ಶ್ರೀಕಂಠೇಶಗೌಡರು
ಎಂ. ಎಲ್. ಶ್ರೀಕಂಠೇಶಗೌಡರು
ಕಳೆದ ಬಾರಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿರುವ ಫೋಟೋಗಳಲ್ಲಿ ನನಗೆ ಗೊತ್ತಿಲ್ಲದ ಹೆಸರುಗಳನ್ನು ಅರಸುತ್ತಿದ್ದೆ. ಅವುಗಳಲ್ಲಿ ಎಂ. ಎಲ್. ಶ್ರೀಕಂಠೇಶಗೌಡರ ಕಳೆ ಕಳೆಯಾದ ಚಿತ್ರ ವಿಶೇಷವೆನಿಸಿತು.
ಕನ್ನಡದ ಷೇಕ್ಸ್ ಪಿಯರ್’ ಎಂದೇ ಪ್ರಸಿದ್ಧರಾದ 19ನೇ ಶತಮಾನದ ಕೊನೆ 20ನೇ ಶತಮಾನದ ಆರಂಭದ ಕಾಲಘಟ್ಟದಲ್ಲಿದ್ದ ಎಂ. ಎಲ್. ಶ್ರೀಕಂಠೇಶಗೌಡರು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ದೇಶಹಳ್ಳಿಯವರು.
ಬಹುಮುಖ ಪ್ರತಿಭೆಯ ವ್ಯಕ್ತಿತ್ವದ ನ್ಯಾಯಾಧೀಶರಾಗಿದ್ದ ಶ್ರೀಕಂಠೇಶಗೌಡರು ನ್ಯಾಯಾಂಗವನ್ನು ಅಭ್ಯಾಸ ಮಾಡಿದಷ್ಟೇ ಪ್ರಾಮಾಣಿಕವಾಗಿ ಸಾಹಿತ್ಯ ಸಂಸ್ಕೃತಿಗಳನ್ನು ಅಭ್ಯಾಸ ಮಾಡಿದ್ದರು. ಜನಪದ ಸಂಸ್ಕೃತಿಯ ಬಗ್ಗೆ ವಿಶೇಷವಾಗಿ ಹಳ್ಳಿಯ ಬದುಕಿನ ಬಗ್ಗೆ ಗೌಡರಿಗೆ ಅಪಾರವಾದ ಒಲವಿತ್ತು. ಆ ಕಾಲಕ್ಕೆ 'ದಿ ಗ್ರಾಜ್ಯುಯೇಟ್ಸ್ ಟ್ರೇಡಿಂಗ್ ಅಸೋಸಿಯೇಷನ್’ ಎಂಬ ಪ್ರಕಾಶನ ಸಂಸ್ಥೆಯನ್ನು ಆರಂಭಿಸಿದ್ದು ಕನ್ನಡ ಪ್ರಕಾಶನ ಇತಿಹಾಸದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಆ ಕಾಲದಲ್ಲಿ ದಕ್ಷನ್ಯಾಯಾಧೀಶರಾಗಿ, ಪ್ರತಿಭಾವಂತರಾಗಿದ್ದವರು.
ಗೌಡರು ಇಂಗ್ಲೀಷ್ ಸಾಹಿತ್ಯವನ್ನು ಆಳವಾಗಿ ಅಧ್ಯಯನ ಮಾಡುವುದರ ಜೊತೆಗೆ ಪ್ರಾಚೀನ ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದ್ದರು. ಪತ್ರಿಕೋದ್ಯಮ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಗೌಡರನ್ನು ಬಹಳವಾಗಿ ಆಕರ್ಷಿಸಿದ ಸಾಹಿತಿ ಶೇಕ್ಸ್ಪಿಯರ್. 'ಪ್ರತಾಪ ರುದ್ರದೇವ’, 'ಪ್ರಮೀಳಾರ್ಜುನೀಯ’ ಇವರ ರೂಪಾಂತರ ನಾಟಕಗಳು. ಇಂಗ್ಲೀಷ್‍ನ 'ಚಿಕ್ಕಬಣಜಿಗರು’, 'ಕನ್ಯಾವಿತ್ತಂತ್ತು’ ಎಂಬ ಎರಡು ಕಾದಂಬರಿಗಳನ್ನು ರೂಪಾಂತರಿಸಿದ್ದರು. 'ಸೀತಾ ಸ್ವಯಂವರ’ ಎಂಬ ನಾಟಕ ಮತ್ತು 'ಭವಾನಿಬಾಳು’ ಎಂಬ ಕಾದಂಬರಿಗಳು ಇವರ ಸ್ವತಂತ್ರ ರಚನೆಗಳು. 'ಚಾಮನೃಪಚಂದ್ರಪ್ರಭೆ’ ಎಂಬ ಕಾವ್ಯವನ್ನು ರಚಿಸಿದ್ದರು. ಗೌಡರು ಕನ್ನಡ ಜಾನಪದದ ದೇಶೀಯ ಮೊದಲ ವಿದ್ವಾಂಸರಾಗಿ 'ಜಾನಪದ ಮುಂಗೋಳಿ’ ಎನಿಸಿದ್ದರು.
ಮಂಡ್ಯದ ಕರ್ನಾಟಕ ಸಂಘವು ಇವರ ಹೆಸರಿನಲ್ಲಿ ಹಂಪಿ ವಿ.ವಿ.ಯಿಂದ ಮಾನ್ಯತೆ ಪಡೆದು ಎಂ.ಎಲ್.ಶ್ರೀಕಂಠೇಶಗೌಡ ಸಂಶೋಧನಾ ಕೇಂದ್ರವನ್ನು 2010ರಲ್ಲಿ ಪ್ರಾರಂಭಿಸಿ ನಡೆಸಿಕೊಂಡು ಬರುತ್ತಿದೆ.
Great scholar and jurist M. L. Srikantesha Gowda
ಮಂಡ್ಯ ಜಿಲ್ಲೆ ಮದ್ದೂರ್ ತಾಲೂಕು ದೇಶ ಹಳ್ಳಿಯ ಇಬ್ಬರು ಸುಪುತ್ರ ರಲ್ಲಿ ಕನ್ನಡದ ಶೇಕ್ಸ್ಪಿಯರ್ ಎಂದೆ ಹೆಸರಾದ ಎಂಎಲ್ ಶ್ರೀಕಂಠೇಶ ಗೌಡರು ಒಬ್ಬರು ಮತ್ತೊಬ್ಬರು ನಾಡೋಜ ಡಾಕ್ಟರ್ ದೇಶಹಳ್ಳಿ ಜಿ ನಾರಾಯಣ್ ಅವರು ಇಬ್ಬರು ನಮ್ಮ ಹಳ್ಳಿಯ ಕೀರ್ತಿಪತಾಕೆಯನ್ನು ನಾಡಿನಾದ್ಯಂತ ಹಾರಿಸಿರುವ ಕೀರ್ತಿಶೇಷ ರು
ಪ್ರತ್ಯುತ್ತರಅಳಿಸಿಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ jayakumarcsj@gmail.com
ಪ್ರತ್ಯುತ್ತರಅಳಿಸಿ