ಪಾರ್ವತಿ
ಪಾರ್ವತಿ ಸತ್ಯನಾರಾಯಣ
ಪಾರ್ವತಿ ಸತ್ಯನಾರಾಯಣ ಅವರ ಫೇಸ್ಬುಕ್ ಗೋಡೆಗೆ ಹೋದರೆ ಅದೊಂದು ನಲ್ಮೆಯ ವಾತಾವರಣದ ತಾಣದ ಭಾವ ಕೊಡುತ್ತೆ.
ಪಾರ್ವತಿ ಸತ್ಯನಾರಾಯಣ ಅವರ ಬರಹದ ಪ್ರತಿಯೊಂದು ಅಭಿವ್ಯಕ್ತಿಯಲ್ಲಿ ನಿಷ್ಕಲ್ಮಶ ಸ್ನೇಹದ ಅಭಿವ್ಯಕ್ತಿ ಇದೆ. ಅದರಲ್ಲೊಂದು ವಿದ್ವತ್ ಪ್ರಭೆ ಇದೆ. ಅವರು ಬಿ.ಎಸ್ಸಿ, ಕಾನೂನು ಪದವಿ ಪಡೆದಿರುವುದರ ಜೊತೆಗೆ ಸಂಸ್ಕೃತದಲ್ಲಿ ವಿದ್ವತ್ ಪದವಿ ಗಳಿಸಿರುವ ಹಿನ್ನೆಲೆ ಇದಕ್ಕಿರಬಹುದು. ಅವರು ಸಂಸ್ಕೃತದಲ್ಲಿ ಪಿಎಚ್.ಡಿ ಸಾಧನೆಯನ್ನೂ ಮಾಡಿದ್ದಾರೆ. ಪತಿ ಸತ್ಯನಾರಾಯಣ ಅವರು ಪ್ರಖ್ಯಾತ ಸರ್ಜನ್.
ಕಾನೂನು ವೃತ್ತಿಯನ್ನು ಯಶಸ್ವಿಯಾಗಿ ನಡೆಸುತ್ತಿದ್ದ ಪಾರ್ವತಿ ಕುಟುಂಬದ ಆದ್ಯತೆಯನ್ನು ಪರಿಗಣಿಸಿ ವೃತ್ತಿಯನ್ನು ಬಿಟ್ಟರೂ ಸದಾ ಅಧ್ಯಯನಶೀಲೆ. ಮಕ್ಕಳನ್ನು ವಿದ್ಯಾಸಾಧನೆಯಲ್ಲಿ ಮತ್ತು ವೃತ್ತಿಯಲ್ಲಿ ಯಶಸ್ವಿಗಳನ್ನಾಗಿ ಮಾಡಿದ್ದಾರೆ. ಸಂಸ್ಕೃತದಲ್ಲಿ ಅನೇಕರಿಗೆ ಮಾರ್ಗದರ್ಶನ ಇಂದೂ ಮಾಡುತ್ತಾರೆ. ಅನೇಕ ಪಠ್ಯ ಕೃತಿಗಳನ್ನು ಸ್ವಯಂ ರಚಿಸಿದ್ದಾರೆ. ಭಗವದ್ಗೀತೆಯ ಎಲ್ಲ ಅಧ್ಯಾಯಗಳ ಎಲ್ಲ ಶ್ಲೋಕಗಳಿಗೂ ತಮ್ಮದೇ ಆದ ಭಾವದಲ್ಲಿ ಇಂಗ್ಲಿಷಿನಲ್ಲಿ ಬರೆದಿಟ್ಟಿದ್ದಾರೆ. ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ ಇವರ ಅಧ್ಯಯನ ಅಪಾರವಾದದ್ದು.
ನನ್ನ ಎಲ್ಲ ಬರಹಗಳನ್ನೂ ಮೆಚ್ಚಿ ಪ್ರೋತ್ಸಾಹಿಸುವ ಅವರು ತಮ್ಮ ಅನುಭವ, ತಮಗಿರುವ ಪ್ರತಿ ಪರಿಚಿತ ವ್ಯಕ್ತಿಗಳ ಬಗೆಗೆ ಆಪ್ತತೆ ಇಂದ ಬರೆಯುವ ರೀತಿ ಅತ್ಯಂತ ಸಂತೋಷ ನೀಡುತ್ತದೆ.
ಫೇಸ್ಬುಕ್ ಎಂಬುದು ಸ್ನೇಹದ ಮನೆ ಎಂಬ ಅರ್ಥದಲ್ಲಿ ಸೃಷ್ಟಿ ಆಗಿರುವುದು ನಿಜವಾದರೂ ಹಾಗೆ ಕಾಣುವುದು ಮಾತ್ರಾ ತುಂಬಾ ಅಪರೂಪ. ಅಂತಹ ಅಪರೂಪದ ಭಾವ ಕಾಣುವುದು ಆತ್ಮೀಯರಾದ ಪಾರ್ವತಿ ನಾರಾಯಣ ಅಂತವರ ಉಪಸ್ಥಿತಿಯಿಂದ.
ಪಾರ್ವತಿ ಸತ್ಯನಾರಾಯಣ ಅವರಿಗೆ ಹಾರ್ದಿಕ ಶುಭಹಾರೈಕೆಗಳು. ತಮ್ಮ ಮತ್ತು ತಮ್ಮ ಕುಟುಂಬದವರ ಬದುಕು ಸಕಲ ಸುಖ, ಸೌಖ್ಯ, ಸಂಪದ, ಸಂತಸ, ಸಾಧನೆ, ಸಂತೃಪ್ತಿಗಳಿಂದ ನಿತ್ಯ ಕಂಗೊಳಿಸುತ್ತಿರಲಿ. ನಮಸ್ಕಾರ. 🌷🙏🌷
Parvathi Sathyanarayana
ಕಾಮೆಂಟ್‌ಗಳು