ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಚಾರಿ ವಿಜಯ್


 ಸಂಚಾರಿ ವಿಜಯ್ 


ಇಂದು ಸಂಚಾರಿ ವಿಜಯ್ ಅವರು ತಮ್ಮ ಜನ್ಮದಿನ ಆಚರಿಸಬೇಕಿತ್ತು. 

ಬಿ. ವಿಜಯ್ ಕುಮಾರ್ 1983ರ ಜುಲೈ 17ರಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿನ ಪಂಚನಹಳ್ಳಿಯಲ್ಲಿ  ಜನಿಸಿದರು.  

ಸಂಚಾರಿ ರಂಗತಂಡದ ಮೂಲಕ ರಂಗಭೂಮಿಯಲ್ಲಿ ಸಕ್ರಿಯರಾದ ವಿಜಯ್ 2011ರಲ್ಲಿ ತೆರೆಕಂಡ 'ರಂಗಪ್ಪ ಹೊಗ್ಬಿಟ್ನಾ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು.

ವಿಜಯ್ 'ನಾನು ಅವನಲ್ಲ ಅವಳು' ಚಿತ್ರದ ಅಭಿನಯಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳನ್ನು ಗಳಿಸಿದ್ದರು.

ದಾಸವಾಳ, ರಾಮ ರಾಮ ರಘು ರಾಮ, ಹರಿವು, ಒಗ್ಗರಣೆ, ಕಿಲ್ಲಿಂಗ್ ವೀರಪ್ಪನ್, ಸಿನಿಮಾ ಮೈ ಡಾರ್ಲಿಂಗ್, ಸಿಪಾಯಿ, ರಿಕ್ತ, ಅಲ್ಲಮ, ಮಾರಿಕೊಂಡವರು, ನನ್ ಮಗಳೇ ಹೀರೋಯಿನ್, ಅವ್ಯಕ್ತ, ವರ್ತಮಾನ, ಕೃಷ್ಣ ತುಳಸಿ, ಪಾದರಸ, ನಾತಿಚರಾಮಿ, ಆಡುವ ಗೊಂಬೆ, ಜಂಟಲ್‍ಮ್ಯಾನ್, ಆಕ್ಟ್  1978 ಮುಂತಾದವು ವಿಜಯ್ ಅವರ ಇದುವರೆಗೆ ಬಿಡುಗಡೆಯಾಗಿರುವ ಇತರ ಚಿತ್ರಗಳಲ್ಲಿ ಸೇರಿವೆ. ಅವರು ಇತರ ಭಾಷೆಗಳ ಚಿತ್ರರಂಗದಲ್ಲೂ ಕೆಲಸ ಮಾಡುತ್ತಿದ್ದರು.

ವಿಜಯ್ ನಟನಾಗಿದ್ದರೂ ಕೊರೊನಾ ಪೀಡಿತರಿಗಾಗಿ ಸಹಾಯ ಮಾಡುತ್ತಾ ಕೆಲಸ ಮಾಡುತ್ತಿದ್ದರು. 

ವಿಜಯ್, 2021ರ ಜೂನ್ 12ರಂದು ನಡೆದ ಅಪಘಾತದ ದೆಸೆಯಿಂದ 2021ರ ಜೂನ್ 15ರಂದು ನಿಧನರಾದರು.  ಸಾವಿನಲ್ಲೂ ಅವರ ಅಂಗಾಂಗಳ ದಾನಕ್ಕೆ ಏರ್ಪಾಡಾಯಿತು.

ಇಷ್ಟು ಸಣ್ಣ ವಯಸ್ಸು ಇನ್ನೂ ನಾವು ಅವರ ಹೆಚ್ಚಿನ ಸಾಧನೆ ಕಾಣಬಹುದು ಎಂದುಕೊಂಡಿದ್ದಾಗ ಹೀಗೆ ಸಂಚಾರ ಮುಗಿಸಿಬಿಟ್ಟರು ಬೇಗ ಹೊರಟುಬಿಟ್ಟರು ವಿಜಯ್.

On the birth anniversary of Sanchari Vijay

ಕಾಮೆಂಟ್‌ಗಳು



  1. ಇಲ್ಲಿ ಸಿಗುವಂತ ಮಾಹಿತಿಗಳು ನಿಜಕ್ಕೂ ಉಪಯುಕ್ತವಾಗಿವೆ. ಬಹಳಷ್ಟು ಸಮಯ ಏನಾದರು ಹೆಚ್ಚಿನ ಮಾಹಿತಿ, ದಿನ ವಿಶೇಷ, ವ್ಯಕ್ತಿ ಪರಿಚಯಕ್ಕೆ ಸಂಬಂಧಿಸಿದಂತೆ ಇಲ್ಲಿಯೇ ಮಾಹಿತಿಯನ್ನು ಪಡೆಯುತ್ತಿರುತ್ತೇನೆ.ಶಾಲೆಯಲ್ಲಿ ಪಾಠ ಮಾಡುವಾಗ, ರೇಡಿಯೋದಲ್ಲಿ ಒಂದಿಷ್ಟು ಕಾರ್ಯಕ್ರಮ ನೀಡಲು ಬಹಳಷ್ಟು ವಿಚಾರ ತಿಳಿದುಕೊಳ್ಳಲು ಸಹಕಾರಿಯಾಗಿದೆ ನಿಮಗೆ ನಿಮ್ಮ ತಂಡಕ್ಕೆ ತುಂಬು ಹೃದಯದ ಧನ್ಯವಾದಗಳು
    ಚೇತನ್ ಸಿ ರಾಯನಹಳ್ಳಿ

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ