ರಾಘವನ್ ಚಕ್ರವರ್ತಿ
ರಾಘವನ್ ಚಕ್ರವರ್ತಿ
ರಾಘವನ್ ಚಕ್ರವರ್ತಿ ನಮ್ಮ ನಡುವಿನ ಅದ್ಭುತ ಬರಹಗಾರರು. ಅವರ ಬರಹಗಳನ್ನು ನಾನು ಹೆಚ್ಚು ಕಂಡಿರುವುದು ಫೇಸ್ಬುಕ್ ಹಾಗೂ ಅಂತರಜಾಲ ತಾಣಗಳಾದ ಋತುಮಾನ, ಅವಧಿ, ನಾನುಗೌರಿ, ಕನ್ನಡ ಒನ್ ಇಂಡಿಯಾ ಮುಂತಾದೆಡೆಗಳಲ್ಲಿ. ಇಂದು ರಾಘವನ್ ಚಕ್ರವರ್ತಿ ಅವರ ಜನ್ಮದಿನ.
ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ರಾಘವನ್ ಚಕ್ರವರ್ತಿ ಸಾಹಿತ್ಯ, ಸಂಸ್ಕೃತಿ, ಸಿನಿಮಾ, ರಾಜಕಾರಣಗಳ ಕುರಿತು ಗಾಢ ಆಸಕ್ತಿ ಮತ್ತು ಒಳನೋಟಗಳನ್ನು ಹೊಂದಿರುವುದು ಅವರ ಬರಹಗಳಲ್ಲಿ ಎದ್ದುಕಾಣುತ್ತದೆ. ಬರವಣಿಗೆ ಅವರ ವೃತ್ತಿಯಲ್ಲದಿದ್ದರೂ, ತಮ್ಮ ಬರಹಗಳಲ್ಲಿ ಅವರು ತೋರುವ ವಸ್ತುನಿಷ್ಠ ಆಳ, ಇಂದು ವೃತ್ತಿಪರ ಬರವಣಿಗೆಗಳಲ್ಲೂ ಬಹುತೇಕ ಮರೆಯಾಗಿ ಹೋಗಿರುವಂತದ್ದು.
ರಾಘವನ್ ತಮ್ಮ ನೆನಪಿನಿಂದ ಕಳೆದ 4 ದಶಕಗಳ ಬೆಳವಣಿಗೆಗಳನ್ನು ಹೆಕ್ಕುತ್ತಾ ವರ್ತಮಾನವನ್ನು ವಿಶ್ಲೇಷಿಸುವುದರಲ್ಲಿ ವಿಶಿಷ್ಟರಾಗಿದ್ದಾರೆ. ಫೇಸ್ಬುಕ್ನಲ್ಲೇ ಆಗಲಿ, ಇತರೆ ಅಂತರಜಾಲದಲ್ಲಿ ಕಾಣುವ ಎಲ್ಲೇ ಆಗಲಿ, ಅವರ ದೀರ್ಘವಾದ ಬರಹಗಳು ವಿಸ್ಮಯವೆನಿಸುವಂತೆ ಮಾಡುತ್ತವೆ. ಸತ್ಯಜಿತ್ ರೇ, ಎಚ್. ನರಸಿಂಹಯ್ಯ, ರಾಜ್‍ಕುಮಾರ್, ಕ್ರಿಕೆಟ್, ತುರ್ತುಪರಿಸ್ಥಿತಿ, ತಮಿಳು-ತೆಲುಗು-ಹಿಂದೀ-ಬಂಗಾಳಿ-ಮಲಯಾಳಿ-ಇಂಗ್ಲಿಷ್-ಜಪಾನ್ ಯಾವುದೇ ಚಿತರಂಗದ ಯಾವುದೇ ವ್ಯಕ್ತಿ, ಕಮರ್ಷಿಯಲ್ - ಆರ್ಟ್ ಸಿನಿಮಾ ಹೀಗೆ ಏನೇ ಆಗಲಿ ಅವರು ಅದರಾಳಕ್ಕೆ ಪಾತಾಳ ಗರಡಿ ಇಳಿಸಿ ಹೆಕ್ಕಿ ತೆಗೆದಿಡುವ ವಿಷಯ ಪ್ರಸ್ತುತಿ ಒಲವಿನ ಮೂಸೆಯಿಂದ ಮಾತ್ರ ಮೂಡಲು ಸಾಧ್ಯ ಇರುವಂತದ್ದು.
ಸದಭಿರುಚಿಯ ಉತ್ತಮ ಬರಹಗಾರರಾದ ರಾಘವನ್ ಚಕ್ರವರ್ತಿ ಅವರ ಬದುಕು ಸುಂದರವಾಗಿರಲಿ ಎಂದು ಹಾರೈಸುತ್ತಾ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳನ್ನು ಹೇಳೋಣ.
Happy birthday Raghavan Chakrvarthy Sir
ಕಾಮೆಂಟ್‌ಗಳು