ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಗಸ್ಟ್ ರೋಡಿನ್


 ಅಗಸ್ಟ್ ರೋಡಿನ್


ಅಗಸ್ಟ್ ರೋಡಿನ್ ಫ್ರಾನ್ಸ್ ದೇಶದ ಪ್ರಸಿದ್ಧ ಶಿಲ್ಪಿ ಹಾಗೂ ಚಿತ್ರ ಕಲಾವಿದರು. 

ಅಗಸ್ಟ್ ರೋಡಿನ್ 1840ರ ನವೆಂಬರ್ 12ರಂದು ಪ್ಯಾರಿಸ್‍ನಲ್ಲಿ ಜನಿಸಿದರು. 1854ರಲ್ಲಿ ಚಿತ್ರರಚನಾ ಶಾಲೆಯೊಂದರಲ್ಲಿ ಪ್ರವೇಶ ಪಡೆದು ಅಲ್ಲಿ ರೇಖಾರಚನೆ ಹಾಗೂ ಮಾಡೆಲಿಂಗ್‍ನಲ್ಲಿ ತರಬೇತಿ ಹೊಂದಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣರಾದ ಪ್ರಯುಕ್ತ ಇಕೋಲ್ ದ ಬ್ಯೂ ಆರ್ಟ್ಸ್ ಸಂಸ್ಥೆಗೆ ಪ್ರವೇಶ ಪಡೆಯಲು ಈತ ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ (1857). ಮರುವರ್ಷವೆ ಶಿಲ್ಪದಲ್ಲಿ ಕುಸುರಿ ಕೆಲಸ ಮಾಡುವುದನ್ನು ಅಭ್ಯಸಿಸಿಕೊಂಡು ತಮ್ಮ ಜೀವನಕ್ಕೆ ಸಂಪಾದಿಸಿಕೊಳ್ಳುವ ನಿಪುಣತೆಯನ್ನು ಸಾಧಿಸಿದರು. ಅಗಸ್ಟ್ ರೋಡಿನ್
On the birth anniversary of Great French sculptor François Auguste René Rodin 🌷🙏🌷

ಅಗಸ್ಟ್ ರೋಡಿನ್ ಫ್ರಾನ್ಸ್ ದೇಶದ ಪ್ರಸಿದ್ಧ ಶಿಲ್ಪಿ ಹಾಗೂ ಚಿತ್ರ ಕಲಾವಿದರು. 

ಅಗಸ್ಟ್ ರೋಡಿನ್ 1840ರ ನವೆಂಬರ್ 12ರಂದು ಪ್ಯಾರಿಸ್‍ನಲ್ಲಿ ಜನಿಸಿದರು. 1854ರಲ್ಲಿ ಚಿತ್ರರಚನಾ ಶಾಲೆಯೊಂದರಲ್ಲಿ ಪ್ರವೇಶ ಪಡೆದು ಅಲ್ಲಿ ರೇಖಾರಚನೆ ಹಾಗೂ ಮಾಡೆಲಿಂಗ್‍ನಲ್ಲಿ ತರಬೇತಿ ಹೊಂದಿದರು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೂರು ಬಾರಿ ಅನುತ್ತೀರ್ಣರಾದ ಪ್ರಯುಕ್ತ ಇಕೋಲ್ ದ ಬ್ಯೂ ಆರ್ಟ್ಸ್ ಸಂಸ್ಥೆಗೆ ಪ್ರವೇಶ ಪಡೆಯಲು ಈತ ಮಾಡಿದ ಪ್ರಯತ್ನ ಫಲಕಾರಿಯಾಗಲಿಲ್ಲ (1857). ಮರುವರ್ಷವೆ ಶಿಲ್ಪದಲ್ಲಿ ಕುಸುರಿ ಕೆಲಸ ಮಾಡುವುದನ್ನು ಅಭ್ಯಸಿಸಿಕೊಂಡು ತಮ್ಮ ಜೀವನಕ್ಕೆ ಸಂಪಾದಿಸಿಕೊಳ್ಳುವ ನಿಪುಣತೆಯನ್ನು ಸಾಧಿಸಿದರು.

ರೋಡಿನ್ 1864ರಲ್ಲಿ ರಚಿಸಿದ ಮ್ಯಾನ್ ವಿತ್ ಎ ಬ್ರೋಕನ್ ನೋಸ್ (ಒಡೆದ ಮೂಗಿನ ಮನುಷ್ಯ) ಕೃತಿಯನ್ನು ಅಧಿಕೃತ ಪ್ರದರ್ಶನಕಾರರು ತಿರಸ್ಕರಿಸಿದರು; ಆ ವೇಳೆಗಾಗಲೇ ಈತ ಶಿಲ್ಪಿ ಕರಿಯಾರ್ ಬೆಲೋಸ್‍ನ ಶಿಷ್ಯತ್ವದಲ್ಲಿದ್ದರು. 1871ರಲ್ಲಿ ಈತ ಬೆಲೋಸ್‍ನೊಡನೆ ಸಾರ್ವಜನಿಕ ಸ್ಮಾರಕಗಳ ಅಲಂಕರಣ ಕಾರ್ಯಕ್ಕಾಗಿ ಬ್ರಸೆಲ್ಸ್‍ಗೆ ಹೋದರು. ಅದರೆ ಬೆಲೋಸ್ ಈತನನ್ನು ಮುಂದುವರಿಸಲಿಲ್ಲ.  1875ರಲ್ಲಿ ತನ್ನ 35ನೆಯ ವಯಸ್ಸಿನಲ್ಲಿ ವೈಯಕ್ತಿಕ ಶೈಲಿಯೊಂದನ್ನು ರೂಪಿಸಿಕೊಳ್ಳಬೇಕೆಂಬ ಒತ್ತಡಕ್ಕೆ ಒಳಗಾದ ಈತ, ಅಲಂಕಾರ ಕೆಲಸದಲ್ಲಿ ಹೆಚ್ಚು ತೊಡಗಿಕೊಂಡಿದ್ದರು. ಇಂಥ ಸನ್ನಿವೇಶದಲ್ಲಿ ಅತ್ಯಗತ್ಯವಾಗಿದ್ದ ಪ್ರಚೋದನೆಯನ್ನು ಇಟಲಿ ನೀಡಿತು. ಬ್ರಸೆಲ್ಸ್‍ಗೆ ಮರಳುವ ಮೊದಲು ಈತ ಜಿನೊವ, ರೋಮ್, ನೇಪ್ಲೀಸ್ ಹಾಗೂ ವೆನಿಸ್ ನಗರಗಳಿಗೆ ಭೇಟಿ ನೀಡಿದರು. ಮೈಕೆಲಂಜೆಲೊ ಹಾಗೂ ಡೊನೆಟೆಲೊ ಅವರ ಪ್ರಭಾವದಿಂದಾಗಿ ಹೊಸ ಮಾರ್ಗವೊಂದನ್ನು ಹುಡುಕಿಕೊಳ್ಳಲು ಅನುಕೂಲವಾಯಿತು. ಆ ಸ್ಫೂರ್ತಿಯ ಪರಿಣಾಮವಾಗಿ ರೋಡಿನ್ ತನ್ನ ಮೊಟ್ಟಮೊದಲ ಸ್ವೋಪಜ್ಞ ಕೃತಿ ದ ವ್ಯಾಂಕ್ವಿಷ್ಡ್ (ಸೋತವನು) ರಚಿಸಿದರು. ಪರಾಭವಗೊಂಡು ಕುಸಿದ ಚೈತನ್ಯ ಮತ್ತೆ ಜನ್ಮ ಪಡೆಯಲು ಪ್ರಯತ್ನಿಸುತ್ತಿರುವ ಭಾವ ಈ ಕೃತಿಯಲ್ಲಿ ಕಂಡುಬರುತ್ತದೆ.

ರೋಡಿನ್ 1877ರಲ್ಲಿ ಪ್ಯಾರಿಸ್‍ಗೆ ಮರಳಿದರು. ಸೇಂಟ್ ಜಾನ್ ದಿ ಬ್ಯಾಪ್ಟಿಸ್ಟ್ ಪ್ರೀಚಿಂಗ್ (ಉಪದೇಶ ಮಾಡುತ್ತಿರುವ ಸಂತ ಬ್ಯಾಪ್ಪಿಸ್ಟ್) ಕೃತಿಯ ಮೂಲಕ ತನ್ನ ವೈಯಕ್ತಿಕ ಶೈಲಿಯನ್ನು ರೂಪಿಸಲು ಈತ 1878ರಲ್ಲಿ ಪ್ರಯತ್ನಿಸಿದರು. ಈ ಶಿಲ್ಪದಿಂದ ಒದಗಿದ ಯಶಸ್ಸು ಅಂತೆಯೇ ಹಿತ್ತಾಳೆ ಯುಗ ಎಂಬ ಕೃತಿ 1886ರಲ್ಲಿ ಪ್ಯಾರಿಸ್ ಹಾಗೂ ಬ್ರಸೆಲ್ಸ್‍ನಲ್ಲಿ ಗಳಿಸಿದ ಯಶಸ್ಸುಗಳಿಂದಾಗಿ ಈತ ತನ್ನ 40ನೆಯ ವಯಸ್ಸಿನಲ್ಲಿ ಒಬ್ಬ ಉತ್ತಮ ಶಿಲ್ಪಿ ಎಂಬ ಖ್ಯಾತಿಯನ್ನು ಪಡೆದರು. ಸಾಮಾನ್ಯವಾಗಿ ಬಹುತೇಕ ಕಲಾವಿದರು ತಮ್ಮ ಹೆಚ್ಚಿನ ಕೃತಿಗಳನ್ನು ಪೂರೈಸಿರಬಹುದಾದ ವಯಸ್ಸಿನಲ್ಲಿ ಈತ ತನ್ನ ವೈಯಕ್ತಿಕ ಶೈಲಿಯನ್ನು ಕಂಡುಕೊಳ್ಳಲು ಹುಡುಕಾಟ ನಡೆಸಿದ್ದರು. ಕಲಾ ಸಂಗ್ರಹಾಲಯದ ಹಿತ್ತಾಳೆ ದ್ವಾರವನ್ನು ನಿರ್ಮಿಸಲು ಸರ್ಕಾರದಿಂದ ದೊರೆತ ನಿಯೋಜನೆಯ ಕಾರಣದಿಂದಾಗಿ ಈತ ಎರಡು ಕಾರ್ಯಾಗಾರಗಳನ್ನು ತೆರೆಯುವುದು ಸಾಧ್ಯವಾಯಿತು; ಅಷ್ಟೇ ಅಲ್ಲ, ಮುಂದೆ ಈತನಿಗೆ ಹಣಕಾಸಿನ ತೊಂದರೆಯಿಲ್ಲದಂಥ ಸ್ಥಿತಿವಂತಿಕೆ ಪ್ರಾಪ್ತವಾಯಿತು. ಹಿತ್ತಾಳೆ ಬಾಗಿಲು ಈತ ತನ್ನ ಜೀವಿತಾವಧಿಯಲ್ಲಿ ರಚಿಸಿದ ಅತ್ಯಂತ ಮಹತ್ತ್ವದ ಕೃತಿ ಎಂಬ ಪ್ರಶಂಸೆಗೆ ಪಾತ್ರವಾಗಿದೆ. 1884ರಲ್ಲೇ ಇದನ್ನು ಪೂರ್ಣಗೊಳಿಸಿ ಒಪ್ಪಿಸಬೇಕೆಂಬ ಒಪ್ಪಂದವಾಗಿದ್ದರೂ 1917ರಲ್ಲಿ ರೋಡಿನ್ ತೀರಿಕೊಂಡಾಗಲೂ ಇದು ಮುಗಿದಿರಲಿಲ್ಲ. ಡಾಂಟೆಯ ಡಿವೈನ್ ಕಾಮಿಡಿ ಮಹಾಕಾವ್ಯದ ದೃಶ್ಯಗಳನ್ನು ಆ ಬಾಗಿಲ ಮೇಲೆ ರೂಪಿಸಬೇಕಾಗಿತ್ತು.  ಅಂತಿಮವಾಗಿ ಅದಕ್ಕೆ ಗೇಟ್ಸ್ ಆಫ್ ಹೆಲ್ (ನರಕದ ದ್ವಾರಗಳು) ಎಂದು ಪುನರ್ನಾಮಕರಣ ಮಾಡಲಾಯಿತು. 

15ನೆಯ ಶತಮಾನದ ಇಟಾಲಿಯನ್ ಶಿಲ್ಪಿ ಲೊರೆಂಜೊ ಗಿಬರ್ಟಿ ಎಂಬಾತ ಫ್ಲಾರೆನ್ಸ್‍ನ ಇಗರ್ಜಿಯ ಬಾಗಿಲ ಮೇಲೆ ಸ್ವರ್ಗದ ಬಾಗಿಲುಗಳು ಎಂದು ಮೂಡಿಸಿದ್ದ ಕೃತಿಯಿಂದ ಈತ ಪ್ರಭಾವಿತರಾಗಿದ್ದರು. ಆದರೆ ಚಿತ್ರಕಲಾವಿದ ಆಲ್ಪೊನ್ಸ್ ಲೆಗ್ರೊಸ್‍ನ ಆಹ್ವಾನದ ಮೇರೆಗೆ 1881ರಲ್ಲಿ ಲಂಡನ್ನಿಗೆ ಭೇಟಿ ನೀಡಿದ ಅನಂತರ ಈತನ ಯೋಜನೆಯಲ್ಲಿ ಗಣನೀಯವಾದ ಬದಲಾವಣೆಯಾದವು. ಡಾಂಟೆಯಿಂದ ಸ್ಫೂರ್ತಿಗೊಂಡು ರಚಿತವಾದ ಅನೇಕ ರ್ಯಾಫೆಲೈಟ್-ಪೂರ್ವ ವರ್ಣಚಿತ್ರಗಳು ಹಾಗೂ ರೇಖಾಚಿತ್ರಗಳನ್ನೂ ವಿಲಿಯಂ ಬ್ಲೇಕ್‍ನ ಭ್ರಮಾತ್ಮಕ ಚಿತ್ರಗಳನ್ನೂ ಅಲ್ಲಿ ಈತ ನೋಡಿದರು. ಹಾಗಾಗಿ, ಆ ವೇಳೆಗಾಗಲೇ ತನ್ನ ಮನಸ್ಸಿನಲ್ಲಿ ಪರಿಕಲ್ಪಿತವಾಗಿದ್ದ “ದ್ವಾರ”ಗಳಿಗೆ ಬದಲಾಗಿ ಬೇರೆ ಬಗೆಯ ಚಿಂತನೆಗಳು ಮೂಡಿ ಪ್ರೀತಿ, ನೋವು ಹಾಗೂ ಸಾವನ್ನು ಪ್ರತಿಬಿಂಬಿಸುವ ರಚನೆಯತ್ತ ಮನಸ್ಸು ವಾಲಿತು. ಪೂರ್ಣಗೊಳ್ಳದ ಆ ಸ್ಮಾರಕದ ಒಡಲಿನಿಂದಲೇ ಅನೇಕ ಬಿಡಿ ಕೃತಿಗಳನ್ನು ಈತ ಬೇರ್ಪಡಿಸಿಕೊಂಡಿರುವುದನ್ನು ಕಾಣಬಹುದು. ಆ ಹಿನ್ನೆಲೆಯಲ್ಲೇ ಇವರ ಲೋಕಪ್ರಸಿದ್ಧ ಥಿಂಕರ್ (ಚಿಂತಕ 1900) ರೂಪಿತವಾದದು. ಮೂಲತಃ ಆ ದ್ವಾರದ ಮೇಲ್ಭಾಗದಲ್ಲಿ ಡಾಂಟೆಯ ಚಿತ್ರವಾಗಿ ಪಡೆಮೂಡ ಬೇಕಾಗಿದ್ದ ಕೃತಿ ಇದು.

ಕೀರ್ತಿ ಹಬ್ಬತೊಡಗಿದಂತೆ ಈತನ ಮೇರೆಮೀರಿದ ಕಾಮದ ತೃಷೆಯಿಂದಾಗಿ ಇವರ ಖಾಸಗಿ ಬದುಕು ಅಸ್ತವ್ಯಸ್ತವಾಯಿತು. ಪ್ರೇಮದ ಪರಾಕಾಷ್ಠೆಯಲ್ಲಿದ್ದ ಸನ್ನಿವೇಶದಲ್ಲಿ ಈತ ಕಾಮದ ತೆಕ್ಕೆಗೆ ಸಿಕ್ಕ ಜೋಡಿಗಳನ್ನು ಮೇಲಿಂದ ಮೇಲೆ ರಚಿಸಿದರು. ಆ ಗುಂಪಿಗೆ ಸೇರಿದ ಅತ್ಯಂತ ಮಹತ್ತ್ವದ ಕೃತಿಯೆಂದರೆ ಈತ 1886ರಲ್ಲಿ ರಚಿಸಿದ ದಿ ಕಿಸ್ (ಚುಂಬನ). ಇವರ ಯಶಸ್ಸನ್ನು ಸಾರಿ ಹೇಳುವ ನಾಲ್ಕು ಸ್ಮಾರಕ ಕೃತಿಗಳು ಕ್ಲಾಡ್ ಲೊರೇನ್, ಭೂದೃಶ್ಯ ಚಿತ್ರಗಾರ; ಡೊಮಿಂಗೊ ಸರ್ಮಿಯೆಂಟೂ, ಆರ್ಜೆಂಟಿನದ ಅಧ್ಯಕ್ಷ; ವಿಕ್ಟರ್ ಹ್ಯೂಗೊ ಹಾಗೂ ಬಾಲ್ಜಾಕ್-ಫ್ರಾನ್ಸಿನ ಲೇಖಕರು. 

1900ರ ಫ್ರಾನ್ಸಿನ ಪ್ರಪಂಚಮಟ್ಟದ ಪ್ರದರ್ಶನದಲ್ಲಿ (ಎಕ್ಸ್‍ಪೊಸಿಷನ್ ಯೂನಿವರ್ಸಲ್) ಇವರ 150 ಕೃತಿಗಳನ್ನು ಆಯ್ಕೆಮಾಡಲಾಗಿತ್ತು. ಇವುಗಳಲ್ಲಿ ಶಿಲ್ಪಕೃತಿಗಳು ಹಾಗೂ ರೇಖಾಚಿತ್ರಗಳು ಸೇರಿದ್ದವು. 1900ರ ಅನಂತರ ಈತ ಪ್ರಪಂಚ ಪ್ರಸಿದ್ಧಿಯನ್ನು ಗಳಿಸಿದಾಗ ಎಲ್ಲ ಕಡೆಯಿಂದ ಕೃತಿರಚನೆಗೆ ಬೇಡಿಕೆ ಬಂದಿತು; ವರ್ಣಚಿತ್ರಗಳು, ಪ್ರತಿಮೆಗಳು, ಅರ್ಧ ಪ್ರತಿಮೆಗಳನ್ನು ರಚಿಸಿಕೊಡಬೇಕೆಂದು ಜನ ದುಂಬಾಲು ಬಿದ್ದರು. ಅಮೆರಿಕ ಸಂಯುಕ್ತ ಸಂಸ್ಥಾನ, ಜರ್ಮನಿ, ಆಸ್ಟ್ರಿಯ, ಇಂಗ್ಲೆಂಡ್ ಮೊದಲಾದ ದೇಶಗಳಿಂದ ಕೋರಿಕೆ ಬಂದಿತು. 1902ರಲ್ಲಿ ಲಂಡನ್‍ನಲ್ಲಿ ಇವರ ಗೌರವಾರ್ಥ ಇವರ ಶಿಷ್ಯರು ಏರ್ಪಡಿಸಿದ್ದ ಔತಣಕೂಟದಲ್ಲಿ ವಿಶೇಷವಾಗಿ ಸನ್ಮಾನ ಮಾಡಲಾಯಿತು. ಫ್ರೆಂಚ್ ಸಂಗೀತ ಸಂಯೋಜಕಿ ಕ್ಯಾಮಿಲ್ ಸೆಂಟ್‍ಸೀನ್ ಹಾಗೂ ಅಮೆರಿಕದ ಲೇಖಕ ಮಾರ್ಕ್‍ಟ್ವೀನರ ಜೊತೆಯಲ್ಲಿ ಆಕ್ಸ್‍ಫರ್ಡ್ ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ನೀಡಿತು. 

ಶಿಲ್ಪಕೃತಿಗಳನ್ನು ರಚಿಸುವುದರ ಜೊತೆಗೆ ಈತ ತಮ್ಮ ಜೀವಿತಾವದಿಯಲ್ಲಿ ಗ್ರಂಥಗಳಿಗೆ ಚಿತ್ರ ಬರೆದರು. ಇವರಿಗೆ ಬರೆಹದಲ್ಲೂ ಪರಿಶ್ರಮವಿತ್ತು. ಸ್ನೇಹಿತರ ಸಹಾಯದಿಂದ ಅನೇಕ ಲೇಖನಗಳನ್ನು ಬರೆದಿದ್ದಾರೆ. ಮಧ್ಯಕಾಲೀನ ಕಲೆಯ ಬಗ್ಗೆ ಈತನಿಗೆ ವಿಪರೀತ ವ್ಯಾಮೋಹವಿತ್ತು. ಇವರ ಬರೆಹಗಳಲ್ಲೆಲ್ಲ ಹೆಚ್ಚು ಮಹತ್ತ್ವದ ಕೃತಿ ‘ಚರ್ಚಸ್ ಆಫ್ ಫ್ರಾನ್ಸ್ ‘.

ಅಗಸ್ಟ್ ರೋಡಿನ್ 1917 ನವೆಂಬರ್ 17ರಂದು ಈತ ಮ್ಯೂಡನ್‍ನಲ್ಲಿ ತೀರಿಕೊಂಡರು.

On the birth anniversary of Great French sculptor François Auguste René Rodin 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ