ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೇಖಾ ದಾಸ್


 ರೇಖಾ ದಾಸ್

ಇಂದು ರೇಖಾ ದಾಸ್ ಅವರ ಹುಟ್ಟುಹಬ್ಬ ಎಂದು ಕಂಡು ಬಂತು.

ರೇಖಾ ದಾಸ್ ನೇಪಾಳದಿಂದ ಬಂದು ಕರ್ನಾಟಕದಲ್ಲಿ ನೆಲೆನಿಂತು ಕನ್ನಡ ಕಲಿತು ಅಸಂಖ್ಯಾತ ಕನ್ನಡ ಚಲನಚಿತ್ರಗಳಲ್ಲಿ,  ಕಿರುತೆರೆಯ ವಿವಿಧ ಧಾರಾವಾಹಿಗಳಲ್ಲಿ, ನಾಟಕಗಳಲ್ಲಿ, ಹಾಸ್ಯಕಾರ್ಯಕ್ರಮಗಳಲ್ಲಿ ಹೀಗೆ ನಿರಂತರ ಸಕ್ರಿಯವಾಗಿರುವವರು. 

14 ನೇ ವಯಸ್ಸಿನಲ್ಲಿಯೇ ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ರೇಖಾ ದಾಸ್ ಅವರ ಮೊದಲ ಚಿತ್ರ ಟೈಗರ್ ಪ್ರಭಾಕರ್ ಅಭಿನಯದ 'ಕಂಪನ'. ಕೆಲವೊಂದು ವರದಿಗಳು ಅವರು ನಟಿಸಿದ ಚಿತ್ರಗಳ ಸಂಖ್ಯೆ 680 ಎನ್ನುತ್ತದೆ. ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರ ಜೋಡಿಯಾಗಿಯೇ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರಂತೆ. ತಮಿಳುನಾಡಿನ ಒಂದು ವಿಶ್ವವಿದ್ಯಾಲಯ ಅವರಿಗೆ ಡಾಕ್ಟರೇಟ್ ನೀಡಿದೆಯಂತೆ.  

ಹಾಸ್ಯಕಲಾವಿದರು ತಮ್ಮ ಬದುಕಿನ ಪಾಡು ಹೇಗಿದ್ದರೂ ಪ್ರೇಕ್ಷಕರನ್ನು ನಗಿಸುವ ಅಭಿನಯ ನೀಡುವವರು.  ಅಂತಹವರಲ್ಲಿ ಒಬ್ಬರಾದ ರೇಖಾ ದಾಸ್ ಅವರ ಬದುಕು ಸುಖದಿಂದ ಕೂಡಿರಲಿ ಎಂದು ಆಶಿಸೋಣ.

On the birthday of actress Rekha Das 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ