ಆಟಿ 18
ಆಟಿ 18 ಹಬ್ಬದ ಸಂಭ್ರಮ
ಲೇಖಕಿ: ಡಾ. ಸರ್ವಮಂಗಳಾ ಶಾಸ್ತ್ರಿ
ಆಟಿ ಮದ್ದು ಸೊಪ್ಪು, ಮಧುಬನ ಎಂದು ಕರೆಯಲ್ಪಡುವ ಔಷಧೀಯ ಗಿಡದ ರಸದಿಂದ ತಯಾರಿಸಿದ ಪಾಯಸ ಇಂದು (ಆಗಸ್ಟ್ 4ರಂದು) ಕೊಡಗಿನ ಮನೆ ಮನೆಯಲ್ಲೂ ಘಮಘಮಿಸುತ್ತದೆ.
"ತೊಟ್ಟೀಲ ಹೊತ್ಕೊಂಡು ತವರ್ಬಣ್ಣ ಉಟ್ಕೊಂಡು" ಅಮ್ಮಕೊಟ್ಟ ಗಿಡಗಳನ್ನು ಹೊತ್ತುಕೊಂಡು ಹುಬ್ಬಳ್ಳಿಗೆ ಬಂದವಳು ನಾನು.ಆ ಗಿಡಗಳಲ್ಲಿ ಈ ಮಧುಬನ ಅಥವಾ ಆಟಿ ಸೊಪ್ಪುಕೂಡ ಒಂದು. ಅದು ನನಗೆ ಅಮ್ಮನಷ್ಟೆ ಪ್ರೀತಿಯದ್ದು.ಕೊಡಗಿನ ಮಗಳಾದ ನಾನು ಇಲ್ಲಿ ಆಟಿ18ರಂದು ಆಟಿ ಸೊಪ್ಪಿನ ಪಾಯಸ,ಹಾಲುಬಾಯಿ ಮತ್ತು ಕೆಸುವಿನ ಪತ್ರೋಡೆಯನ್ನು ಮಾಡುತ್ತೇನೆ. ನನ್ನ ಆಪ್ತರಿಗೂ ಹಂಚುತ್ತೇನೆ. ಹುಬ್ಬಳ್ಳಿಯ ಶ್ರಾವಣಕ್ಕೆ ನಮ್ದೊಂದು ಆಟಿಯ ಸೇರ್ಪಡೆ. ನಮ್ಮ ಆಚರಣೆಯನ್ನು ಮರೆಯಬೇಡಿ ಎಂದು ಅಮ್ಮ ಆಗಾಗ ಹೇಳುತ್ತಿರುತ್ತಾಳೆ.ನನಗೂ ಅನ್ನಿಸುತ್ತದೆ ಬಾಲ್ಯದ ಸಂಭ್ರಮದ ನೆನಪು ಮರುಕಳಿಸುತ್ತದೆ.ಈಗ ನಾನೂ ಅಮ್ಮ.
ಕೊಡಗು ಜಿಲ್ಲೆಯಲ್ಲಿ ಈ ಪಾಯಸಕ್ಕೆ ಕಕ್ಕಡ ಪದಿನೆಟ್ಟ್ ಪಾಯಸ ಎಂದು ಕರೆಯುತ್ತಾರೆ. ಕಕ್ಕಡ ಎಂದರೇ ಆಟಿ ತಿಂಗಳು ಅಥವಾ ಕರ್ಕಾಟಕ ಮಾಸ ಎಂದು ಅರ್ಥ. ದಟ್ಟಾರಣ್ಯದಿಂದ ಕೂಡಿರುವ ಕೊಡಗಿನಲ್ಲಿ ಸಾಕಷ್ಟು ಔಷಧಿಯ ಗುಣಗಳುಳ್ಳ ಸಸ್ಯ ಪ್ರಭೇದಗಳಿವೆ. ಅವುಗಳಲ್ಲಿ ಆಟಿ ಸೊಪ್ಪು ಪ್ರಮುಖವಾದುದ್ದು. ವೈಜ್ಞಾನಿಕವಾಗಿ ಜಸ್ಟೀಸಿಯ ವೈನಾಡೆನ್ನಿಸ್ ಎಂದು ಕರೆಯುವ ಈ ಸಸ್ಯ ಜಿಲ್ಲೆಯ ಕಾಡುಗಳು ಮಾತ್ರವಲ್ಲದೇ ಕಾಫಿ ತೋಟದಲ್ಲೂ ಹೇರಳವಾಗಿ ಕಾಣಸಿಗುತ್ತದೆ.
ಕಕ್ಕಡ ಪದಿನೆಟ್ ಹಾಗೂ ಆಟಿ ಪದಿನೆಣ್ಮದ ವೈಶಿಷ್ಟ್ಯವೇ ಮದ್ದುಸೊಪ್ಪಿನ ಪಾಯಸ ಸೇವನೆ. ಮಧುಬನ ಹಸಿರು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಉದ್ದನೆಯ ಕಡ್ಡಿಯಲ್ಲಿ ಎಲೆಗಳು ತುಂಬಿರುತ್ತವೆ. ಆಷಾಢ, ಕಕ್ಕಡ ಅಥವಾ ಆಟಿ ತಿಂಗಳ ಆರಂಭ ದಿನದಿಂದ ಹಿಡಿದು ಮಧುಬನ ಗಿಡದಲ್ಲಿ ಒಂದೊಂದು ವಿಧದ ಔಷಧದ ಗುಣಗಳು ಸೇರಲಾರಂಭಿಸುತ್ತದೆಯಂತೆ. 18ನೇ ದಿನದಂದು 18 ವಿಧದ ಔಷಧಗಳು ಸೇರಿ ಸಂಪೂರ್ಣವಾಗುತ್ತದೆ ಎಂದು ಪ್ರತೀತಿ. ಈ ದಿನದಂದು ಮಾತ್ರ ಅದು ಸುವಾಸನಾ ಭರಿತವಾಗಿರುತ್ತದೆ.
ಸಿಹಿ ಪಾಯಸ: ಪ್ರಮುಖವಾಗಿ ಈ ಗಿಡದ ರಸದಿಂದ ಪಾಯಸ ತಯಾರಿಸುತ್ತಾರೆ. ಅಕ್ಕಿಯಿಂದ ತಯಾರಿಸುವ ಪಾಯಸಕ್ಕೆ ಈ ರಸ ಬೆರೆಸುತ್ತಾರೆ. ಸಿದ್ಧವಾದ ಪಾಯಸಕ್ಕೆ ತೆಂಗಿನ ತುರಿ, ತುಪ್ಪ, ಜೇನು ಬೆರೆಸಿ ತಿನ್ನುತ್ತಾರೆ. ಈ ಪಾಯಸ ಸೇವಿಸಿದ ಬಳಿಕ ಮೂತ್ರ ಕೂಡ ಕೆಂಬಣ್ಣಕ್ಕೆ ತಿರುಗುತ್ತದೆ. ಅದು ಎಷ್ಟು ಕೆಂಪಾಗಿರುತ್ತದೋ ಅಷ್ಟು ಔಷಧೀಯ ಗುಣ ದೇಹಕ್ಕೆ ಸೇರಿದೆ ಎಂದು ಅರ್ಥ.
ಖಾದ್ಯ: ಸಾಮಾನ್ಯವಾಗಿ ಆಟಿ ಸೊಪ್ಪಿನ ರಸದಿಂದ ಕೊಡಗಿನಲ್ಲಿ ಪಾಯಸ ಹಾಲು ಬಾಯಿ ಮಾಡುತ್ತಾರೆ. ಆದರೆ ಇತ್ತಿಚೇಗೆ ಅದರಿಂದ ಹಲ್ವ, ಇಡ್ಲಿ, ತಟ್ಟೆ ಇಡ್ಲಿ ಮುಂತಾದ ಖಾದ್ಯವನ್ನೂ ತಯಾರಿಸುತ್ತಾರೆ. ಕೆಲವರು ಅನ್ನವನ್ನು ಕೂಡ ಈ ರಸದಿಂದ ಮಾಡುತ್ತಾರೆ. ರಸವನ್ನು ಜ್ಯೂಸ್ ರೀತಿಯಲ್ಲೂ ಸೇವಿಸುತ್ತಾರೆ. ಅಷ್ಟಕ್ಕೂ ಈ ರಸ ಸಿಹಿಯಾಗಿ ಇರುವುದಿಲ್ಲ. ಹಾಗಾಗಿ ಬಿಳಿ ಬೆಲ್ಲ ಸಕ್ಕರೆ ಸೇರಿಸಿ ಸವಿಯುತ್ತಾರೆ.
ಸಂಪ್ರದಾಯಬದ್ಧ ಹಬ್ಬದ ಆಚರಣೆ:
ಮದ್ದುಸೊಪ್ಪಿನ ಪಾಯಸ,ಮರಕೆಸುವಿನ ಪತ್ರೋಡೆ:
ಕರ್ಕಾಟಕ ಮಾಸದ 18ನೇ ದಿನದ ಸಂಭ್ರಮ. ಸಮುದ್ರಕ್ಕೆ ಹಾಲು ಸುರಿಯುವ ದಿನ. ಅಂದು ಕಡಲು ತನ್ನ ಒಡಲನ್ನು ಸಂಪೂರ್ಣ ತುಂಬಿ ಉಕ್ಕುವುದೆಂಬುದು ಪ್ರತೀತಿ. ಈ ಮಾಸ ಮಳೆಗಾಲದ ಮಧ್ಯ ಭಾಗವಾಗಿದೆ.
ಕೊಡಗಿನ ಜನರ ಕೃಷಿ ಚಟುವಟಿಕೆಯ ‘ಕಕ್ಕಡ ಪದಿನೆಟ್’ ಹಾಗೂ ತುಳು ಭಾಷಿಗರ ‘ಆಟಿ ಪದಿನೆಣ್ಮ’ ಆಚರಣೆನ್ನು ಆಗಸ್ಟ್ 4ರಂದು ಸೋಮವಾರ ಕೊಡಗು ಜಿಲ್ಲೆಯಾದ್ಯಂತ ಸಂಪ್ರದಾಯಬದ್ಧವಾಗಿ ಆಚರಿಸಲಾಗುತ್ತದೆ. ಕನ್ನಡ ಭಾಷಿಕರ ‘ಆಷಾಢ ’ ಎಂಬ ಪದವೇ ಕೊಡವರ ‘ಕಕ್ಕಡ ’ಹಾಗೂ ತುಳು ಭಾಷಿಗರ ’ಆಟಿ ’ ಆಚರಣೆಯಾಗಿದೆ.ಆಟಿ ಹದಿನೆಂಟು ತಮಿಳರಲ್ಲಿ ಆಟಿಪದಿನೆಟ್ಟಾಂ ಪೆರುಕ್ಕುಂ ಎಂದು
ಆಚರಿಸಲ್ಪಡುತ್ತದೆ. ಆಷಾಡದಲ್ಲಿ ದೇವಿಯ ಆರಾಧನೆ ಮಾಡುತ್ತಾರೆ.
ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅಂದು ಸಂಪ್ರದಾಯದಂತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯಮಾಡಲಾಗುತ್ತದೆ. ಆನಂತರ ಮನೆಯಲ್ಲಿ ಮಧುಬನ ಅಥವಾ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಹಬ್ಬವನ್ನು ಆಚರಿಸಲಾಗುತ್ತದೆ.
ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ ಪದಿನೆಟ್‌ರಂದು ಕೊಯ್ದು ನಾವೂ ಉಪ ಯೋಗಿಸುತ್ತೇವೆ. ಅಲ್ಲದೇ ಬಂಧುಗಳಿಗೆ, ಸ್ನೇಹಿತರಿಗೆ, ಅಕ್ಕಪಕ್ಕ ದವರಿಗೆಲ್ಲಾ ಹಂಚಿ ಸಂಭ್ರಮಿಸುತ್ತಾರೆ.
ಮದ್ದುಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸ ಲಾಗುತ್ತದೆ. ನಂತರ ಆ ನೀರನ್ನು ಸೋಸಿ ಕಡು ನೆರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ, ರವೆ, ಸಕ್ಕರೆ, ಗೋಡಂಬಿ–ದ್ರಾಕ್ಷಿ ಮತ್ತು ತುಪ್ಪ ಸೇರಿಸಿ ಕೇಸರಿಭಾತ್ ಸಹ ಮಾಡಲಾಗುತ್ತದೆ. ಆ ನೀರಿನಲ್ಲಿ ಅಕ್ಕಿ, ಬೆಲ್ಲ, ಕಾಯಿತುರಿ ಸೇರಿಸಿ ಅನ್ನ ಮಾಡುತ್ತಾರೆ. ಸುವಾ ಸನೆಯುಕ್ತ ಕಡುಬಣ್ಣದ ಖಾದ್ಯ ಸವಿಯಲು ತುಂಬಾ ರುಚಿಯಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮಧುಬನ ಸೊಪ್ಪಿನ ಪಾಯಸವಾಗಲೀ ಸಿಹಿ ಅನ್ನವಾಗಲಿ ಇಲ್ಲವೇ ತುಪ್ಪ ದನ್ನವಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ.
ಗೌಡ ಜನಾಂಗದವರು,ಇತರ ಜನಾಂಗದವರು ಸಹ ಆಷಾಢದ ಕೊನೆಯಲ್ಲಿ ಆಟಿ ಹದಿನೆಂಟನೆ ದಿನ ಮದ್ದುಸೊಪ್ಪಿನ ರಸದಿಂದ ತಯಾರಿಸಿದ ವೈವಿಧ್ಯಮಯ ಅಡುಗೆಯ ಸವಿದು ಸಂಭ್ರಮಿಸುತ್ತಾರೆ. ಕರ್ಕಾಟಕ ಮಾಸದಲ್ಲಿ ಕಾಡಿನಲ್ಲಿ ಸಸ್ಯಗಳು ಸಮೃದ್ಧವಾಗಿ ಬೆಳೆಯುತ್ತವೆ. ಕೊಡಗಿನಲ್ಲಿ ಮದ್ದುಸೊಪ್ಪಿನ ಜತೆ ಮರದ ಮೇಲೆ ಬಿಡುವ ‘ಮರಕೆಸ’ ಎಂಬ ಸೊಪ್ಪು ಕೂಡ ಔಷಧ ರೂಪ ತಾಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮರಕೆಸುವನ್ನು ಬಳಸುತ್ತಾರೆ.
ಆಟಿ ಮಾಸದಲ್ಲಿ ಯಾವ ದಿನವಾದರೂ ಈ ಸೊಪ್ಪನ್ನು ಉಪ ಯೋಗಿಸಿದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮರಕೆಸದಿಂದ ಪತ್ರೊಡೆ ಮಾಡಿ ಸವಿಯುತ್ತಾರೆ. ಹಬ್ಬ– ಹರಿದಿನಗಳು ಹಾಗೂ ಸಂಪ್ರದಾಯ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಮಧುಬನ ಹಾಗೂ ಮರಕೆಸದ ಸೇವನೆ ಉತ್ತಮ ನಿದರ್ಶನ. ಇವು ಮಳೆಗಾಲದ ಶೀತ ವಾತಾವರಣದಲ್ಲಿ ದೇಹದ ಉಷ್ಣಾಂಶ ವನ್ನು ಹೆಚ್ಚಿಸಿ ಶೀತ ಮತ್ತು ಚಳಿಯಿಂದ ರಕ್ಷಿಸುತ್ತವೆ. ನಮ್ಮ ಹಿರಿಯರು ಅನುಸರಿಸಿದ ನಿಸರ್ಗ ಕಾಳಜಿ, ಆರೋಗ್ಯವನ್ನು ರಕ್ಷಿಸುವ ಅವರ ಮನದ ಮಿಡಿತ ಇಂದಿನ ಜನಾಂಗ ಈ ಆಚರಣೆಯನ್ನು ಅನುಸರಿಸುವಂತಾಗಲಿ.ಆಟಿ ಸೊಪ್ಪಿನ ಗಿಡ ನೆಟ್ಟರೆ ಎಲ್ಲ ಕಡೆಯೂ ಬದುಕುತ್ತದೆ ಕಾಂಕ್ರೇಟ್ ನೆಲ ನೋಡುವವರು ಮಣ್ಣಿನಕಡೆ ಹಸಿರು ಗಿಡಗಳ ಕಡೆ ನೋಡುವಂತಾಗಲಿ. ಆರೋಗ್ಯದೊಂದಿಗೆ ನಿಸರ್ಗದ ಪೂಜೆಯಾಗಲ. ಶುಭಮಸ್ತು
ಆಟಿ 18ರ ಶುಭಾಶಯಗಳು.
18 ಹಬ್ಬದ ಸಂಭ್ರಮ

ಕಾಮೆಂಟ್‌ಗಳು