ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಳೆ ಬರುವ ಕಾಲಕ್ಕೆ



 ಮಳೆ ಬರುವ ಕಾಲಕ್ಕ ಒಳಗ್ಯಾಕ ಕೂತೆವು
ಮಳೆಯೊಳಗೆ ಜಳಕ ಮಾಡೋಣಾ ನಾವೂನೂ
ಮೋಡಗಳ ಆಟ ಆಡೋಣಾ


ಮರಿ ಗುಡುಗು ಕಲೆವಾಗ
ಮಳೆಗಾಳಿ ಸೆಳೆವಾಗ
ಮರಗಿಡಗಳ ಎಳೆವಾಗ
ನಾವ್ಯಾಕ ಕೂತೇವೂ ಮನೆಯಲ್ಲಿ
ನಾವ್ಯಾಕ ಅವಿತು ಕೂತೇವೂ

ಕೋಲ್ಮಿಂಚು ಇಣಕಿಣಕಿ
ಕಣ್ಕುಣಿಸಿ ಕೆಣಕೆಣಕಿ
ಬಾ ಗೆಣೆಯ ಹೊರಗೆ,
ಹೊರಗೆ ಎನುವಾಗ
ಒಳಸೇರಿ ಹರೆ ಮೀರಿದ್ಹಾಂಗ ಕೂತೇವೂ

ರಚನೆ. ದ. ರಾ. ಬೇಂದ್ರೆ.

ಕೃತಜ್ಞತೆ
ಗೀತೆ ನೆನಪಿಸಿದ: Veda Sudarshan
ಹುಡುಕಿ ಕೊಟ್ಟ: Lrphks Kolar
ಚಿತ್ರಕೃಪೆ: thespace.ink


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ