ಎಂ. ಎಫ್. ಹುಸೇನ್
ಎಂ. ಎಫ್. ಹುಸೇನ್
ಮಕ್ಬೂಲ್ ಫಿದಾ ಹುಸೇನ್ ಮಹಾನ್ ಕಲಾವಿದರಾಗಿ ಪ್ರಸಿದ್ಧರು. ಭಾರತದ ಪಾಬ್ಲೊ ಪಿಕಾಸೋ ಎಂಬ ಪ್ರಸಿದ್ಧಿ ಇವರದು.
ಎಂ. ಎಫ್. ಹುಸೇನ್ 1915ರ ಸೆಪ್ಟೆಂಬರ್ 17ರಂದು ಮಹಾರಾಷ್ಟ್ರದ ಪಂಡರಪುರದಲ್ಲಿ ಜನಿಸಿದರು.
ಹುಸೇನ್ 1940ರ ಸುಮಾರಿನಲ್ಲಿ ಕಲಾವಿದರಾಗಿ ಬೆಳಕಿಗೆ ಬಂದರು. ಫ್ರಾನ್ಸಿಸ್ ನ್ಯೂಟನ್ ಸೋಜ ಅವರು ಸ್ಥಾಪಿಸಿದ, ಪ್ರೋಗ್ರೆಸಿವ್ ಆರ್ಟಿಸ್ಟ್ ಗ್ರೂಪ್ಅನ್ನು 1947ರಲ್ಲಿ ಸೇರಿಕೊಂಡರು. 1952ರಲ್ಲಿ ಇವರ ಕಲಾಕೃತಿಗಳ ಪ್ರದರ್ಶನ ಜೂರಿಚ್ನಲ್ಲಿ ನಡೆಯಿತು. ಮುಂದೆ ಇವರ ಕಲಾಕೃತಿಗಳು ವಿಶ್ವದೆಲ್ಲಡೆ ಬೇಡಿಕೆ ಪಡೆದವು. ಅನೇಕ ಹರಾಜುಗಳಲ್ಲಿ ಇವರ ಚಿತ್ರಗಳನ್ನು ದುಬಾರಿ ಬೆಲೆಗೆ ಕೊಳ್ಳುವುದು ವಿಶ್ವದನೇಕ ಶ್ರೀಮಂತರಿಗೆ ಪ್ರತಿಷ್ಠೆಯ ವಿಚಾರವಾಯಿತು.
1967ರಲ್ಲಿ ಎಂ. ಎಫ್. ಹುಸೇನ್ ಮೊದಲನೆಯ ಚಲನಚಿತ್ರ 'ತ್ರೂ ದಿ ಐಸ್ ಆಫ್ ದಿ ಪೇಂಟರ್' ನಿರ್ಮಿಸಿದರು. ಇದು ಬರ್ಲಿನ್ ಚಲನಚಿತ್ರೋತ್ಸವದಲ್ಲಿ ಗೋಲ್ಡನ್ ಬೇರ್ ಗೆದ್ದುಕೊಂಡಿತು. ಎಂ.ಎಫ್. ಹುಸೇನ್ 1971ರಲ್ಲಿ ಸಾ ಪೌಲೋ ಬೈನಿಯಲ್ಗೆ, ಪಬ್ಲೋ ಪಿಕಾಸೋ ಅವರೊಂದಿಗೆ ಅಹ್ವಾನಿತ ವಿಶೇಷ ಅತಿಥಿಯಾಗಿದ್ದರು. ಮಾಧುರಿ ದೀಕ್ಷಿತ್ ಅಭಿನಯದ 'ಗಜಗಾಮಿನಿ' ಮತ್ತು ಟಬು ಅಭಿನಯದ 'ಮೀನಾಕ್ಷಿ: ಎ ಟೇಲ್ ಆಫ್ ಥ್ರೀ ಸಿಟೀಸ್' ಚಿತ್ರಗಳನ್ನು ಮೂಡಿಸಿದರು.
ಎಂ. ಎಫ್. ಹುಸೇನರಿಗೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ, ಕಾಳಿದಾಸ ಸಮ್ಮಾನ್, ರಾಜ್ಯಸಭಾ ಸದಸ್ಯತ್ವ ಮುಂತಾದ ಅನೇಕ ಗೌರವಗಳು ಸಂದವು.
ಎಂ.ಎಫ್.ಹುಸೇನ್ 2011ರ ಜೂನ್ 9ರಂದು ತಮ್ಮ ತೊಂಭತ್ತೈದನೆಯ ವಯಸ್ಸಿನಲ್ಲಿ ಲಂಡನ್ನಿನಲ್ಲಿ ನಿಧನರಾದರು.
On the birth anniversary of great artiste M. F. Hussain
ಕಾಮೆಂಟ್‌ಗಳು