ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಮಲಾ

 


ಅಮಲಾ

ಅಮಲಾ ಅಂದರೆ ಮೊದಲು ನೆನಪಾಗೋದು 'ಪುಷ್ಪಕ ವಿಮಾನ'ದ ಸುಂದರ ನಗುಮುಖ.  ಆಕೆ ರವಿಚಂದ್ರನ್ ಜೊತೆ ಅಭಿನಯಿಸಿದ 'ಸ್ವಾತಿ ಮುತ್ತಿನ ಮಳೆ ಹನಿಯೊ' ಗೀತೆ ಸಹಾ ಜನಪ್ರಿಯ.  ಅಭಿನೇತ್ರಿಯಾಗಿ, ಭರತನಾಟ್ಯ ಕಲಾವಿದೆಯಾಗಿ, ಪ್ರಾಣಿ ಸಂರಕ್ಷಣಾ ಕಾರ್ಯಕರ್ತೆಯಾಗಿ ಅವರು ಹೆಸರಾಗಿದ್ದಾರೆ.

ಅಮಲಾ 1967ರ ಸೆಪ್ಟೆಂಬರ್ 12ರಂದು ಕೋಲ್ಕತ್ತಾದಲ್ಲಿ ಜನಿಸಿದರು.  ತಂದೆ ಬಂಗಾಳಿ ಮೂಲದ ನೌಕಾದಳದ ಅಧಿಕಾರಿ. ತಾಯಿ ಐರಿಷ್ ಜನಾಂಗದವರು 

ಲಲಿತ ಕಲಗಳಲ್ಲಿ ಪದವಿ ಪಡೆದ ಅಮಲಾ ಚೆನ್ನೈನ ಕಲಾಕ್ಷೇತ್ರದಲ್ಲಿ ನೃತ್ಯ ಕಲಿತರು.  ವಿಶ್ವದಾದ್ಯಂತ ಅವರು ಭರತನಾಟ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. 

ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ನಿರ್ದೇಶಕ ಟಿ. ರಾಜೇಂದರ್ ಅವರ 'ಮೈಥಿಲಿ ಎನ್ನೈ ಕಾದಲಿ' ಎಂಬ ಯಶಸ್ವೀ ಚಿತ್ರದ ನಾಯಕಿಯಾದ ಅಮಲಾ ಮುಂದೆ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯ ಅನೇಕ ಚಿತ್ರಗಳಲ್ಲಿ ನಟಿಸಿದರು.

ನಿರ್ಣಯಂ, ಶಿವ ಮುಂತಾದ ಯಶಸ್ವೀ ತೆಲುಗು ಚಿತ್ರಗಳಲ್ಲಿ ನಾಗಾರ್ಜುನ ಅವರೊಡನೆ ನಟಿಸಿದ ಅಮಲಾ ಮುಂದೆ ಅವರನ್ನೇ ವರಿಸಿದರು.  ಮಲಯಾಳಂನ 'ಉಳ್ಲದಕ್ಕಂ' ಮತ್ತು ತೆಲುಗಿನ 'ಲೈಫ್ ಈಸ್ ಬ್ಯೂಟಿಫುಲ್' ಅವರಿಗೆ ಪ್ರಶಸ್ತಿ ತಂದವು. 

ಬ್ಲೂ ಕ್ರಾಸ್ ಆಫ್ ಹೈದರಾಬಾದ್ ಎಂಬ ಎನ್‍ಜಿಓ ನಿರ್ಮಿಸಿ ಪ್ರಾಣಿ ಸಂರಕ್ಷಣಾ ವಿಚಾರಗಳಲ್ಲಿ ಆಸಕ್ತಿ ತಳೆದಿರುವ ಅಮಲಾ ಆಗೊಮ್ಮೆ ಈಗೊಮ್ಮೆ ಅಪರೂಪಕ್ಕೆ ಕಿರುತೆರೆ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಅಮಲಾ ಅವರು ಕನ್ನಡದಲ್ಲಿ ನಟಿಸಿದ ಚಿತ್ರಗಳಲ್ಲಿ ಪುಷ್ಪಕ ವಿಮಾನ, ಬಣ್ಣದ ಗೆಜ್ಜೆ, ಕ್ಷೀರ ಸಾಗರ, ಬೆಳ್ಳಿಯಪ್ಪ ಬಂಗಾರಪ್ಪ ಸೇರಿವೆ.

On the birthday of actress Amala

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ