ಎ. ಎಸ್. ಚಂದ್ರಮೌಳಿ
ಎ. ಎಸ್. ಚಂದ್ರಮೌಳಿ
ಎ. ಎಸ್. ಚಂದ್ರಮೌಳಿ ಅವರು ದೇಶ ವಿದೇಶಗಳಲ್ಲಿ ಉನ್ನತ ವ್ಯಾಸಂಗ ನಡೆಸಿ, ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಹಿರಿಯ ಹುದ್ದೆಗಳನ್ನು ನಿರ್ವಹಿಸಿದವರು. ಅವರು ಶಿಕ್ಷಣ ಕ್ಷೇತ್ರದಲ್ಲೂ ಅಪಾರ ಸೇವೆ ಸಲ್ಲಿಸಿದವರು.
ಚಂದ್ರಮೌಳಿಯವರು ತಮ್ಮ ಆಕಾಶವಾಣಿಯ ಶ್ರೋತೃ ಸಂಶೋಧನಾ ಅಧ್ಯಯನಕ್ಕಾಗಿ ರಾಷ್ಟ್ರೀಯ ಪುರಸ್ಕಾರ ಗಳಿಸಿದ್ದವರು. ಆಕಾಶವಾಣಿಯ ಹಲವು ತಲೆಮಾರುಗಳು ಅವರ ಸೇವೆ, ಸೌಹಾರ್ದ, ಸರಳತೆ ಮತ್ತು ಆಪ್ತಗುಣಗಳನ್ನು ಗೌರವದಿಂದ ಸ್ಮರಿಸುವುದನ್ನು ಕೇಳಿದ್ದೇನೆ.
ನನ್ನ ಕೆಲಸವನ್ನು ನಿರಂತರ ಪ್ರೋತ್ಸಾಹಿಸುತ್ತಿರುವ ಹಿರಿ ಆತ್ಮೀಯರೂ ಆದ ಎ. ಎಸ್. ಚಂದ್ರಮೌಳಿ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. 🎂🎉🍰🎁🍦💐😊.
ನಿಮ್ಮ ಆಶೀರ್ವಾದ ಬೆಂಬಲ ಸದಾ ಇರಲಿ. ನಮಸ್ಕಾರ 🌷🙏🌷
Happy birthday A S S Chandra Mouli Sir 🌷🙏🌷
ಕಾಮೆಂಟ್‌ಗಳು