ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸತೀಶ ಜೋಗಯ್ಯ


 ಸತೀಶ ಜೋಗಯ್ಯ

ಕೃಷಿ ವಿಜ್ಞಾನಿಗಳಾದ ಡಾ. ಸತೀಶ ಜೋಗಯ್ಯ ಫೇಸ್ಬುಕ್ಕಿಗೆ ನಾನು ಬಂದ ದಿನಗಳಿಂದ ಇಂದಿನವರೆಗೆ ಅಂದರೆ ಸುಮಾರು 16 ವರ್ಷದಿಂದ  ಆತ್ಮೀಯರಾಗಿ, ನನ್ನ ಪ್ರತಿ ಬರಹಕ್ಕೂ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ.

ಡಿಸೆಂಬರ್ 25 ಸತೀಶ ಜೋಗಯ್ಯ ಅವರ ಜನ್ಮದಿನ. ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ ಪಡೆದು,  ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಪದವಿ, ಸ್ನಾತಕೊತ್ತರ ಪದವಿ ಪಡೆದರು. ಸತೀಶ ಜೋಗಯ್ಯ ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿ ಸಹಾ ಓದು, ಸಂಶೋಧನೆ ಮತ್ತು ವೃತ್ತಿ ನಡೆಸಿದವರು.  ಕೃಷಿ ವಿಜ್ಞಾನದಲ್ಲಿ ಸಂಶೋಧಕರಾಗಿ ಪಿಎಚ್.ಡಿ ಗಳಿಸಿರುವ ಅವರು ಅಮೆರಿಕದಲ್ಲಿ, ಪುಣೆಯಲ್ಲಿ ಕೃಷಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ ನಂತರದಲ್ಲಿ ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹಾರ್ಟಿಕಲ್ಚರ್ (ಐಸಿಎಆರ್) ಅಲ್ಲಿ ಪ್ರಿನ್ಸಿಪಲ್ ಸೈಂಟಿಸ್ಟ್ ಹುದ್ದೆ ನಿರ್ವಹಿಸುತ್ತಿದ್ದಾರೆ.  

ಯಾವುದೇ ಸಸ್ಯ ಹೂವಿನ ಹೆಸರನ್ನೂ ತಕ್ಷಣವೇ ಹೆಸರಿನಿಂದ ಗುರುತಿಸುವ ಸತೀಶ ಜೋಗಯ್ಯ ವಿಶೇಷವಾಗಿ ದ್ರಾಕ್ಷಿ ಬೆಳೆ ಕುರಿತಂತೆ ಅಪಾರ ಸಂಶೋಧನೆ ನಡೆಸಿದವರು.

ಸತೀಶ ಜೋಗಯ್ಯ ಅವರು ಅಮೆರಿಕದಲ್ಲಿದ್ದಾಗ, ಪುಣೆಯಲ್ಲಿದ್ದಾಗ ಮತ್ತು ಬೆಂಗಳೂರಿನಲ್ಲಿದ್ದಾಗ ಎಲ್ಲೇ ಇರಲಿ ಕನ್ನಡದ ಕುರಿತಾಗಿ ಅಪಾರ ಒಲವು ಹೊಂದಿದವರು.  ಈ ಕನ್ನಡ ಪ್ರೇಮವೇ ನಮ್ಮ ಸ್ನೇಹವನ್ನು ಅಪಾರವಾಗಿ ಬೆಳಗಿದೆ ಅಂದರೆ ತಪ್ಪಾಗಲಾರದು.  ಯ್ಯೂಟ್ಯೂಬ್ ವಾಹಿನಿ ಜಾಹೀರಾತು ಲೋಕವನ್ನು ತನ್ನ ಗಳಿಕೆಯ ಅಸ್ತ್ರವಾಗಿ ಬಳಸುವ ಮೊದಲು ಸತೀಶ್ ಜೋಗಯ್ಯ ಹಲವು ನೂರು ಕನ್ನಡ ಗೀತೆಗಳನ್ನು ಕನ್ನಡದ ಆಸಕ್ತಿಯಿಂದ ಅಪ್ಲೋಡ್  ಮಾಡಿ ಕನ್ನಡದ ಹಾಡುಗಳು ಅಂತರಜಾಲದಲ್ಲಿ ವ್ಯಾಪಕವಾಗಿ ಮಾಡಿದ್ದರು.

ಮೈಸೂರು, ಪುಣೆ ಮತ್ತು ಬೆಂಗಳೂರಿನಲ್ಲಿ ಸತೀಶ ಜೋಗಯ್ಯ ಅವರ ಕುಟುಂಬದ ಅಕ್ಕರೆ ಮತ್ತು ಗೆಳೆತನದ ಆತಿಥ್ಯ ನನಗೆ ದೊರಕಿದೆ.  ಇಷ್ಟೊಂದು ಸುದೀರ್ಘ ಕಾಲ ಇಂತಹ ನಿಷ್ಕಲ್ಮಶ ಸ್ನೇಹ ಮತ್ತು ಕನ್ನಡದ ಕೆಲಸಕ್ಕೆ ಒಂದೇ ತೆರನಾದ ಬೆಂಬಲ ಸಾಧ್ಯವಿದೆ ಎಂಬುದನ್ನು ಊಹಿಸುವುದೂ ಕಷ್ಟ. ಆದರೆ ಸತೀಶ ಜೋಗಯ್ಯ ಅವರಿಂದ ನನಗಂತೂ ಲಭ್ಯವಾಗಿದೆ.

ಆತ್ಮೀಯರಾದ ಡಾ. ಸತೀಶ ಜೋಗಯ್ಯ ಮತ್ತು ಅವರ ಕುಟುಂಬದವರಿಗೆ ನನಗೆ ನೀಡುತ್ತಿರುವ ಬೆಂಬಲಕ್ಕೆ ಮತ್ತು ಪ್ರೀತಿಗೆ ಕೃತಜ್ಞತೆ.  ಸತೀಶ ಜೋಗಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Dr. Satisha Jogaiah

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ