ಪುಲ್ಲೇಲ ಗೋಪಿಚಂದ್
ಪುಲ್ಲೇಲ ಗೋಪಿಚಂದ್
ಪುಲ್ಲೇಲ ಗೋಪಿಚಂದ್ ಭಾರತಕ್ಕೆ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಮಹಾನ್ ಆಟಗಾರರಾಗಿ ಮತ್ತು ತರಬೇತುದಾರರಾಗಿ ಕೀರ್ತಿ ತಂದವರು.
ಗೋಪಿಚಂದ್ 1973ರ ನವೆಂಬರ್ 16ರಂದು ಆಂಧ್ರಪ್ರದೇಶದ ನಗಾಂಡ್ಲ ಗ್ರಾಮದಲ್ಲಿ ಜನಿಸಿದರು. ಪ್ರಕಾಶ್ ಪಡುಕೋಣೆ ಅವರ ನಂತರದಲ್ಲಿ ಪ್ರತಿಷ್ಠಿತ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಪ್ರಶಸ್ತಿ ಗೆದ್ದವರು ಗೋಪೀಚಂದ್. ಅವರ ಆಟದ ಶ್ರೇಷ್ಟತೆಗೆ ರಾಜೀವ್ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಸಂದಿದೆ.
ಬ್ಯಾಂಡ್ಮಿಂಟನ್ ಗುರುವಾಗಿ ಸಹಾ ಗೋಪಿಚಂದ್ ಸಾಧನೆ ಶ್ರೇಷ್ಠವಾದದ್ದು. ಇಂದು ವಿಶ್ವ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಸೈನಾ ನೆಹವಾಲ್, ಪಿ. ವಿ. ಸಿಂಧು, ಪರುಪಲ್ಲಿ ಕಶ್ಯಪ್, ಗುರುಸಾಯಿ ದತ್ ಅಂತಹ ಪ್ರತಿಭೆಗಳನ್ನು ಪೋಷಿಸಿ ಮಾರ್ಗದರ್ಶಿಸಿ ದ್ರೋಣಾಚಾರ್ಯ ಪ್ರಶಸ್ತಿ ಪಡೆದ ಕೀರ್ತಿ ಕೂಡಾ ಗೋಪೀಚಂದ್ ಅವರದು.
ಗೋಪಿಚಂದ್ ಅವರಿಗೆ ಪದ್ಮಭೂಷಣ ಪ್ರಶಸ್ತಿಯೂ ಸಂದಿದೆ. ಮಹಾನ್ ಸಾಧಕ ಗೋಪಿಚಂದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
On the birthday of great badminton star and guru Pullela Gopichand
ಕಾಮೆಂಟ್‌ಗಳು