ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟೈಮ್ಸ್ ಆಫ್ ಇಂಡಿಯಾ


 185 ತುಂಬಿದ  ಟೈಮ್ಸ್ ಆಫ್ ಇಂಡಿಯಾ

185 Years for Times of India

ಅಂದಿನ ಕಾಲದಲ್ಲಿ ಪತ್ರಿಕೆಗಳನ್ನು ಓದುವುದು ರೇಡಿಯೋ ಕೇಳುವುದು ಇವೆರಡೂ ಮರೆಯಲಾಗದ ಬದುಕಿನ ಸಂಪರ್ಕ ಕೊಂಡಿಗಳಾಗಿದ್ದವು.  ನಮ್ಮ ಭಾರತೀಯ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾ ಈ ಶತಮಾನ ಮತ್ತು ಕಳೆದ ಎರಡು ಶತಮಾನಗಳಿಗೆ ಸಾಕ್ಷಿಯಾಗಿ ಇಂದೂ ನಮ್ಮೊಡನೆ ಸಾಗುತ್ತಿದೆ ಎಂದುಕೊಳ್ಳುವಾಗ ಯಾರೋ ಒಂದು ವ್ಯಕ್ತಿಯೇ ಹಾಗೆ ನಮ್ಮೊಡನೆ ಮುಂದುವರೆಯುತ್ತಿದ್ದಾರೆಯೇ ಎಂದು ಒಂದು ಕ್ಷಣ ಅನಿಸಿತು.  

ವಸಾಹತು ಶಾಹಿಯಿಂದ ಸ್ವಾತಂತ್ರ್ಯದವರೆಗೆ, ರಾಷ್ಟ್ರದ ಹುಟ್ಟಿನಿಂದ ಇಂದಿನವರೆಗೆ ಈ ಮಹಾನ್ ದೇಶ ಪಯಣಿಸಿದ, ಹೊರಳಿದ, ತುಳಿದ ಪ್ರತೀ ದಾರಿಯ ವಿವರವನ್ನು ಪತ್ರಿಕೆ ಬರೆದಿಟ್ಟಿದೆ.  

ಆರಂಭದಲ್ಲಿ ವಾರದಲ್ಲಿ ಎರಡು ಬಾರಿ ಪ್ರಕಟಣೆ ಕಾಣುತ್ತಿದ್ದ ‘ಬಾಂಬೆ ಟೈಮ್ಸ್ ಆಂಡ್ ಜರ್ನಲ್ ಆಫ್ ಕಾಮರ್ಸ್’ ಇಂದು ಜಾಗತಿಕ ಸಂಸ್ಥೆ. ನಂತರದ ಅವತಾರ ‘ದಿ ಟೈಮ್ಸ್ ಆಫ್ ಇಂಡಿಯಾ’ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಾರವುಳ್ಳ ಇಂಗ್ಲಿಷ್ ದೈನಿಕ. 

ಇಂದು ಎಲ್ಲವೂ ಅಂಗೈನ ಮೊಬೈಲಲ್ಲಿ ಕ್ಷಣ ಕ್ಷಣಕ್ಕೂ ಕಾಣುವಾಗ ಯಾವುದು ಎಲ್ಲಿಂದ ಹೇಗೆ ಮೂಡಿಬಂತು ಎಂದು ಊಹಿಸುವುದು ಅಷ್ಟೊಂದು ಮುಖ್ಯವಲ್ಲವೇನೋ!  ಆದರೆ ಇವೆಲ್ಲಾ ಸಾಗಿಬಂದ ರೀತಿ,  ಅದರ ಹಿಂದೆ ಸಾಗಿಬಂದ ಸಾಕ್ಷಿಪ್ರಜ್ಞೆ ಮರೆಯಲಾಗದ್ದು. ಮುಂದೆಯೂ ಇರುವಂತದ್ದು.


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ