯಾಗ ಮಲ್.
ತೇಜ್ ಬಹಾದ್ದೂರ್ ಎಂಟನೆಯ ಗುರುಹರ್ ಕಿಶನ್ ಅನಂತರ ಗುರು ಪಟ್ಟಕ್ಕೆ ಬಂದರು. ಆನಂದಪುರ ಇವರ ಕೇಂದ್ರಸ್ಥಳವಾಗಿತ್ತು.
ಅದು ಔರಂಗಜೇಬನ ಆಳ್ವಿಕೆಯ ಕಾಲವಾಗಿತ್ತು. ಇಸ್ಲಾಂ ಮತವನ್ನು ಒತ್ತಾಯದಿಂದ ಹಿಂದೂಗಳ ಮೇಲೆ ಹೇರುವುದರಲ್ಲಿ ಔರಂಗಜೇಬ್ ನಿರತನಾಗಿದ್ದ. ಅನೇಕ ಗುರುದ್ವಾರಗಳನ್ನು ಕೆಡಿಸಿ ಮಸೀದಿಗಳನ್ನಾಗಿ ಮಾಡಲು ಅವನು ಉತ್ತೇಜಿಸಿದ. ಅನೇಕ ಗುರುದ್ವಾರಗಳನ್ನು ಕೆಡವಾಲಾಯಿತು. ಹಿಂದೂಗಳಲ್ಲೂ ಸಿಖ್ಖರಲ್ಲೂ ಅಸಮಾಧಾನ ಹೆಚ್ಚುತ್ತಿತ್ತು. ಆದರೆ ಅವರು ದೌರ್ಜನ್ಯವನ್ನೂ ನುಂಗಬೇಕಾಗಿತ್ತು. ಈ ಪರಿಸ್ಥಿತಿಯಲ್ಲಿ ತೇಜ್ ಬಹಾದ್ದೂರ್ ಸಿಖ್ಖರ ಮುಂದಾಳಾಗಿ, ಧರ್ಮದ ರಕ್ಷಣೆಗಾಗಿ ನಿಂತರು. ಇವರು ಪಂಜಾಬಿನ ವಿವಿಧ ಭಾಗಗಳಲ್ಲಿ ಜಾಗೃತಿಯುಂಟಾಗುವಂತೆ ಮಾಡಿದರು. ಜಾಟರು ಇವರ ಬೆಂಬಲಕ್ಕೆ ನಿಂತರು. ಔರಂಗಜೇಬ್ ವಿಧಿಸಿದ ಕಟ್ಟಳೆಗಳನ್ನು ಮುರಿಯಲು ಅನೇಕ ಜನರನ್ನು ತೇಜ್ ಬಹಾದ್ದೂರರು ಹುರಿದುಂಬಿಸಿದರು.
ತೇಜ್ ಬಹಾದ್ದೂರರ ಈ ಕೃತ್ಯಗಳನ್ನು ಕಂಡ ಔರಂಗಜೇಬ್ ಕ್ರುದ್ಧನಾಗಿ ತೇಗ್ ಬಹಾದ್ದೂರ್ ಮತ್ತು ಅವರ ಐವರು ಶಿಷ್ಯರನ್ನು ಬಂಧಿಸಿ ದೆಹಲಿಗೆ ಕರೆತಂದ. ತೇಜ್ ಬಹಾದ್ದೂರರನ್ನು ಇಸ್ಲಾಂ ಮತಕ್ಕೆ ಪರಿವರ್ತಿಸಲು ಬಾದಶಾಹ ಬಹಳ ಪ್ರಯತ್ನಿಸಿದ. ಗುರುವಿನ ಇಬ್ಬರು ಶಿಷ್ಯರನ್ನು ಅವನ ಇದಿರೇ ಕೊಲ್ಲಿಸಿದ. ತೇಜ್ ಬಹಾದ್ದೂರ್ ತನ್ನ ಧರ್ಮವನ್ನು ಬಿಡಲೊಪ್ಪಲಿಲ್ಲ.
ಕೊನೆ 1675ರಲ್ಲಿ ನವೆಂಬರ್ ನವೆಂಬರ್ 24ರಂದು ತೇಜ್ ಬಹಾದ್ದೂರ್ ಶಿರಶ್ಛೇದ ಮಾಡಲಾಯಿತು. ಧರ್ಮಾಂಧರ ಹಿಂಸಾಚಾರದ ವಿರುದ್ಧ ತಲೆಬಾಗದ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿ ಗುರು ತೇಜ್ ಬಹಾದ್ದೂರ್ ನಿತ್ಯಸ್ಮರಣೀಯರಾಗಿದ್ದಾರೆ.
Martyrdom day of Guru Tegh Bahadur , ತೇಗ್ ಬಹಾದ್ದೂರ್
ಕಾಮೆಂಟ್‌ಗಳು