ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಲೆಂ ಐಂಥೊವೆನ್


 ವಿಲೆಂ ಐಂಥೊವೆನ್ 


ನೊಬೆಲ್ ಪುರಸ್ಕೃತ ವಿಜ್ಞಾನಿ ವಿಲೆಂ ಐಂಥೊವೆನ್ ಎಲೆಕ್ಟ್ರೊ ಕಾರ್ಡಿಯೋಗ್ರಾಫ್ ಸಾಧನವನ್ನು ಕಂಡು ಹಿಡಿದು ಜಗಕ್ಕುಪಕರಿಸಿದ ಮಹನೀಯರು.

ವಿಲೆಂ ಐಂಥೊವೆನ್ 1860ರ ಮೇ 21ರಂದು ಇಂಡೋನೇಷ್ಯಾದ ಸೆಮರಂಗ್ ಎಂಬಲ್ಲಿ ಜನಿಸಿದರು.

ವಿಲೆಂ ಐಂಥೊವೆನ್ ಲೀಡನ್ ವಿಶ್ವವಿದ್ಯಾನಿಲಯದಲ್ಲಿ ಅಂಗರಚನಾವಿಜ್ಞಾನದ ಪ್ರಾಧ್ಯಾಪಕರಾದರು. ಅವರ ಆಸಕ್ತಿ ಭೌತವಿಜ್ಞಾನದಲ್ಲೂ ಇತ್ತು.  ಇವರು ನಿರಂತರ ಆಧ್ಯಯನ ಪರಿಶ್ರಮಗಳಿಂದ ಗುಂಡಿಗೆಯ ವಿದ್ಯುದ್ವಿಭವಗಳಲ್ಲಿ ಉಂಟಾಗುವ ಸೂಕ್ಷ್ಮತಮ ವ್ಯತ್ಯಾಸಗಳನ್ನು ಗುರುತಿಸುವ ಎಲೆಕ್ಟ್ರೊ ಕಾರ್ಡಿಯೋಗ್ರಾಫ್ ಸಾಧನವನ್ನು ಕಂಡು ಹಿಡಿದರು. ಇದಕ್ಕಾಗಿ ಇವರಿಗೆ 1924ರಲ್ಲಿ ನೊಬೆಲ್ಪಾರಿತೋಷಕ ಸಂದಿತು. 

ಗುಂಡಿಗೆಯಲ್ಲೇಳುವ ವಿದ್ಯುತ್ತಿನ ವಿಚಾರದಲ್ಲಿ ಮೊದಲಿನಿಂದಲೂ ಬಲು ಆಸಕ್ತರಾಗಿದ್ದ ಐಂಥೊವೆನ್, ಗುಂಡಿಗೆ ಬಡಿದುಕೊಳ್ಳುವಾಗ ಏಳುವ ವಿದ್ಯುತ್ತಿನ ಸೂಕ್ಷ್ಮತಮ ವಿದ್ಯುದ್ವಿಭವ ವ್ಯತ್ಯಾಸಗಳನ್ನು ತೋರುವ ದಾರದ ಗ್ಯಾಲ್ವನೊಮೀಟರನ್ನು ಕಂಡುಹಿಡಿದರು. ಅದು ಸೂಚಿಸುವ ವ್ಯತ್ಯಾಸಗಳನ್ನು ಗುರುತಿಸುವ ಯಂತ್ರಸಾಧನವಾಗಿ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಸುಮಾರು 20 ವರ್ಷಗಳ ಕಾಲ ಬಳಕೆಯಲ್ಲಿತ್ತು. ಹೀಗೆ ಗುರುತಿಸಿದ ಚಿತ್ರವನ್ನು ಗುಂಡಿಗೆಯ ತಂತಿ ಸುದ್ದಿ ಎಂದು ಅವರು ಕರೆಯುತ್ತಿದ್ದರು. ಇದೇ ಅಲ್ಲದೆ ಇದನ್ನು ಚಿತ್ರಿಸಲು ಮೈಯಲ್ಲಿ ತಂತಿಗಳನ್ನು ಎಲ್ಲೆಲ್ಲಿ ತಗುಲಿಸಬೇಕೆಂದೂ ಇವರು ನಿರ್ಧರಿಸಿದ್ದು ಈಗಲೂ ಜಾರಿಯಲ್ಲಿದೆ. ಇಂದು ಬಳಕೆಯಲ್ಲಿರುವ ಸುಧಾರಿತ ಎಲೆಕ್ಟ್ರೊಕಾರ್ಡಿಯೋಗ್ರಾಫ್ ಕೂಡ ಇದೇ ಮಾದರಿಯದು.

ವಿಲೆಂ ಐಂಥೊವೆನ್ 1927ರ ಸೆಪ್ಟೆಂಬರ್ 29ರಂದು ನೆದರ್ಲ್ಯಾಂಡಿನ ಲೀಡೆನ್ ಎಂಬಲ್ಲಿ ನಿಧನರಾದರು.

On the birth anniversary great physician and physiologist Willem Einthoven

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ