ರಾಧಿಕಾ
ರಾಧಿಕಾ
ರಾಧಿಕಾ ಜನಪ್ರಿಯ ಚಲನಚಿತ್ರ ನಟಿ ಮತ್ತು ಯಶಸ್ವೀ ಚಲನಚಿತ್ರ ಉದ್ಯಮಿ. ಅವರು ರದಾನ್ ಮೀಡಿಯಾವರ್ಕ್ಸ್ ಇಂಡಿಯಾ ಲಿಮಿಟೆಡ್‌ನ ಸಂಸ್ಥಾಪಕಿ ಮತ್ತು ಮುಖ್ಯಸ್ಥೆ ಆಗಿದ್ದು ಮತ್ತು ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಿದ್ದಾರೆ.
ರಾಧಿಕಾ 1962ರ ಆಗಸ್ಟ್ 21 ರಂದು ಜನಿಸಿದರು. ಇವರು ತಂದೆ ದಿವಂಗತ ಎಂ.ಆರ್.ರಾಧಾ ಚಲಮಚಿತ್ರ ನಟರಾಗಿದ್ದರು. ರಾಧಿಕಾ ತಮ್ಮ ಶಿಕ್ಷಣವನ್ನು ಭಾರತ, ಶ್ರೀಲಂಕಾ ಮತ್ತು ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಪಡೆದರು.
ರಾಧಿಕಾ 1978ರ ತಮಿಳು ಚಲನಚಿತ್ರ ಭಾರತೀರಾಜಾ ಅವರ 'ಕಿಳಕ್ಕೆ ಪೋಗುಮ್ ರೈಲ್' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಅವರು ಅನೇಕ ತಮಿಳು, ತೆಲುಗು, ಕನ್ನಡ, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ನಟಿಸಿದರು. 1985ರಲ್ಲಿ ಅವರು 'ಮೀಂಡುಮ್ ಒರು ಕಾತಲ್ ಕಥೈ' ಎಂಬ ಚಲನಚಿತ್ರವನ್ನು ನಿರ್ಮಿಸಿದರು. ಇದು ಅತ್ಯುತ್ತಮ ಚೊಚ್ಚಲ ಸೃಜನಶೀಲ ಪ್ರಯತ್ನಕ್ಕಾಗಿನ ರಾಷ್ಟ್ರೀಯ ಇಂದಿರಾ ಗಾಂಧಿ ಚಲನಚಿತ್ರ ಪ್ರಶಸ್ತಿ ಗಳಿಸಿತು. ನ್ಯಾಯಂ ಕಾವಾಲಿ (1981), ಧರ್ಮ ದೇವತೈ (1986), ನೀತಿಕ್ಕು ದಂಡನೈ (1987) ಮತ್ತು ಕೇಳಡಿ ಕಣ್ಮಣಿ (1990)ಗಾಗಿ ಅವರು ತೆಲುಗು ತಮಿಳು ಭಾಷೆಗಳಲ್ಲಿನ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.
ಸಿನಿಮಾದಲ್ಲಿ ಯಶಸ್ಸು ಕಂಡ ರಾಧಿಕಾ 1994ರಲ್ಲಿ ರಡಾನ್ ಮೀಡಿಯಾವರ್ಕ್ಸ್ ಹೆಸರಿನಡಿಯಲ್ಲಿ ತಮ್ಮದೇ ಆದ ಟಿವಿ ಕಾರ್ಯಕ್ರಮ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭಿಸಿದರು. ಕೆಲವು ಆರಂಭಿಕ ಅಡಚಣೆಗಳ ನಂತರ, ಸಂಸ್ಥೆಯು 1999 ರಿಂದ ರಾಧಾನ್ ಮೀಡಿಯಾವರ್ಕ್ಸ್ (ಐ) ಲಿಮಿಟೆಡ್ ಎಂಬ ಯಶಸ್ವಿ ಸಂಸ್ಥೆಯಾಗಿ ಪ್ರಖ್ಯಾತಿಗೊಂಡಿದೆ.
ವಿಜಯ್ ಟಿವಿಯ ಜೋಡಿ ನಂಬರ್ ಒನ್ ಸೀಸನ್ 4 ರಲ್ಲಿ ರಾಧಿಕಾ ತೀರ್ಪುಗಾರ್ತಿ ಆಗುದ್ದರು. ಅವರು ತೆಲುಗಿನಲ್ಲಿ 'ಇದಿ ಕಥಾ ಕಾದು' ಹಾಗೂ ತಮಿಳಿನಲ್ಲಿ ಚಿತ್ತಿ, ಅಣ್ಣಾಮಲೈ, ಸೆಲ್ವಿ, ಅರಸಿ, ಚೆಲ್ಲಮೈಯ್, ವಾಣಿ ರಾಣಿ, ತಾಮರೈ ಚಿತ್ತಿ - 2 ಮುಂತಾದ ಜನಪ್ರಿಯ ಧಾರಾವಾಹಿ ಸರಣಿಗಳನ್ನು ನಿರ್ಮಿಸಿದ್ದಾರೆ.
ರಾಧಿಕಾ ಅವರು ಒಂದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (ನಿರ್ಮಾಪಕಿಯಾಗಿ), 6 ದಕ್ಷಿಣ ಭಾರತೀಯ ಫಿಲ್ಮ್‌ಫೇರ್ ಪ್ರಶಸ್ತಿಗಳು, 3 ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿಗಳು, 1 ಸಿನಿಮಾ ಎಕ್ಸ್‌ಪ್ರೆಸ್ ಪ್ರಶಸ್ತಿ ಮತ್ತು 1 ನಂದಿ ಪ್ರಶಸ್ತಿಗಳನ್ನು ಗಳಿಸಿದ್ದಾರೆ.
ರಾಧಿಕಾ ಅವರು ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ ಮತ್ತು ಕೆಲವು ಹಿಂದೀ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪ್ರಚಂಡ ಕುಳ್ಳ, ಜೀವನ ಚಕ್ರ, ಸತ್ಯಮ್ ಶಿವಮ್ ಸುಂದರಮ್, ನಾಗಿನಿ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆ. ವಿಶ್ವನಾಥನ್ ಅವರ 'ಸ್ವಾತಿಮುತ್ಯಂ' ಚಿತ್ರದಲ್ಲಿ ಕಮಲಹಾಸನ್ ಅವರೊಂದಿಗಿನ ಅವರ ಅಭಿನಯ ಅವಿಸ್ಮರಣೀಯ.
On the birthday of popular actress and producer Radhika Sarathkumar
ಕಾಮೆಂಟ್‌ಗಳು