ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೃಷ್ಣ ಶರ್ಮ


 ಎಸ್. ವಿ. ಕೃಷ್ಣ ಶರ್ಮ


ವಿಜ್ಞಾನಿಗಳಾದ ಎಸ್. ವಿ. ಕೃಷ್ಣ ಶರ್ಮ ಅವರು ಕನ್ನಡ ರಂಗಭೂಮಿಯ ಹಿರಿಯ ರಂಗಕರ್ಮಿ, ನಾಟಕಕಾರ, ನಟ ಮತ್ತು ನಿರ್ದೇಶಕರು. 

ಕೃಷ್ಣ ಶರ್ಮ ಅವರು 1949ರ ಮೇ 15ರಂದು ಜನಿಸಿದರು.  ಇವರು ಭಾರತೀಯ ಬಾಹ್ಯಾಕಾಶ ಸಂಸ್ಥೆಯಲ್ಲಿ ಇಂಜಿನಿಯರ್ - ವಿಜ್ಞಾನಿಯಾಗಿ ಸೇವೆ ಸಲ್ಲಿಸಿದವರು.

ಕೃಷ್ಣ ಶರ್ಮರಿಗೆ ಕಳೆದ ಐದು ದಶಕಗಳಿಂದಲೂ ರಂಗಭೂಮಿಯ ನಂಟು. ಬಾಲ್ಯದಿಂದಲೇ ನಾಟಕಗಳಲ್ಲಿ ಅಭಿನಯಿಸುವ ಹವ್ಯಾಸ ಮೂಡಿಸಿಕೊಂಡ ಶರ್ಮರು ಅನೇಕ ನಾಟಕಗಳನ್ನು  ರಚಿಸಿ ನಿರ್ದೇಶಿಸಿದ್ದು  ಸೊಹ್ರಾಬ್ - ರುಸ್ತುಂ, ಸುಯೋಧನ, ಪೌಲಸ್ಥ್ಯನ ಪ್ರಣಯ ಕಥೆ, ಸತ್ಯಂ ವಧ ಮುಂತಾದವು ರಂಗದ ಮೇಲೆ ಅನೇಕ ಪ್ರದರ್ಶನಗಳನ್ನು ಕಂಡು ಜನಮೆಚ್ಚುಗೆ ಗಳಿಸಿವೆ.

ಕೃಷ್ಣ ಶರ್ಮ ಅವರು ಆಕಾಶವಾಣಿ, ದೂರದರ್ಶನಗಳಲ್ಲಿ 'ಮಾನ್ಯತೆ' ಪಡೆದ ಕಲಾವಿದರಾಗಿ ಹಲವಾರು ನಾಟಕಗಳನ್ನು ನಿರ್ದೇಶಿಸಿ, ಅಭಿನಯಿಸಿದ್ದು ಅವರು ರಚಿಸಿದ ಅನೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ ಹಾಗೂ ದೂರದರ್ಶನದಲ್ಲಿ ಪ್ರದರ್ಶಿತಗೊಂಡಿದೆ.

ಕೃಷ್ಣ ಶರ್ಮ ಅವರು ತಮ್ಮದೇ ಆದ 'ಸಂಧ್ಯಾ ಕಲಾವಿದರು' ಹವ್ಯಾಸಿ ನಾಟಕ ತಂಡದ ಕಲಾವಿದರಿಗೆ ಮಾರ್ಗದರ್ಶಕರು. ಕಳೆದ ಐದು ದಶಕಗಳಿಂದ ನಿರಂತರವಾಗಿ ನಾಟಕಗಳ ನಿರ್ದೇಶನ ಮತ್ತು ಅಭಿನಯಗಳಲ್ಲಿ ತೊಡಗಿಕೊಂಡಿದ್ದಾರೆ.

ಹಿರಿಯರಾದ ಎಸ್. ವಿ. ಕೃಷ್ಣ ಶರ್ಮ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.

Happy birthday Krishna Sharma Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ