ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಮ್ಯಾ


 ರಮ್ಯಾ

ನಟಿ ರಮ್ಯಾ ಹುಟ್ಟಿದ ಹಬ್ಬ.  ಆಕೆ 1982ರ ನವೆಂಬರ್ 29ರಂದು ಜನಿಸಿದರು.

2003ರ ವರ್ಷದಲ್ಲಿ ಪುನೀತ್ ಜೊತೆಯಲ್ಲಿ  ‘ಅಭಿ’ ಚಿತ್ರದ ಮೂಲಕ ಬಂದ ಈ ಹುಡುಗಿ ಸುಮಾರು ಒಂದು ದಶಕ  ಚಿತ್ರರಂಗದಲ್ಲಿ ಪ್ರಖ್ಯಾತಿ ಉಳಿಸಿಕೊಂಡಿದ್ದರು. 

ರಮ್ಯಾ ಕೆಲಸ ಮಾಡಿರುವ ಕೆಲವೊಂದು ಯಶಸ್ವಿ ಚಿತ್ರಗಳಾದ ‘ಅಭಿ’, ‘ಅರಸು’, ‘ಆಕಾಶ್’,  ‘ಎಕ್ಸ್ ಕ್ಯೂಸ್ ಮಿ’, 'ತನನಂ ತನನಂ', 'ಮುಸ್ಸಂಜೆ ಮಾತು',‘ಅಮೃತಧಾರೆ’, ‘ಜೊತೆ ಜೊತೆಯಲ್ಲಿ’, ‘ಜಸ್ಟ್ ಮಾತ್ ಮಾತಲ್ಲಿ', 'ಸಂಜು ವೆಡ್ಸ್ ಗೀತ’, 'ಸಿದ್ಲಿಂಗು'ಮುಂತಾದ ಚಿತ್ರಗಳ ಯಶಸ್ಸಿನ ಹಿನ್ನಲೆಯಲ್ಲಿ ಆಕೆಯ ಸುಂದರ ಅಭಿವ್ಯಕ್ತಿ, ಚುರುಕುತನ ಕೂಡ ಸಾಕಷ್ಟು ಕೆಲಸ ಮಾಡಿರುವುದು ಗೋಚರವಾಗುತ್ತದೆ.  ಕನ್ನಡದಲ್ಲಷ್ಟೇ ಅಲ್ಲದೆ ದಿವ್ಯಸ್ಪಂದನ ಎಂಬ ಹೆಸರಿನಲ್ಲಿ  ಹಲವು ತಮಿಳು, ತೆಲುಗು ಭಾಷೆಗಳ ಚಿತ್ರಗಳಲ್ಲೂ ಅಭಿನಯಿಸಿ ಅಲ್ಲೂ ಈಕೆ ಯಶಸ್ವಿಯಾಗಿದ್ದರು.

ರಮ್ಯಾ ಅವರಿಗೆ 2010-11 ಸಾಲಿನ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದ ಅಭಿನಯಕ್ಕಾಗಿ  ಪ್ರಶಸ್ತಿ ಸಂದಿತ್ತು.  ಜೊತೆಗೆ ‘ತನನಂ ತನನಂ’ ಮತ್ತು ‘ಸಂಜು ವೆಡ್ಸ್ ಗೀತಾ’  ಚಿತ್ರಗಳಲ್ಲಿನ   ಅಭಿನಯಕ್ಕಾಗಿ   ಫಿಲಂಫೇರ್ ಪ್ರಶಸ್ತಿಗಳೂ  ಸಂದಿದ್ದವು.   

ಚಲನಚಿತ್ರ ಮಾಧ್ಯಮದ ಕಲಾವಿದೆಯಾಗಿ ಸುಮಾರು ಒಂದು ದಶಕ ಆಕೆಯ ತೆರೆಯ ಮೇಲೆ ಸುಂದರವಾಗಿ ಕಂಡಿದ್ದರು.  ಆಕೆಗೆ ಶುಭವಾಗಲಿ.

Ramya


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ