ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ನವ್ರಾಟಿಲೋವಾ


 ಮಾರ್ಟಿನಾ ನವ್ರಾಟಿಲೋವಾ


ಮಾರ್ಟಿನಾ ನವ್ರಾಟಿಲೋವಾ ಟೆನ್ನಿಸ್ ಲೋಕದ ಮಹಾನ್ ತಾರೆ.  ಅವರಷ್ಟು ಸುದೀರ್ಘ ಕಾಲ ಉನ್ನತ ಸಾಧನೆಯನ್ನು ಮಾಡಿದವರು ಅಪರೂಪ.

ಮೂಲತಃ ಜೆಕೊಸ್ಲೊವಾಕಿಯಾದವರಾದ ಮಾರ್ಟಿನಾ ನವ್ರಾಟಿಲೋವಾ 1956ರ ಅಕ್ಟೋಬರ್ 18ರಂದು ಜನಿಸಿದರು. 

ಒಟ್ಟು 332 ವಾರಗಳವರೆಗೆ ಸಿಂಗಲ್ಸ್‌ನಲ್ಲಿ ವಿಶ್ವಟೆನ್ನಿಸ್ ರ್‍ಯಾಂಕಿಂಗ್ ಪಟ್ಟಿಯಲ್ಲಿ ವಿಶ್ವ ನಂ .1 ಆಗಿದ್ದ ಅವರು ಡಬಲ್ಸ್‌ನಲ್ಲಿ ದಾಖಲೆಯ 237 ವಾರಗಳ ಕಾಲ ನಂಬರ್ 1 ಆಗಿದ್ದರು.  ಹೀಗೆ ಇತಿಹಾಸದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ 200ಕ್ಕಿಂತ ಹೆಚ್ಚು ವಾರಗಳ ಕಾಲ ಅಗ್ರಸ್ಥಾನ ಪಡೆದ ಏಕೈಕ ಆಟಗಾರ್ತಿ ಈಕೆ.  ಇವರು 1974ರಲ್ಲಿ ಮೊದಲ ಪ್ರಮುಖ ಪ್ರಶಸ್ತಿ ಗೆದ್ದರು.  32 ವರ್ಷಗಳ ನಂತರದಲ್ಲಿ 2006ರ ಯುಎಸ್ ಓಪನ್‌ನಲ್ಲಿ ಮಿಶ್ರ ಡಬಲ್ಸ್ ಕಿರೀಟವನ್ನು ತಮ್ಮ 50ನೇ ಹುಟ್ಟುಹಬ್ಬದ ಕೆಲವೇ ವಾರಗಳ ಮೊದಲು ಪಡೆದುಕೊಂಡ ಮಹಾನ್ ಕ್ರೀಡಾ ಸಾಧಕಿ ಈಕೆ.

ಮಾರ್ಟಿನಾ ನವ್ರಾಟಿಲೋವಾ 18 ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪ್ರಶಸ್ತಿಗಳನ್ನು, 31 ಪ್ರಮುಖ ಮಹಿಳಾ ಡಬಲ್ಸ್ ಪ್ರಶಸ್ತಿಗಳನ್ನು ಮತ್ತು 10 ಪ್ರಮುಖ ಮಿಶ್ರ ಡಬಲ್ಸ್ ಪ್ರಶಸ್ತಿಗಳನ್ನು ಹೀಗೆ ಒಟ್ಟು 59 ಪ್ರಮುಖ ಪ್ರಶಸ್ತಿಗಳನ್ನು ಗೆದ್ದರು. ವಿಂಬಲ್ಡನ್ನಲ್ಲಿಯೆ  ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಒಂಬತ್ತು ಬಾರಿ ಗೆದ್ದ ಮಹಾನ್ ದಾಖಲೆ ಇವರದ್ದು. 

On the birthday of great Tennis Star Martina Navratilova

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ