ಯಶೋಧರಾ ದಾಸಪ್ಪ
ಯಶೋಧರಾ ದಾಸಪ್ಪ
ಯಶೋಧರಾ ದಾಸಪ್ಪ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಕರ್ನಾಟಕ ಏಕೀಕರಣ ಹೋರಾಟಗಾರ್ತಿಯಾಗಿ, ಗಾಂಧೀ ಮಾರ್ಗದಲ್ಲಿ ನಡೆದ ಸಮಾಜ ಸೇವಕಿಯಾಗಿ ಮತ್ತು ಕರ್ನಾಟಕ ರಾಜ್ಯದ ಮಂತ್ರಿಗಳಾಗಿ ಸೇವೆ ಸಲ್ಲಿಸಿದವರು.
ಯಶೋಧರಾ ಅವರು 1905ರ ಮೇ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಅವರು ಪ್ರಸಿದ್ಧ ಸಮಾಜ ಸೇವಕರಾದ ಕೆ.ಎಚ್.ರಾಮಯ್ಯ ಅವರ ಪುತ್ರಿ. ಯಶೋಧರಾ ಅವರು ಶ್ರೀಮಂತ ಕುಟುಂಬದಲ್ಲಿ ಜನಿಸಿದರೂ, ಸಾಮಾಜಿಕ ಕಾರ್ಯಕರ್ತೆಯಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸೇರಲು ನಿರ್ಧರಿಸಿದರು. ಅವರು ಲಂಡನ್ ಮಿಷನ್ ಸ್ಕೂಲ್ ಮತ್ತು ಮದ್ರಾಸಿನ ಕ್ವೀನ್ ಮೇರಿ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದರು.
ಯಶೋಧರ ದಾಸಪ್ಪ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು. ಇವರು ಪಾಲ್ಗೊಂಡಿದ್ದ 1930ರ ಅರಣ್ಯ ಸತ್ಯಾಗ್ರಹ ಚಳವಳಿಯಲ್ಲಿ 1200ಕ್ಕೂ ಹೆಚ್ಚು ಜನ ಸೆರೆವಾಸಕ್ಕೆ ಸೇರಿದರು. 1938ರ ವಿದುರಾಶ್ವತ್ಥ ಚಳುವಳಿಯಲ್ಲಿ 35 ಮಂದಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದರು. ಈ ಚಳವಳಿಯಲ್ಲಿ ಭಾಗವಹಿಸಿದ್ದಕ್ಕಾಗಿ ಇವರು ಸೆರೆವಾಸಕ್ಕೆ ತಳ್ಳಲ್ಪಟ್ಟರು.
ಯಶೋಧರಾ ಅವರ ಮನೆಯು ಸ್ವಾತಂತ್ರ್ಯ ಸಂಗ್ರಾಮದಲ್ಲಿದ್ದ ಭೂಗತ ಸತ್ಯಾಗ್ರಹಿಗಳ ಚಟುವಟಿಕೆಯ ಕೇಂದ್ರವಾಗಿತ್ತು. ಸ್ವಾತಂತ್ರ್ಯ ಆಂದೋಲನಕಾರರ ಮೇಲೆ ಕ್ರೂರ ಕಾರ್ಯಾಚರಣೆಗಳಿಗೆ ಕುಖ್ಯಾತನಾಗಿದ್ದ ಹ್ಯಾಮಿಲ್ಟನ್ ಹೆಸರನ್ನು ಕಟ್ಟಡವೊಂದಕ್ಕೆ ಇಡಲು ನಿರ್ಧರಿಸಿದಾಗ ಯಶೋಧರಾ ಅವರು ಸರ್ಕಾರದ ವಿರುದ್ಧ ಅನೇಕ ಆಕ್ರಮಣಕಾರಿ ಭಾಷಣಗಳನ್ನು ಮಾಡಿದರು.
ಯಶೋಧರಾ ದಾಸಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಎಸ್.ಆರ್.ಕಂಠಿ ಮತ್ತು ಎಸ್.ನಿಜಲಿಂಗಪ್ಪ ಅವರ ಕರ್ನಾಟಕ ರಾಜ್ಯ ಸರ್ಕಾರಗಳಲ್ಲಿ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ನಿಜಲಿಂಗಪ್ಪನವರ ಸಚಿವ ಸಂಪುಟದಲ್ಲಿ ಹಿರಿಯ ಸಚಿವೆಯಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿ ಪಾನನಿರೋದದ ಕುರಿತಾಗಿದ್ದ ಆಜ್ಞೆ ತೆರವುಗೊಳಿಸಿದ್ದನ್ನು ವಿರೋಧಿಸಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಯಶೋಧರ ಅವರು ಜವಾಹರಲಾಲ್ ನೆಹರು ಅವರ ಸರ್ಕಾರದಲ್ಲಿ ಸಚಿವರಾಗಿದ್ದ ಎಚ್.ಸಿ.ದಾಸಪ್ಪ ಅವರನ್ನು ವಿವಾಹವಾಗಿದ್ದರು. ಈ ದಂಪತಿಗಳ ಕಿರಿಯ ಪುತ್ರ ತುಳಸಿದಾಸ್ ದಾಸಪ್ಪ ಅವರು ಚರಣ್ ಸಿಂಗ್ ಅವರ ಕೇಂದ್ರಸಂಪುಟದಲ್ಲಿ ರಾಜ್ಯ ಸಚಿವರಾಗಿದ್ದರು.
ಯಶೋಧರಾ ದಾಸಪ್ಪ ಅವರಿಗೆ ಭಾರತ ಸರ್ಕಾರವು 1972ರಲ್ಲಿ ಪದ್ಮಭೂಷಣ ಗೌರವವನ್ನು ಸಲ್ಲಿಸಿತು.
ಯಶೋಧರಾ ದಾಸಪ್ಪ ಅವರು 1980ರ ವರ್ಷದಲ್ಲಿ ನಿಧನರಾದರು. ಇಂದು ಕೂಡಾ ಅವರ ಹೆಸರಿನಲ್ಲಿ ಅನೇಕ ಸಮಾಜಮುಖಿ ಕಾರ್ಯಗಳು ನಡೆಯುತ್ತಿವೆ.

On the birth anniversary of freedom fighter Yashodhara Dasappa
ಕಾಮೆಂಟ್‌ಗಳು