ಜನಾರ್ಧನ ತುಂಗ
ಜನಾರ್ಧನ ತುಂಗ
ಜನಾರ್ಧನ ತುಂಗ ಅವರು ಹಿರಿಯ ಕಾರ್ಮಿಕ ನಾಯಕರಾಗಿ, ರಾಷ್ಟ್ರೀಯವಾದಿ ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು.
ಜನಾರ್ಧನ ತುಂಗ ಅವರು 1957ರ ಆಗಸ್ಟ್ 29ರಂದು ಜನಿಸಿದರು. ಕೋಟದ ಮೂಲದವರಾದ ಇವರು ವಿದ್ಯಾಭ್ಯಾಸದ ನಂತರದಲ್ಲಿ ಬ್ಯಾಂಕ್ ಆಫ್ ಬರೋಡದಲ್ಲಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ.
ಕಾರ್ಮಿಕರ ಪರವಾದ ಮತ್ತು ಅಸಹಾಯಕರ ಶೋಷಣೆಗಳ ವಿರುದ್ಧದ ಸಂಘಟನೆಯಲ್ಲಿ ನಿರಂತರವಾಗಿ ಸಕ್ರಿಯ ಪಾತ್ರವಹಿಸಿರುವ ಜನಾರ್ಧನ ತುಂಗರು ಆ ಕುರಿತಾಗಿ ಅನೇಕ ಬರಹಗಳನ್ನು ಮಾಡಿದ್ದಾರೆ.
ಜನಾರ್ಧನ ತುಂಗ ಅವರ ಸಾಹಿತ್ಯ ಮತ್ತು ತತ್ವಶಾಸ್ತ್ರದಲ್ಲಿನ ಓದು ಮತ್ತ ಆಸಕ್ತಿಗಳು ಆಳವಾದದ್ದು ಮತ್ತು ವಿಶಾಲವ್ಯಾಪ್ತಿಯ ನೆಲೆ ಉಳ್ಳದ್ದು. ಅವರ ಅನೇಕ ವ್ಯಕ್ತಿ ಚಿತ್ರಣಗಳು, ವಿಮರ್ಶೆ ಮತ್ತು ತಾತ್ವಿಕ ನೆಲೆಯ ಬರಹಗಳು ಆಪ್ತವೆನಿಸುವಂತಿದ್ದು, ನಾಡಿನ ಅನೇಕ ಪತ್ರಿಕೆಗಳು ಮತ್ತು ಅಂತರಜಾಲ ಸಂವಹನ ಮಾಧ್ಯಮಗಳಲ್ಲಿ ಕಂಗೊಳಿಸುತ್ತಿವೆ. ಭಾರತೀಯ ಸಮಾಜಕ್ಕೆ ಹಲವು ಶತಮಾನಗಳಿಂದ ಇಂದಿನವರೆಗೆ ದುಡಿದಿರುವ ಅನೇಕ ಶ್ರೇಷ್ಠರನ್ನು ಪರಿಚಯಿಸಿರುವ ಇವರ ಕೃತಿ 'ಸ್ತಂಭದೀಪಿಕೆ' ಮನಸೆಳೆಯುವಂತದ್ದಾಗಿದೆ.
ಆತ್ಮೀಯ ಸಹೃದಯಿ ಪ್ರಾಜ್ಞ ಬರಹಗಾರರಾದ ಜನಾರ್ಧನ ತುಂಗರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday K Janardhana Thunga Thunga 🌷🙏🌷
ಕಾಮೆಂಟ್‌ಗಳು