ಆನಂದಮಯಿ ಮಾ
ಆನಂದಮಯಿ ಮಾ ಆಧ್ಯಾತ್ಮದ ಅನುಭವ ಪಡೆದವರು. ಯೋಗ ಗುರುಗಳಾದ ಶಿವಾನಂದಸರಸ್ವತಿಯವರು ಈಕೆಯನ್ನು ಕುರಿತು "ಭಾರತೀಯ ಮಣ್ಣು ಅರಳಿಸಿದ ಅತ್ಯಂತಪರಿಪೂರ್ಣವಾದ ಹೂವು" ಎಂದಿದ್ದಾರೆ . ಪರಮಹಂಸ ಯೋಗಾನಂದರು ‘ಆನಂದಮಯಿ’ ಎಂಬಸಂಸ್ಕೃತ ವಿಶೇಷಣವನ್ನು ಇಂಗ್ಲಿಷ್‌ನಲ್ಲಿ "Joy-Permeated" ಎಂದು ಅನುವಾದಿಸಿದ್ದಾರೆ.
ಆನಂದಮಯಿ ಅವರ ಹುಟ್ಟು ಹೆಸರು ನಿರ್ಮಲಾ. ಆಕೆ 1896ರ ಏಪ್ರಿಲ್ 30ರಂದುಬಿಪಿನ್‌ಬಿಹಾರಿ ಭಟ್ಟಾಚಾರ್ಯ ಮತ್ತು ಮೋಕ್ಷದಾ ಸುಂದರಿ ದೇವಿ ದಂಪತಿಗಳಿಗೆ ಇಂದಿನಬಾಂಗ್ಲಾದೇಶದ ತಿಪ್ಪೆರಾ ಜಿಲ್ಲೆಯ ಖಿಯೋರಾ ಗ್ರಾಮದಲ್ಲಿ ಜನಿಸಿದರು. ಆಕೆಯ ತಂದೆ, ಮೂಲತಃತ್ರಿಪುರಾದ ವಿದ್ಯಾಕುಟ್‌ನವರು. ಅವರು ಭಕ್ತಿಭಾವದಿಂದ ಭಗವಂತನ ಕೀರ್ತನೆಗಳನ್ನುಹಾಡುತ್ತಿದ್ದರು. ನಿರ್ಮಲಾ ಅವರು ಸುಲ್ತಾನ್‌ಪುರ ಮತ್ತು ಖೋರಾ ಗ್ರಾಮದ ಶಾಲೆಗಳಲ್ಲಿಸುಮಾರು ಕೆಲವು ತಿಂಗಳು ವ್ಯಾಸಂಗ ಮಾಡಿದರು. ಆಕೆಯ ಸಾಮರ್ಥ್ಯದ ಬಗ್ಗೆ ಆಕೆಯ ಶಿಕ್ಷಕರುಸಂತಸಪಟ್ಟರೂ, ನಿರಂತರವಾಗಿ ಅಂತಃಮುಖಿಯಾಗಿ ಸಂತೋಷದಲ್ಲಿರುತ್ತಿದ್ದ ಆಕೆಯವರ್ತನೆಯಿಂದಾಗಿ, ಆಕೆಯ ತಾಯಿ ಚಿಂತಿತರಾಗಿದ್ದರು. ಒಮ್ಮೆ ಆಕೆಯ ತಾಯಿ ತೀವ್ರವಾಗಿಅನಾರೋಗ್ಯಕ್ಕೆ ಒಳಗಾದಾಗಲೂ, ಅದಕ್ಕೂ ತನಗೂ ಸಂಬಂಧವೇ ಇಲ್ಲದಂತಿದ್ದ ಬಾಲಕಿನಿರ್ಮಲಾ ಬಗ್ಗೆ ಸಂಬಂಧಿಕರು ಗೊಂದಲಕ್ಕೀಡಾದರು.
1908ರಲ್ಲಿ ಹನ್ನೆರಡು ವರ್ಷ, 10 ತಿಂಗಳ ವಯಸ್ಸಿನಲ್ಲಿ, ಆಗಿನ ಗ್ರಾಮೀಣ ಪದ್ಧತಿಗೆಅನುಗುಣವಾಗಿ, ನಿರ್ಮಲಾ ಅವರು ಬಿಕ್ರಮ್‌ಪುರದ ರಮಣಿ ಮೋಹನ್ ಚಕ್ರವರ್ತಿ ಅವರನ್ನುವಿವಾಹವಾದರು, ನಂತರ ಅವರಿಗೆ ಭೋಲಾನಾಥ್ ಎಂದು ಮರುನಾಮಕರಣ ಮಾಡಿದರು. ಆಕೆತನ್ನ ಮದುವೆಯ ನಂತರದ ಐದು ವರ್ಷಗಳನ್ನು ತನ್ನ ಸೋದರ ಮಾವನ ಮನೆಯಲ್ಲಿ ಕಳೆದರು. ಹೆಚ್ಚಿನ ಸಮಯ ಧ್ಯಾನಸ್ಥ ಸ್ಥಿತಿಯಲ್ಲಿಯೇ ಮನೆಗೆಲಸವನ್ನು ಮಾಡುತ್ತಿದ್ದರು. ನೆರೆಹೊರೆಯಗ್ರಾಮದವನಾದ ಹರಕುಮಾರೆಂಬಾತನು ಆಕೆಯ ಆಧ್ಯಾತ್ಮಿಕ ಸಿದ್ಧಿಯನ್ನು ಗುರುತಿಸಿ ಆಕೆಯನ್ನು"ಮಾ" ಎಂದು ಸಂಬೋಧಿಸುವ ಅಭ್ಯಾಸ ಬೆಳೆಸಿಕೊಂಡು ಬೆಳಿಗ್ಗೆ ಮತ್ತು ಸಂಜೆ ಆಕೆಗೆ ಸಾಷ್ಟಾಂಗನಮಸ್ಕಾರ ಮಾಡತೊಡಗಿದನು.
ನಿರ್ಮಲಾ ಸುಮಾರು ಹದಿನೇಳು ವರ್ಷದವಳಿದ್ದಾಗ, ಅಷ್ಟಗ್ರಾಮ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದತನ್ನ ಪತಿಯೊಂದಿಗೆ ವಾಸಿಸಲು ಹೋದಳು. 1918ರಲ್ಲಿ, ಅವರು ಬಜಿತ್‌ಪುರಕ್ಕೆ ತೆರಳಿದರು, ಅಲ್ಲಿಅವಳು 1924ರವರೆಗೆ ಇದ್ದಳು. ಅವರದು ಬ್ರಹ್ಮಚರ್ಯೆಯ ವಿವಾಹವಾಗಿತ್ತು. ಪತಿ ರಾಮನಿಗೆಕಾಮದ ಆಲೋಚನೆಗಳು ಬಂದಾಗಲೆಲ್ಲಾ ನಿರ್ಮಲಾಳ ದೇಹವು ಮೃತದೇಹದಂತಾಗುತ್ತಿತ್ತಂತೆ.
ಆಗಸ್ಟ್ 1922ರ ಹುಣ್ಣಿಮೆಯ ರಾತ್ರಿ, ಮಧ್ಯರಾತ್ರಿ, ಇಪ್ಪತ್ತಾರು ವರ್ಷದ ನಿರ್ಮಲಾ ಸ್ವಯಂಆಧ್ಯಾತ್ಮಿಕ ದೀಕ್ಷೆಯನ್ನು ಪಡೆದುಕೊಂಡರು. ಈ ವಿಷಯದಲ್ಲಿ ಆಕೆ ಅಶಿಕ್ಷಿತರಾಗಿದ್ದರೂ, ಎಲ್ಲಸಂಕೀರ್ಣ ವಿಧಿಗಳಾದ ಪುಷ್ಪ ಸಮರ್ಪಣೆ, ಅತೀಂದ್ರಿಯ ರೇಖಾಚಿತ್ರಗಳು (ಯಂತ್ರ) ಮತ್ತು ಅಗ್ನಿವಿಧಿಗಳೆಲ್ಲ ಸಾಂಪ್ರದಾಯಿಕ, ಪ್ರಾಚೀನ ಹಿಂದೂ ಧರ್ಮದ ಆಚರಣೆಗಳಿಗೆ ಅನುಗುಣವಾಗಿಎಂಬಂತೆ ತಾನೇ ತಾನಾಗಿ ಆಕೆಗೆ ವೇದ್ಯವಾಗುತ್ತಾ ಹೋಯಿತು.
"ಗುರುವಾಗಿ (ಗುರು) ನಾನು ಮಂತ್ರವನ್ನು ಬೋಧಿಸಿಕೊಂಡೆ, ಶಿಷ್ಯಳಾಗಿ ಅದನ್ನು ಸ್ವೀಕರಿಸಿದೆಮತ್ತು ಪಠಿಸಲು ಆರಂಭಿಸಿದೆ" ಎಂದು ಈ ಅನುಭವದ ಕುರಿತಾಗಿ ಅವರು ಹೇಳಿದರು.
ನಿರ್ಮಲಾ 1924ರಲ್ಲಿ ತಮ್ಮ ಪತಿಯೊಂದಿಗೆ ಶಹಬಾಗ್‌ಗೆ ತೆರಳಿದರು. ಅಲ್ಲಿ ಅವರ ಪತಿ ಢಾಕಾನವಾಬನ ಉದ್ಯಾನವನಗಳ ಉಸ್ತುವಾರಿಯಾಗಿ ನೇಮಿಸಲ್ಪಟ್ಟರು. ಈ ಅವಧಿಯಲ್ಲಿ ನಿರ್ಮಲಾಅವರು ಸಾರ್ವಜನಿಕ ಕೀರ್ತನೆಗಳಲ್ಲಿ ಭಾವಪರವಶರಾದರು. "ಭಾಯಿಜಿ" ಎಂದುಕರೆಯಲ್ಪಡುತ್ತಿದ್ದ ಜ್ಯೋತಿಸ್ಕಂದ್ರ ರೇ ಅವರು ಆಕೆಯ ಆರಂಭಿಕ ಮತ್ತು ನಿಕಟ ಶಿಷ್ಯರಾದರು. ನಿರ್ಮಲಾ ಅವರನ್ನು ಆನಂದಮಯಿ ಮಾ ಎಂದು ಕರೆಯಲು ಮೊದಲು ಸೂಚಿಸಿದವರು ಅವರು. 1929ರಲ್ಲಿ ರಾಮನ ಕಾಳಿಮಂದಿರದ ಆವರಣದಲ್ಲಿ ಆನಂದಮಯಿ ಮಾ ಅವರಿಗೆ ಮೊದಲಆಶ್ರಮವನ್ನು ರಾಮನಾದಲ್ಲಿ ನಿರ್ಮಿಸಲು ಅವರು ಪ್ರಮುಖ ಕಾರಣರಾಗಿದ್ದರು. 1926ರಲ್ಲಿ, ಅವರು ಸಿದ್ಧೇಶ್ವರಿ ಪ್ರದೇಶದಲ್ಲಿ ಪಾಳುಬಿದ್ದಿದ್ದ ಪುರಾತನ ಕಾಳಿ ದೇವಸ್ಥಾನವನ್ನುಮರುಸ್ಥಾಪಿಸಿದರು. ಶಹಬಾಗ್ನಲ್ಲಿದ್ದ ಸಮಯದಲ್ಲಿ, ಹೆಚ್ಚು ಹೆಚ್ಚು ಜನರು ದೈವಿಕತೆಯ ಜೀವಂತಸಾಕಾರವಾಗಿದ್ದ ಮಾ ಅವರನ್ನು ಕಾಣಲು ಬರತೊಡಗಿದರು.
ಮುಂದೆ ಅವರು ಡೆಹ್ರಾಡೂನ್‌ಗೆ ಬಂದಾಗ ವಿವಿಧ ವಿದ್ವಾಂಸರು ಆನಂದಮಯಿ ಮಾ ಅವರಆಧ್ಯಾತ್ಮಿಕ ಶಕ್ತಿ ಮತ್ತು ಪ್ರೀತಿ ತುಂಬಿದ ಸಂದೇಶಕ್ಕೆ ಆಕರ್ಷಿತರಾದರು, ಆದರೂ ಆಕೆ ತಮ್ಮನ್ನು"ಅಕ್ಷರಶಃ ಮಗು" ಎಂದು ಕರೆದುಕೊಳ್ಳುತಿದ್ದರು. ಸಂಸ್ಕೃತ ವಿದ್ವಾಂಸ, ತತ್ವಜ್ಞಾನಿ ಮತ್ತುವಾರಣಾಸಿಯ ಸರ್ಕಾರಿ ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರಂಗೋಪಾಲ್ ಮುಖರ್ಜಿಮಹಾಮಹೋಪಾಧ್ಯಾಯ ಗೋಪಿನಾಥ್ ಕವಿರಾಜ್, ಮತ್ತು ತ್ರಿಗುಣ ಸೇನ್ ಅವರಅನುಯಾಯಿಗಳಲ್ಲಿ ಇದ್ದರು. ಖ್ಯಾತ ನೃತ್ಯ ಕಲಾವಿದ ಉದಯ್ ಶಂಕರ್ ಅವರು ಆನಂದಮಯಿಮಾ ಅವರ ನೃತ್ಯದ ವಿಶ್ಲೇಷಣೆಯಿಂದ ಪ್ರಭಾವಿತರಾದರು. ಮಾ ಅವರು ಜನರು ಮತ್ತು ದೇವರನಡುವಿನ ಸಂಬಂಧದ ರೂಪಕವಾಗಿ ನೃತ್ಯವನ್ನು ವಿಶ್ಲೇಷಿಸುತ್ತಿದ್ದರು. ಅವರು ಉದಿಯಾ ಬಾಬಾ, ಶ್ರೀ ಅರಬಿಂದೋ, ರಮಣ ಮಹರ್ಷಿ, ಸ್ವಾಮಿ ರಾಮದಾಸ್, ನೀಮ್ ಕರೋಲಿ ಬಾಬಾ ಮತ್ತುಪರಮಹಂಸ ಯೋಗಾನಂದರಂತಹ ಪ್ರಸಿದ್ಧ ಹಿಂದೂ ಸಂತರ ಸಮಕಾಲೀನರಾಗಿದ್ದರು.
ಮಾ ಅವರು 1982ರ ಆಗಸ್ಟ್ 27ರಂದು
ಡೆಹ್ರಾಡೂನ್‌ನಲ್ಲಿ ನಿಧನರಾದರು. 1982ರ ಆಗಸ್ಟ್ 29ರಂದು ಉತ್ತರ ಭಾರತದಹರಿದ್ವಾರದಲ್ಲಿರುವ ಕಂಖಾಲ್ ಆಶ್ರಮದ ಅಂಗಳದಲ್ಲಿ ಅವರ ಸಮಾಧಿಯನ್ನುನಿರ್ಮಿಸಲಾಯಿತು.
"ನಿಮ್ಮ ಸ್ವಂತ ದೇಹವನ್ನು ನೀವು ಪ್ರೀತಿಸುವಂತೆ, ಪ್ರತಿಯೊಬ್ಬರನ್ನು ನಿಮ್ಮ ಸ್ವಂತ ದೇಹಕ್ಕೆಸಮಾನವಾಗಿ ಪರಿಗಣಿಸಿ. ಸರ್ವೋಚ್ಚ ಅನುಭವವು ಆವಿರ್ಭವಿಸಿದಾಗ, ಪ್ರತಿಯೊಬ್ಬರ ಸೇವೆಯುಒಬ್ಬರ ಸ್ವಂತ ಸೇವೆ ಎಂದು ಪ್ರಕಟವಾಗುತ್ತದೆ. ಅದನ್ನು ಪಕ್ಷಿ, ಕೀಟ, ಪ್ರಾಣಿ ಅಥವಾ ಮನುಷ್ಯಎಂದಾದರೂ ಕರೆಯಿರಿ, ನೀವು ಇಷ್ಟಪಡುವ ಯಾವುದೇ ಹೆಸರಿನಿಂದಾರೂ ಕರೆಯಿರಿ, ಅವುಗಳಪ್ರತಿಯೊಂದಕ್ಕೆ ಸೇವೆ ಮಾಡುವಾಗಲೂ ಒಬ್ಬನು ತನ್ನ ಸ್ವಂತ ಸೇವೆಯನ್ನೇಮಾಡುತ್ತಿರುತ್ತಾನೆ"ಎಂಬುದು ಮಾ ಅವರ ಪ್ರಸಿದ್ಧ ಅನುಭವೋಕ್ತಿಗಳಲ್ಲಿ ಒಂದು.
Anandamayi Maa
ಕಾಮೆಂಟ್‌ಗಳು