ಸಹನಾ ಪ್ರಸಾದ್
ಸಹನಾ ಪ್ರಸಾದ್
ಡಾ. ಸಹನಾ ಪ್ರಸಾದ್ ಬಹುಮಖಿ ಪ್ರತಿಭಾವಂತರು.
ಮೇ 14 ಸಹನಾ ಪ್ರಸಾದ್ ಅವರ ಜನ್ಮದಿನ.
ಡಾ. ಸಹನಾ ಪ್ರಸಾದ್ ಗಣಿತ, ಸಂಖ್ಯಾಶಾಸ್ತ್ರ, ಮಾಹಿತಿ ವಿಜ್ಞಾನ ಮುಂತಾದವುಗಳಲ್ಲಿ ಶ್ರೇಷ್ಠ ಪರಿಣತಿಗಳಿಸಿ, ಗಣಿತದಲ್ಲಿ ಡಾಕ್ಟರೇಟ್ ಸಹಾ ಪಡೆದಿದ್ದಾರೆ. ಬೆಂಗಳೂರು ಮತ್ತು ದೆಹಲಿ ಮುಂತಾದೆಡೆಗಳಲ್ಲಿ ಅವರ ಶೈಕ್ಷಣಿಕ ಸಾಧನೆಗಳು ನಡೆದವು.
ಡಾ. ಸಹನಾ ಪ್ರಸಾದ್ ಅವರು ಎನ್.ಎಸ್.ವಿ.ಕೆ. ಪಿಯು ಕಾಲೇಜು, ಮಹಾವೀರ್ ಜೈನ್ ಕಾಲೇಜುಗಳಲ್ಲಿ ಅಧ್ಯಾಪನ ನಡೆಸಿ, ಕ್ರೈಸ್ತ್ ವಿಶ್ವವಿದ್ಯಾಲಯದಲ್ಲಿ ಸ್ಟಾಟಿಸ್ಟಿಕ್ಸ್ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸಿದವರು.
ಡಾ. ಸಹನಾ ಪ್ರಸಾದ್ ಅವರು ಪ್ರೊಫೆಸರ್, ಸಂಖ್ಯಾಶಾಸ್ತ್ರಜ್ಞೆ, ಮಾಹಿತಿ ವಿಜ್ಞಾನಿ, ಸಕ್ರಿಯ ಬದುಕಿನ ವಿಧಾನಗಳ ಮಾರ್ಗದರ್ಶಿ ಹಾಗೂ ಇವೆಲ್ಲುವುಗಳ ಜೊತೆ ಜೊತೆಗೆ ಕನ್ನಡ ಮತ್ತು ಇಂಗ್ಲಿಷಿನಲ್ಲಿ ಜನಪ್ರಿಯ ಬರಹಗಾರ್ತಿ. ಇವರ ಚಿಂತನಪೂರ್ಣ ಲೇಖನ, ನಗೆಬರಹ, ಕತೆ, ಕವಿತೆ,ಅಂಕಣ, ಪ್ರವಾಸ ಸಾಹಿತ್ಯ ಮುಂತಾದ ವೈವಿಧ್ಯಗಳು ಎಲ್ಲ ಪ್ರತಿಷ್ಟಿತ ಕನ್ನಡ ಮತ್ತು ಇಂಗ್ಲೀಷ್ ನಿಯತಕಾಲಿಕಗಳಲ್ಲಿ ಪ್ರಕಟವಾಗುತ್ತಿವೆ. ಹಿಂದಿಯಲ್ಲೂ ಕವಿತೆ ಬರೆದಿದ್ದಾರೆ.ಇವರು ಶೈಕ್ಷಣಿಕ ನಿಯತಕಾಲಿಕಗಳಲ್ಲಿ ಸಂಶೋಧನಾತ್ಮಕ ಲೇಖನಗಳನ್ನೂ ಪ್ರಕಟಿಸಿದ್ದಾರೆ. ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದಾರೆ. ಇವರ ಮಾರ್ಗದರ್ಶಿ ಲೇಖನಗಳು ಮತ್ತು ಕೌಶಲ್ಯ ಹೊಂದಾಣಿಕೆ - ಅಭಿವೃದ್ಧಿ ಬೋಧಪ್ರದ ಕಮ್ಮಟಗಳು ಹೆಸರಾಗಿವೆ. ಇವರು ಕಾರ್ಪೊರೇಟ್ ವಲಯದಲ್ಲಿನ ಮಾಹಿತಿ ವಿಶ್ಲೇಷಣಾ ಕ್ಷೇತ್ರದಲ್ಲಿನ ತರಬೇತುಗಾರ್ತಿಯಾಗಿಯೂ ಹೆಸರಾಗಿದ್ದಾರೆ.
ಸಹನಾ ಪ್ರಸಾದ್ ಅವರಿಗೆ ವಿಶ್ವ ಬ್ಯಾಂಕ್ ಪ್ರಶಸ್ತಿ ಸಂದಿದೆ. ಇವರ ವಿಷಯ ಏಷಿಯಾ ರಿಸರ್ಚ್ ನ್ಯೂಸ್ನಲ್ಲಿ ಪ್ರಸ್ತುತಗೊಂಡಿದೆ. ಸ್ಪ್ರಿಂಗರ್ ನೇಚರ್ ಅಂತಹ ಪ್ರತಿಷ್ಠಿತ ಪ್ರಕಾಶನ ಸಂಸ್ಥೆಗಳು ಇವರ ಕೃತಿಗಳನ್ನು ಪ್ರಕಟಿಸಿವೆ.
ಆತ್ಮೀಯರೂ, ಬಹುಮುಖಿ ಪ್ರತಿಭಾನ್ವಿತರೂ, ಸಾಧಕರೂ ಆದ ಸಹನಾ ಪ್ರಸಾದ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Dr. Sahana Prasad
ಕಾಮೆಂಟ್‌ಗಳು