ಕೃಷ್ಣಾಷ್ಟಮಿ
ಶ್ರಾವಣ ಬಹುಳಾಷ್ಟಮಿ ನಡುರಾತ್ರಿಯಲ್ಲಿ
ರೋಹಿಣೀ ನಕ್ಷತ್ರ ಶುಭಲಗ್ನದಲ್ಲಿ
ಕಾಮಜನಕನು ಕೃಷ್ಣ ಜನಿಸಿದನೆಂದು
ದೇವಕೀಯರು ಪಾಡಿ ತೂಗ್ಯಾರೋ ಕೃಷ್ಣಾ..... ಲಾಲೀ...
ಆಕಾಶವೇ ಮೇಲು ಮಂಟಪದ ಕಟ್ಟು
ಬೇಕಾದ ನಕ್ಷತ್ರ ಮಾಲೆಯೊಳ ವಟ್ಟು
ವಾಗ್ದೇವಿರಮಣ ನಿಮ್ಮುದರದೊಳಗಿಮ್ಮಟ್ಟು
ಯಾಕಯ್ಯ ತೊಟ್ಟಿಲೊಳು ಮಲಗಿಹೆಯೋ ಕೃಷ್ಣಾ, ಲಾಲೀ....
ಎಡದ ಹಸ್ತದಲ್ಲಿ ಹಿಡಿದ ಹಾವನೆ ಕಂಡು
ಕಡುಚೆಲ್ವ ನಾರಿಯರು ಬೆದರಿ ಬೆಂಡಾಗಿ ನಿಂತು
ಕಡಗ ಕಂಕಣ ತೋಳು ನಳಿ ತೋಳು ಜಾರಿ
ಪಿಡಿದ ತೊಟ್ಟಿಲು ಜಾರಿ ತೂಗ್ಯಾರೊ ಕೃಷ್ಣ, ಲಾಲೀ...
ಲಾಲಿ ಹಯವದನ ಲಾಲಿ ರಂಗ ವಿಠ್ಠಲ
ಲಾಲಿ ಗೋಪೀತನಯ ಲಾಲಿ ಶ್ರೀನಾಥ ಲಾಲಿ, ಲಾಲೀ....
ಕಾಮೆಂಟ್‌ಗಳು