ಕವಿತಾ ಹೆಗಡೆ
ಕವಿತಾ ಹೆಗಡೆ
ಕವಿತಾ ಹೆಗಡೆ ಇಂಗ್ಲಿಷ್ ಮತ್ತು ಕನ್ನಡದ ಉತ್ಸಾಹಿ ಬರಹಗಾರ್ತಿ.
ಡಿಸೆಂಬರ್ 5 ಕವಿತಾ ಹೆಗಡೆ ಅಭಯಂ ಅವರ ಜನ್ಮದಿನ. ಕವಿತಾ ಹೆಗಡೆ ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದವರು. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕವಿತಾ ಹೆಗಡೆ ಅವರ ಕವಿತೆ, ಕಥೆ, ಚಿಂತನೆ, ವಿಮರ್ಶೆ ಮುಂತಾದ ಬರಹಗಳು ಕನ್ನಡದ ಎಲ್ಲ ಪ್ರಮುಖ ನಿಯತಕಾಲಿಕಗಳಲ್ಲಿ ಮತ್ತು ಅಂತರಜಾಲ ತಾಣಗಳಲ್ಲಿ ನಿರಂತರ
“ದ ನೆಸ್ಟೆಡ್ ಲವ್” ಕವಿತಾ ಹೆಗಡೆ ಅವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ‘ನೀವೂ ಗೆಲ್ಲಬಹುದು' ಎಂಬ ಪ್ರೇರಣೆ ಹಾಗೂ 'ಮಂಜಿನ ಮನೆ ಹೊಕ್ಕ ಮನ' ಕವನ ಸಂಕಲನ ಇವರ ಪ್ರಕಟಿತ ಕನ್ನಡ ಕೃತಿಗಳು.
ಇಂಗ್ಲಿಷ್ -ಕನ್ನಡ ಕಥೆ ಕವನಗಳ ರಚನೆ ಮತ್ತು ಅನುವಾದದಲ್ಲಿ ಕವಿತಾ ಹೆಚ್ಚಾಗಿ ಕಂಡಿದ್ದಾರೆ. ಜೊತೆಗೆ ಸ್ವಯಂ ಶಿಕ್ಷಕಿಯಾಗಿ ಮಕ್ಕಳ ಮನಸ್ಸನ್ನು ಹತ್ತಿರದಿಂದ ಬಲ್ಲ ಅವರಿಂದ ಮಕ್ಕಳ ಮಾನಸಿಕ ಚಿಂತನೆಗಳ ಕುರಿತಾದ ಬರಹಗಳು ಮೂಡಿಬರುತ್ತಿರುವುದು ವಿಶಿಷ್ಟ ಸಂಗತಿ. ಕವಿತಾ ಒಬ್ಬ ವಿಮರ್ಶಕಿಯಾಗಿಯೂ ಉತ್ತಮ ಬರಹ ಮಾಡುತ್ತಿದ್ದಾರೆ. ಉತ್ತಮ ಓದುಗಾರ್ತಿಯಾಗಿ ಅವರು ಇತರ ಬರಹಗಾರರನ್ನು ಆಳವಾಗಿ ಓದಿ ಬರೆಯುವ ರೀತಿ ಆಪ್ತವಾದದ್ದು.
ಕವಿತಾ ಹೆಗಡೆ ಅವರು ತಮ್ಮ ಪುತ್ರಿ ಸಾನಿಕಾ ಹೆಗಡೆ ಅವರು ಬರೆದಿರುವ ಕವಿತೆಯನ್ನು ಹೀಗೆ ಅನುವಾದಿಸಿ ಹಂಚಿಕೊಂಡಿರುವುದು ಕಾಣಬಂತು:
ಪ್ರತಿ ದಿನವೂ ನಿನ್ನ ಜನುಮದಿನ
ಮುದಿಯಾಗುತಿರುವೆಯೆಂದು ಹೆದರದಿರು,
ಮಗುವಿನ ಹೃದಯವಿನ್ನೂ ನಿನ್ನಲ್ಲಿದೆಯಲ್ಲ.
ಸಾವು ಸಮೀಪಿಸುತಿದೆಯೆಂದು ಹೆದರದಿರು,
ನೀ ಬದುಕಿದ ನೈಜ ಬದುಕಿನ್ನೂ ನಿನಗಿದೆಯಲ್ಲ.
ನೆರೆತ ಕೂದಲ ಕುರಿತು ಚಿಂತಿಸದಿರು,
ನಿನ್ನ ವಿಚಾರಗಳಿಗಿನ್ನೂ ತಾರುಣ್ಯ.
ಸೋಲುಗಳ ನೆನೆದು ಕಳವಳಗೊಳಬೇಡ,
ನಿನ್ನ ಜಯವದಕಿಂತ ಬಹಳವಿರುವಾಗ.
ಗತಕಾಲಕಾಗಿ ದುಃಖಿಸಬೇಡ,
ನಿನ್ನ ಭವಿಷ್ಯವಿನ್ನೂ ಉಜ್ವಲವಿರಲಿದೆ.
ಕಷ್ಟಗಳಿಗೆ ಅಂಜಬೇಡ,
ನಿನ್ನಾತ್ಮ ಶುದ್ಧ -ಪವಿತ್ರವಿದೆಯಲ್ಲ.
ಈ ದಿನ ನಿನ್ನದು ಆಚರಿಸು ಅದನು,
ನಿನ್ನ ಸಂತಸದ ದಿನಗಳ ನೆನೆದು.
ಸದುದ್ದೇಶಕೆ ನೀ ಜನಿಸಿರುವದ ಆನಂದಿಸು,
ಈ ಸುದಿನ ಒಂದು ಮಹಾನ್ ಜೀವ ಜನಿಸಿತ್ತು.
ನಿನ್ನ ಪ್ರೀತಿಪಾತ್ರರು,
ಪರಿವಾರ, ಗೆಳೆಯರು ಹೆಮ್ಮೆ ಪಡುವರು,
ಅವರೊಂದಿಗೆ ಇಂಥ ಅದ್ಭುತ ಶಕ್ತಿಯಿದೆಯೆಂದು.
ನೀನವರಿಗೆ ಮಾದರಿಯೆಂದು ಹೆಮ್ಮೆಪಡು.
ದೇವರಿಗೆ ಕೃತಜ್ಞಳಾಗಿರು ಅವ ನಿನಗೆ
ಬಹು ಪ್ರಿಯಜನರ ನೀಡಿಹನೆಂದು.
ನೋವುಂಡ ದಿನಗಳಿಂದ ಪಾಠ ಕಲಿ,
ದುಃಖದ ಯೋಚನೆಗಳ ಹೊರಚೆಲ್ಲು,
ಮಹತ್ಕಾರ್ಯವ ಮಾಡಲಿಕ್ಕಿದೆ ನಿನಗೆ.
ನೆನಪಿಡು, ಅನುದಿನವೂ ನೀ ಆನಂದಿಸುವೆ,
ಪ್ರತಿ ದಿನವೂ ನಿನ್ನ ಜನುಮದಿನವೆಂದುಕೊಂಡಾಗ.
ಅಂದ ಹಾಗೆ ಕವಿತಾ ಅವರ ಪುತ್ರಿ ಸಾನಿಕಾ ಹೆಗಡೆ ಅವರ 'ಅಬಾಂಡನ್ಡ್ ಫ್ರೆಂಡ್' ಎಂಬ ಕೃತಿ ಕೂಡಾ ಪ್ರಕಟಗೊಂಡಿದೆ.
ಉತ್ಸಾಹಿ ಬರಹಗಾರ್ತಿ, ಚಿಂತಕಿ ಮತ್ತು ಆತ್ಮೀಯರಾದ ಕವಿತಾ ಹೆಗಡೆ ಅಭಯಂ ಮತ್ತು ಅವರ ಕುಟುಂಬದವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Kavita Hegde Abhayam
ಕಾಮೆಂಟ್‌ಗಳು