ವಾಣಿ ಟಿ.ಕೆ
ವಾಣಿ ಟಿ. ಕೆ.
Happy birthday Vani Tk Madam 🌷🙏🌷
ಹಿರಿಯರಾದ ಟಿ. ಕೆ. ವಾಣಿ ಅವರು ಕವಯತ್ರಿ ಮತ್ತು ಬಹುಮುಖಿ ಪ್ರಾಜ್ಞೆ.
ಜೂನ್ 11 ವಾಣಿ ಅವರ ಜನ್ಮದಿನ. ವಾಣಿ ಅವರು ಸಾಹಿತ್ಯ, ಸಂಸ್ಕೃತಿ, ಸಂಗೀತ, ಚಿತ್ರಕಲೆ, ಪ್ರಕೃತಿ ಪ್ರೇಮ, ಆಧ್ಯಾತ್ಮ ಹೀಗೆ ಎಲ್ಲ ವ್ಯಾಪ್ತಿಗಳಲ್ಲಿ ಆಸಕ್ತಿ ಹಚ್ಚಿಕೊಂಡ ಅಪೂರ್ವ ವ್ಯಕ್ತಿ.
ವಾಣಿ ಅವರು ತಮ್ಮ ಬೃಹತ್ ಕುಟುಂಬದ ಸಹೋದರ ಸಹೊದರಿ ಮತ್ತು ಅವರ ಕುಟುಂಬದೊಂದಿಗೆ ಹೊಂದಿರುವ ಅವಿಭಕ್ತ ಕುಟುಂಬದಂತಹ ಸೊಬಗಿನ ಅನ್ಯೋನ್ಯ ಪ್ರೀತಿ ಮತ್ತು ಸಕಲರನ್ನೂ ಸಹೃದತೆಯೊಂದಿಗೆ ಕಾಣುವ ಆಪ್ತಭಾವ ವಿಸ್ಮಯ ಹುಟ್ಟಿಸುವಂತದ್ದು ಮತ್ತು ನಮ್ಮಲ್ಲೂ ಈ ಭಾವ ಜಾಗೃತವಾಗಿರಲಿ ಎಂದು ಆಶಯ ಚಿಮ್ಮಿಸುವಂತದ್ದು.
ಹಿರಿಯರಾದ ವಾಣಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
ಕಾಮೆಂಟ್‌ಗಳು