ನಿಖಿತಾ ಅಡವೀಶಯ್ಯ
ನಿಖಿತಾ ಅಡವೀಶಯ್ಯ
ನಿಖಿತಾ ಅಡವೀಶಯ್ಯ ಶಿಕ್ಷಕಿ, ಕೃಷಿ ತಜ್ಞೆ ಮತ್ತು ಬರಹಗಾರ್ತಿ.
ಮೇ 17 ನಿಖಿತಾ ಅವರ ಜನ್ಮದಿನ.
ಬೆಂಗಳೂರಿನ ಪ್ರಾರ್ಥನಾ ಶಾಲೆಯಲ್ಲಿ ಶಿಕ್ಷಕಿಯಾಗಿರುವ ನಿಖಿತಾ ಅವರು ಮಣ್ಣಿನೊಂದಿಗೆ ಸಹಾ ಆಪ್ತ ಸಂಬಂಧ ಇಟ್ಟುಕೊಂಡಿದ್ದಾರೆ. ಜೊತೆಗೆ ಸಾಹಿತ್ಯ ಕೃಷಿಯೂ ಸಾಗಿದೆ. ಕಥೆ, ಕವನ, ಚಿಂತನ ಬರಹಗಳನ್ನು ಅಚ್ಚುಕಟ್ಟಾಗಿ ಮೂಡಿಸುತ್ತಾರೆ. ಅಪಾರ ಓದುತ್ತಾರೆ.
ನಿಖಿತಾ ಅಡವೀಶಯ್ಯ ಅವರು ಪ್ರಕಟಿಸಿರುವ ವಿಶಿಷ್ಟ ಕೃತಿ 'ವೈಶಾಲಿ ಕಾಸರವಳ್ಳಿ ಸಂಕಥನ' (ಆತ್ಮಕತೆ). ವೈಶಾಲಿ ಅವರು ಬದುಕಿದ್ದಾಗ ಅವರೊಡನೆ ಸಂದರ್ಶನ, ಅವರ ಬದುಕು, ಸಾಧನೆಗಳು, ಅವರ ಕುಟುಂಬದವರ ಮತ್ತು ಆಪ್ತರ ಮಾತು ಇತ್ಯಾದಿಗಳೆಲ್ಲವನ್ನೂ ನಿಖಿತಾ ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಗಿರೀಶ್ ಕಾಸರವಳ್ಳಿ ಈ ಕೃತಿಗೆ ಮೊದಲ ಮಾತುಗಳನ್ನು ಬರೆದಿದ್ದಾರೆ.
ಕವಯತ್ರಿಯಾಗಿ ಮತ್ತು ಚಿಂತಕಿಯಾಗಿಯೂ ನಿಖಿತಾ ಅವರ ಬರಹಗಳು ಗಮನ ಸೆಳೆಯುತ್ತವೆ. ಅವರ ಒಂದು ಕವಿತೆ ಇಂತಿದೆ:
ಒಂದೊಂದೇ ಮುತ್ತುಗಳು
ಕಳೆದು ಹೋಗುತಿಹುವು
ಅರಿಯೆ ಕಾಪಿಡಲು
ನಾನೋ ಬರಿಯ ಮಣ್ಣು
ನೆನಪುಗಳು ಮಾತ್ರ ಹಸಿ
ಸಂಬಂಧಗಳು ಬರಿ ಹುಸಿ
ಮರು ಹುಟ್ಟುವವೇ ಸುಂದರ ಕ್ಷಣಗಳು?
ಉರುಳುವವೇ ಅಹಮಿನ ಗೋಡೆಗಳು?
ಅರಿಯೆ ಮರುಸೃಷ್ಟಿಯ
ಅರಿಯೆ ಗೋಡೆ ಕೆಡವಲು
ನಾನೋ ಬರಿಯ ಮಣ್ಣು
ಆತ್ಮೀಯರಾದ ನಿಖಿತಾ ಅಡವೀಶಯ್ಯ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Nikitha Adaveeshaiah
ಕಾಮೆಂಟ್‌ಗಳು