ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಂಧ್ಯಾ ಶಾಂತಾರಾಮ್

 


ಸಂಧ್ಯಾ ಶಾಂತಾರಾಮ್ ನಿಧನ

ವಿ. ಶಾಂತಾರಾಮ್ ಅವರ ಪ್ರಸಿದ್ಧ ಚಿತ್ರಕಾವ್ಯಗಳ ಕನ್ನಿಕೆ ಸಂಧ್ಯಾ ಶಾಂತಾರಾಮ್ ನಿಧನರಾಗಿದ್ದಾರೆ.  ಅವರಿಗೆ 93 ವರ್ಷ ವಯಸ್ಸಾಗಿತ್ತು.

ಸಂಧ್ಯಾ ಅವರ ಮೂಲ ಹೆಸರು ವಿಜಯಾ ದೇಶಮುಖ್.  ಅವರು 1932ರ ಸೆಪ್ಟೆಂಬರ್ 22ರಂದು ಕೊಚ್ಚಿಯಲ್ಲಿ ಜನಿಸಿದರು.

ಶಾಂತರಾಮ್ ಅವರು 1951ರಲ್ಲಿ  'ಅಮರ್ ಭೂಪಾಲಿ' ಚಿತ್ರಕ್ಕೆ ಹೊಸ ಮುಖದ ತಲಾಶೆಯಲ್ಲಿದ್ದಾಗ ತಮ್ಮ ಒಳ್ಳೆಯ ಧ್ವನಿಯಿಂದ ಗಮನ ಸೆಳೆದು ಆಯ್ಕೆ ಆದ ಸಂಧ್ಯಾ ಅವರು ಮುಂದೆ ಅವರ ಬಹುತೇಕ ಚಿತ್ರಗಳಲ್ಲಿನ ಭವ್ಯ ಪಾತ್ರಗಳಲ್ಲಿ ವಿಜೃಂಭಿಸಿದರು. ಅದರಲ್ಲೂ ಝಣಕ್ ಝಣಕ್ ಪಾಯಲ್ ಬಾಜೆ, ದೋ ಆಂಖೇನ್ ಭಾರಾಹ್ ಹಾತ್, ನವರಂಗ್, ಸ್ತ್ರೀ ಹಾಗೂ ಮರಾಠಿಯ ಪಿಂಜರಾ ಚಿತ್ರಗಳು ಅವಿಸ್ಮರಣೀಯ. 

ನಾವು ಚಲನಚಿತ್ರಗಳಲ್ಲಿ ನೋಡಿ ಆನಂದಿಸಿದ್ದ ಇವರು ಇದ್ದಾರೆ ಎಂದು ಗೊತ್ತಾಗಿದ್ದೇ ಅವರು 2025ರ ಅಕ್ಟೋಬರ್ 4ರಂದು ನಿಧನರಾದರು ಎಂಬ ಸುದ್ದಿಯಿಂದ!  ಅವರು ತಮ್ಮ ಮೇಲ್ಕಂಡ ಚಿತ್ರಗಳ ಮೂಲಕ ನಿಜಕ್ಕೂ ಅಮರರಾದ ಭಾಗ್ಯವಂತೆ.   ಈ ಮಹಾನ್ ಚೇತನಕ್ಕೆ ನಮನ 🌷🙏🌷

Respects to departed soul  actress of Great Shantaram movies Sandhya Shantaram 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ