ಶಿವಾನಂದ ಬೇಕಲ್
ಶಿವಾನಂದ ಬೇಕಲ್ ಬರಹಗಾರರಾಗಿ ಮತ್ತು ಬಹುಮುಖಿ ಸಾಂಸ್ಕೃತಿಕ ವ್ಯಕ್ತಿಗಳಾಗಿ ಹೆಸರಾದವರು.
ಶಿವಾನಂದ 1951ರ ಫೆಬ್ರವರಿ 21ರಂದು
ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಐತಿಹಾಸಿಕ ಸ್ಥಳ ಬೇಕಲ್ ಎಂಬಲ್ಲಿಜನಿಸಿದರು. ತಂದೆ ಬೇಕಲ ಸಾಂತನಾಯಕರು. ತಾಯಿ ಲಲಿತಾಬಾಯಿ. ಪ್ರಾಥಮಿಕದಿಂದಹೈಸ್ಕೂಲುವರೆಗೆ ಇವರ ವಿದ್ಯಾಭ್ಯಾಸ ನಡೆದದ್ದು ಬೇಕಲ್‌ನಲ್ಲಿ. ಕಾಸರಗೋಡಿನಲ್ಲಿ ಬಿ.ಎಸ್ಸಿ, ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಡ್., ಕರ್ನಾಟಕ ವಿಶ್ವ ವಿದ್ಯಾಲಯದಿಂದ ಎಂ.ಎ. ಮತ್ತುಗುಲಬರ್ಗಾ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಗಳಿಸಿದರು.
ಶಿವಾನಂದ ಬೇಕಲ್ ಚಿಕ್ಕಂದಿನಿಂದಲೇ ಬರವಣಿಗೆಯ ಹವ್ಯಾಸವನ್ನು ಬೆಳೆಸಿಕೊಂಡರು. 16ನೇವಯಸ್ಸಿನಲ್ಲಿ ಬರೆದ ‘ಕೇದಗೆಯ ಹಾವು’ ಮೊದಲ ಕಥೆಗೇ 1968ರಲ್ಲಿ ಪ್ರಜಾವಾಣಿ ದೀಪಾವಳಿಕಥಾಸ್ಪರ್ಧೆಯಲ್ಲಿ ಬಹುಮಾನ ಸಂದಿತು. ಪ್ರಾರಂಭದಲ್ಲಿ ಇವರ ಲೇಖನ ಕೃಷಿ ಮಂಗಳೂರಿನನವಭಾರತ, ಕಿನ್ನಗೋಳಿಯ ಯುಗಪುರುಷ ಮುಂತಾದ ಪತ್ರಿಕೆಗಳಲ್ಲಿ ಮೂಡಿ ನಂತರರಾಜ್ಯಮಟ್ಟದ ಪತ್ರಿಕೆಗಳಾದ ಸುಧಾ, ತರಂಗ, ಪ್ರಜಾವಾಣಿ, ತುಷಾರ, ಕರ್ಮವೀರ, ಉದಯವಾಣಿಮುಂತಾದ ಪತ್ರಿಕೆಗಳಲ್ಲಿ ಮೂಡಿಬಂತು.
ಪದವಿಗಳಿಸಿದ ನಂತರ ಭಾರತೀಯ ಪ್ರಸಾರ ಸೇವೆಗೆ ಬಂದ ಶಿವಾನಂದ ಬೇಕಲ್ ಅವರುಮಂಗಳೂರು, ಗುಲಬರ್ಗಾ, ಬೆಂಗಳೂರು ಆಕಾಶವಾಣಿ; ಬೆಂಗಳೂರು ದೂರದರ್ಶನ, ಗುಲಬರ್ಗಾದೂರದರ್ಶನ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು. ಮುಂದೆ ಗುಲಬರ್ಗಾ ಆಕಾಶವಾಣಿ ಕೇಂದ್ರದಲ್ಲಿ ಸಹಾಯಕ ಕೇಂದ್ರ ನಿರ್ದೇಶಕರಾದರು.
ಶಿವಾನಂದ ಬೇಕಲ್ ಅವರ ಕೃತಿಗಳಲ್ಲಿ ಇನ್ನಾದರೂ ಅರ್ಥವಾಗೋಣ, ಮಂಗ್ಳೂರ ಮಲ್ಲಿಗೆ ಕವನಸಂಕಲನ; ಮೈಲಿಗೆ, ಕಪ್ಪುಚುಕ್ಕೆ, ಮಳೆನಿಂತ ಮೇಲಿನ ಮರ ಕಾದಂಬರಿಗಳು; ಕರಾವಳಿಯ ಕಾವ್ಯ(ದ. ಕನ್ನಡದ ನಾಲ್ಕು ಜಿಲ್ಲೆಯ ೧೧೭ ಕವಿಗಳ ಪ್ರಾತಿನಿಕ ಕವನ ಸಂಕಲನ), ಕೈಂಕರ್ಯ, ರಜತೋತ್ಸವ ಸಂಪಾದಿತ ಕೃತಿಗಳು; ಮುಂತಾದವು ಸೇರಿವೆ. ಇದಲ್ಲದೆ ಜನಪ್ರಿಯ ಇಂಗ್ಲಿಷ್ಪ್ರೇರಣಾತ್ಮಕ ಬರಹಗಳನ್ನು ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ಬ್ರಿಯಾನ್ ಟ್ರೇಸಿ ಅವರಸಮಯದ ನಿರ್ವಹಣೆ, ಪ್ರೇರಣೆ, ವೈಯಕ್ತಿಕ ಯಶಸ್ಸು, ನಾಯಕತ್ವ, ವ್ಯವಸ್ಥಾಪನೆ, ಯಶಸ್ವೀಮಾರಾಟ, ಗುರಿ; ಪಾವ್ಲೋ ಕೊಯೆಲೊ ಅವರ ಅಲ್ಕೆಮಿಸ್ಟ್, ಎಡಿತ್ ಎಗರ್ ಉಡುಗೊರೆ; ಜೋಸೆಫ್ ಮರ್ಫಿ ಅವರ ಸುಪ್ತಪ್ರಜ್ಞಾ ಮನಸ್ಸಿನ ಶಕ್ತಿ, ಶ್ರೀ ಎಂ ಅವರ ಧ್ಯಾನ, ವಿಕ್ಟರ್ ಈಪ್ರಾಂಕಲ್ ಅವರ ಬದುಕಿನ ಅರ್ಥ ಹುಡುಕಾಟದಲ್ಲಿ ಮನುಷ್ಯ; ಜಯಶ್ರೀ ಶೆಟ್ಟಿ ರಚಿತ ಶಿವರಾಮಭಂಡಾರಿಯ ಜೀವನ ಪಯಣವಾದ ಸ್ಮೈಲಿಂಗ್ ಅಟ್ ದ ಟಾಪ್; ರಾಮರ್ಟ್ ಟಿ. ಕಿಯೋಸಾಕಿಅವರ ರಿಚ್ ಡ್ಯಾಡ್ ಪೂರ್ ಡ್ಯಾಡ್ ಮುಂತಾದವು ಸೇರಿವೆ.
ಶಿವಾನಂದ ಬೇಕಲ್ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಕ್ಯಾಸೆಟ್, ಸಿಡಿಗಳನ್ನು ಹೊರತಂದಿದ್ದಾರೆ. ಶಿವರಾಮಕಾರಂತರು, ಡಾ. ರಾಜಕುಮಾರ್, ಕೆ.ಎಸ್. ನರಸಿಂಹಸ್ವಾಮಿ, ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಹಲವಾರು ಪ್ರಮುಖರ ಸಂದರ್ಶನ, ಸಾಕ್ಷ್ಯ ಚಿತ್ರಗಳನ್ನುಆಕಾಶವಾಣಿ, ದೂರದರ್ಶನಗಳಿಗಾಗಿ ತಯಾರಿಸಿದ್ದಾರೆ. ಇವರ ಹಲವಾರು ಕಾರ್ಟೂನ್ಮಾಲಿಕೆಗಳು ನಿಯತ ಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಇವರೇ ಬರೆದು ಪ್ರಸ್ತುತ ಪಡಿಸಿರುವಹಲವಾರು ದೂರದರ್ಶನ, ರೇಡಿಯೋ ನಾಟಕ, ಪ್ರಹಸನಗಳಿಗೆ ವಿಶೇಷ ಪುರಸ್ಕಾರ ಸಂದಿವೆ.
ಶಿವಾನಂದ ಬೇಕಲ್ ಅವರಿಗೆ ೨ನೇ ಹೊಸದುರ್ಗ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಗುಲಬರ್ಗಾ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಬೇಕಲದಲ್ಲಿ ಜರುಗಿದ ಚುಟುಕುಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ, ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಗುಲಬರ್ಗಾವಿಶ್ವವಿದ್ಯಾಲಯದ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಅನೇಕ ಗೌರವಗಳು ಸಂದಿವೆ. ತಮ್ಮತಂದೆಯವರ ನೆನಪಲ್ಲಿ ಶ್ರೀ ಬೇಕಲ್ ಸಾಂತನಾಯಕ ಪ್ರತಿಷ್ಠಾನವನ್ನು ಸ್ಥಾಪಿಸಿದ್ದಾರೆ.
Shivananda Bekal
ಕಾಮೆಂಟ್‌ಗಳು