ಕೇಟ್ ವಿನ್ಸ್ಲೆಟ್
ಕೇಟ್ ವಿನ್ಸ್ಲೆಟ್
“ಟೈಟಾನಿಕ್ ಹೀರೋಯಿನ್ ಈ ನನ್ನ ಚೆಲುವೆ” ಕೇಟ್ ವಿನ್ಸ್ಲೆಟ್ ನಿಜಕ್ಕೂ ಸ್ಪೆಷಲ್. ಚೆಲುವು ಮತ್ತು ಅಭಿನಯ ಇವೆರಡರಲ್ಲೂ ಆಕೆ ಅಸಾಮನ್ಯೆ. ನಾನವಳ ಅಭಿಮಾನಿ.
ಕೇಟ್ ಎಲಿಜಬೆತ್ ವಿನ್ಸ್ಲೆಟ್ 1975ರ ಅಕ್ಟೋಬರ್ 5ರಂದು ಜನಿಸಿದರು. ಈಕೆ ಒಬ್ಬ ನಟಿ ಮತ್ತು ಗಾಯಕಿ.
ಕೇಟ್ ವಿನ್ಸ್ಲೆಟ್ ತಮ್ಮ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಪೀಟರ್ ಜ್ಯಾಕ್ಸನ್‌ರವರ ಹೆವೆನ್ಲಿ ಕ್ರಿಯೇಚರ್ಸ್ (1994)ನಲ್ಲಿ ನಟಿಸುವುದರೊಂದಿಗೆ ಚಿತ್ರರಂಗಕ್ಕೆ ಕಾಲಿರಿಸಿದರು. ಆಂಗ್ ಲೀ ನಿರ್ದೇಶನದ, 1995ಲ್ಲಿ ತೆರೆಕಂಡ ಸೆನ್ಸ್ ಅಂಡ್ ಸೆನ್ಸಿಬಿಲಿಟಿ ಕಾದಂಬರಿ ಆಧರಿತ ಚಲನಚಿತ್ರದಲ್ಲಿ ಪೋಷಕ ಪಾತ್ರ; ಹಾಗೂ 1997ರಲ್ಲಿ ತೆರೆಕಂಡ ಟೈಟಾನಿಕ್ ಚಲನಚಿತ್ರದಲ್ಲಿ ರೋಸ್ ಡಿವಿಟ್ ಬಕೇಟರ್ ಪಾತ್ರ ನಿರ್ವಹಿಸಿ ಖ್ಯಾತಿ ಗಳಿಸಿದರು.
ಐರಿಷ್ ಮರ್ಡಾಕ್‌ರ ಜೀವನಾಧಾರಿತ ಐರಿಸ್, ನವ್ಯ-ಅತಿವಾಸ್ತವಿಕತೆಯ (ನಿಯೊಸರ್ರಿಯಲ್) ಕುರಿತಾದ ಇಟರ್ನಲ್ ಸನ್‌ಷೈನ್ ಆಫ್ ದಿ ಸ್ಪಾಟ್ಲೆಸ್ ಮೈಂಡ್, ಟಾಡ್ ಫೀಲ್ಡ್‌ರ ನಾಟಕ ಲಿಟ್ಲ್ ಚಿಲ್ಡ್ರನ್, ಪ್ರಣಯ-ಹಾಸ್ಯ ಮಿಶ್ರಿತ ಕಥೆಯುಳ್ಳ ದಿ ಹಾಲಿಡೇ, ರೆವೊಲ್ಯೂಷನರಿ ರೋಡ್, ದಿ ರೀಡರ್ ಮುಂತಾದ ಪ್ರಸಿದ್ಧ ಚಲನಚಿತ್ರಗಳಲ್ಲಿ ಕೇಟ್ ವಿನ್ಸ್ಲೆಟ್ ನಟಿಸಿದ್ದಾರೆ.
ಆರು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾದ ಕೇಟ್ ವಿನ್ಸ್ಲೆಟ್, ದಿ ರೀಡರ್ ಚಲನಚಿತ್ರದಲ್ಲಿನ ಅತ್ಯುತ್ತಮ ನಟನೆಗಾಗಿ ಅಕಾಡೆಮಿ ಪ್ರಶಸ್ತಿ ಗಳಿಸಿದರು. ಈ ಹಿಂದೆ ಅನೇಕ ಸ್ಕ್ರೀನ್ ಪ್ರಶಸ್ತಿಗಳು, ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಷನ್ ಅರ್ಟ್ಸ್ ಮತ್ತು ಹಾಲಿವುಡ್ ಫಾರೀನ್ ಪ್ರೆಸ್ ಅಸೋಷಿಯೇಷನ್‌ಗಳ ಪ್ರಶಸ್ತಿ ಮತ್ತು ಎಮ್ಮೀ ಪ್ರಶಸ್ತಿಗಳನ್ನು ಪಡೆದಿದ್ದ ವಿನ್ಸ್ಲೆಟ್ 2021ರಲ್ಲಿ ಸಹಾ 'ಮೇರ್ ಆಫ್ ಈಸ್ಟ್ ಟೌನ್' ಎಂಬ ಧಾರಾವಾಹಿಯಲ್ಲಿನ ಅಭಿನಯಕ್ ಮತ್ತೊಮ್ಮೆ ಎಮ್ಮೀ ಪ್ರಶಸ್ತಿ ಗಳಿಸಿದ್ದಾರೆ.
ಸ್ಪೆಷಲ್ ಹಿರೋಯಿನ್ ಕೇಟ್ ವಿನ್ಸ್ಲೆಟ್ಗೆ ಹ್ಯಾಪಿ ಬರ್ತಡೆ.
Kate Winslet
ಕಾಮೆಂಟ್‌ಗಳು