ರೀ ಗಣೇಶ ಇಟ್ಟಿದ್ದೀರಾ?
ರೀ ಗಣೇಶ ಇಟ್ಟಿದ್ದೀರಾ?
ನೂರೆಂಟು ಗಣೇಶ ದರ್ಶನದ ಸವಿನೆನಪು
"ರೀ ಗಣೇಶ ಇಟ್ಟೀದೀರಾ!" ಅಂತ ಗಣೇಶ ಹಬ್ಬದ ದಿನ ಮನೆ ಮನೆಗೆ ಹೋಗಿ ಅಲ್ಲಿದ್ದ ಗಣೇಶನಿಗೆ ನಮಸ್ಕರಿಸಿ, ಏನಾದ್ರೂ ಪ್ರಸಾದ ಕೊಡ್ತಾರಾ ಅಂತ ಪಿಳಿ ಪಿಳಿ ಕಣ್ಬಿಟ್ಟು, ಕೊಟ್ರೆ ಡಬ್ಬಕ್ಕೇರಿಸಿ, ಕೊಡದಿದ್ರೆ ಓ ಇವರೂ ನಮ್ಮ ತರಾನೇ ಅಂತ ಸಮಾಧಾನ ಮಾಡ್ಕೊಂಡು, ಕಡೇ ಪಕ್ಷ ನೂರೆಂಟು ಮನೆಯ ಗಣಪತೀನಾದ್ರೂ ನೋಡಿ, ಡಬ್ಬ ತುಂಬಿಸಿ, ಡಬ್ಬದಲ್ಲಿರುವುದೆಲ್ಲಾ ಹೊಟ್ಟೆಗಿಳಿಸಿದ ಮೇಲೆಯೇ ಮನೆಯಲ್ಲಿರುವ ಗಣಪತಿಗೆ 'ಸೀ ಯು ನೆಕ್ಸ್ಟ್ ಇಯರ್' ಅಂತ ಹೇಳಲಿಕ್ಕೆ ಬರ್ತಾ ಇದ್ದದ್ದು'. ಇದನ್ನು ನೆನೆಸಿಕೊಂಡ್ರೆ ಒಂತರಾ ರೋಮಾಂಚನವಾಗ್ತಾ ಇದೆ.
ಗಣೇಶ, ಚಿಕ್ಕಂದಿನಲ್ಲಿ ನಿನ್ನ ಹುಡುಕಿ ಮನೆಮನೆಗೆ ಹೋದದ್ದು, ಪ್ರಸಾದ ತಿಂದದ್ದು ನೆನೆಪಾಗ್ತಾ ಇದೆ. ಅದೆಲ್ಲಾ ಈಗ ನೆನಪು. ಆದರೆ ನಿನ್ನ ವರಪ್ರಸಾದ ಮಾತ್ರ ನಮ್ಮ ಮೇಲೆ ನಿರಂತರವಾಗಿರಲಿ ತಂದೆ. ಜೀವನದಲ್ಲಿನ ಅನೇಕ ಪರೀಕ್ಷೆಗಳಲ್ಲಿ ಮುಂದೆ ನಡೆಯೋಕೆ ಶಕ್ತಿ ಕೊಟ್ಟಿದ್ದೀಯ. "ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು, ಮುಂದೆಯೂ ಕೈ ಹಿಡಿದು ನಡೆಸದಿಹೆಯಾ, ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ". ಕರುಣಾಳು ನೀ ನಮ್ಮ ಕೈ ಹಿಡಿದು ಉತ್ತಮ ದಾರಿಯಲ್ಲಿ ನಡೆಸು.🌷🙏🌷
ಕಾಮೆಂಟ್‌ಗಳು