ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ರಾಧಾಕೃಷ್ಣನ್


 ಕೆ. ರಾಧಾಕೃಷ್ಣನ್


ಡಾ. ಕೆ. ರಾಧಾಕೃಷ್ಣನ್ ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಅಧ್ಯಕ್ಷರಾಗಿ ಮಹತ್ವದ ಸೇವೆ ಸಲ್ಲಿಸಿದವರು.  ಈ ಮಹನೀಯರ ನೇತೃತ್ವದಲ್ಲಿ ಇಸ್ರೋ ಚಂದ್ರಯಾನ ಮತ್ತು ಮಂಗಳಯಾನದಂತಹ ಯೋಜನೆಗಳಲ್ಲಿ ಯಶಸ್ಸು ಕಂಡಿತು.  

ಕೊಪ್ಪಿಲ್ಲಿಲ್ ರಾಧಾಕೃಷ್ಣನ್ ಕೇರಳದ ಇರಿಂಜಾಲಕುಡ ಎಂಬಲ್ಲಿ 1949ರ ಆಗಸ್ಟ್ 29ರಂದು ಜನಿಸಿದರು. 

ರಾಧಾಕೃಷ್ಣನ್ ಕೇರಳ ವಿಶ್ವವಿದ್ಯಾನಿಲಯದಿಂದ (1970) ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವಿ ಮತ್ತು ಬೆಂಗಳೂರಿನ ಭಾರತೀಯ ಮ್ಯಾನೇಜ್ಮೆಂಟ್ ಸಂಸ್ಥೆಯಿಂದ ತಮ್ಮ ಪಿಜಿಡಿಎಮ್ಎಂ ಪೂರ್ಣಗೊಳಿಸಿದರಲ್ಲದೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗ್ಪುರದಿಂದ "ಭಾರತೀಯ ಭೂ ವೀಕ್ಷಣೆಯ ವ್ಯವಸ್ಥೆ ಕೆಲವು ಕಾರ್ಯವಿಧಾನಗಳು" ಕುರಿತ ಪ್ರಬಂಧಕ್ಕೆ ಡಾಕ್ಟೊರೇಟ್ ಗಳಿಸಿದರು. ಕಥಕ್ಕಳಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿಯೂ ಅವರಿಗೆ ಪರಿಶ್ರಮವಿತ್ತು. 

ರಾಧಸಕೃಷ್ಣನ್ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಲ್ಲಿ ಏವಿಯಾನಿಕ್ಸ್ ಇಂಜಿನಿಯರ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು, ಅವರು ಬಾಹ್ಯಾಕಾಶ ಉಡಾವಣಾ ಯೋಜನೆಗಳಲ್ಲಿ ಮಹತ್ವದ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅವರು ಭಾರತೀಯ ಸಾಗರ ಮಾಹಿತಿ ಸೇವೆಗಳ ರಾಷ್ಟ್ರೀಯ ಕೇಂದ್ರದ ಯೋಜನಾ ನಿರ್ದೇಶಕರಾಗಿದ್ದರು. ಅವರು ಇಂಟರ್ಗವರ್ನಮೆಂಟಲ್ ಓಷನೋಗ್ರಫಿಕ್ ಕಮಿಷನ್‍ನ ಉಪಾಧ್ಯಕ್ಷರಾಗಿದ್ದರು. ಹಿಂದೂ ಮಹಾಸಾಗರದ ಜಾಗತಿಕ ಸಾಗರ ವೀಕ್ಷಣಾ ವ್ಯವಸ್ಥೆಯ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. 

ರಾಧಾಕೃಷ್ಣನ್ 2006ರಿಂದ ಬಾಹ್ಯಾಕಾಶದ ಶಾಂತಿಯುತ ಬಳಕೆ ಕುರಿತ ವಿಶ್ವಸಂಸ್ಥೆ ಸಮಿತಿಯ ಭಾರತೀಯ ನಿಯೋಗದ ಸಕ್ರಿಯ ಸದಸ್ಯರಾಗಿದ್ದರು. ಅವರು 2001-2005 ಅವಧಿಯಲ್ಲಿ ಯುನೆಸ್ಕೋದ ಅಂತರ ಸರ್ಕಾರಿ ಸಮುದ್ರಶಾಸ್ತ್ರೀಯ ಆಯೋಗದ ಉಪಾಧ್ಯಕ್ಷರಾಗಿದ್ದರು. 

ರಾಧಾಕೃಷ್ಣನ್ ಅವರು ಅಕ್ಟೋಬರ್ 30 2009ರಂದು ಇಸ್ರೋ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ 2014ರ ವರೆಗಿನ ತಮ್ಮ ಸೇವಾ ಅವಧಿಯಲ್ಲಿ ಆ ಹಿಂದಿನ ಇಸ್ರೋ ಸಾಧನೆಗಳ ಘನತೆಗೆ ತಕ್ಕಹಾಗೆ ಕಾರ್ಯಯೋಜನೆಗಳನ್ನು ಮುಂದುವರೆಸಿ,  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿ ನಿರಂತರವಾಗಿರುವಂತೆ ಕಾರ್ಯನಿರ್ವಹಿಸಿದರು. ಹೀಗೆ ಇಸ್ರೋ ಚಂದ್ರಯಾನ ಮತ್ತು ಮಂಗಳಯಾನದಂತಹ ಯೋಜನೆಗಳಲ್ಲಿ ಯಶಸ್ಸು ಕಂಡಿತು.  ಮಾನವ ಸಹಿತ ಸಾಮರ್ಥ್ಯವಿರುವ ವ್ಯೋಮನೌಕೆಯನ್ನು ಯಶಸ್ವಿಯಾಗಿ ಪ್ರಯೋಗ ಮಾಡುವ ಮೂಲಕ ಮಾನವ ಸಹಿತ ವ್ಯೋಮನೌಕೆ ಹೊಂದಿರುವ ರಾಷ್ಟ್ರಗಳ ಪಟ್ಟಿಗೆ ಭಾರತ ಸೇರ್ಪಡೆಯಾಯಿತು. 

ರಾಧಾಕೃಷ್ಣನ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ. 

On the birthday of former chief of Indian Space Commission Dr. K. Radhakrishnan 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ