ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಇವರ್ಯಾರು ಗೊತ್ತಾ?


 ಇವರ್ಯಾರು ಗೊತ್ತಾ?


ನಾನು ಈಕೆಗೆ ಪ್ರಸಿದ್ಧಿ ತಂದ ಚಿತ್ರವನ್ನಾಗಲಿ, ಆಕೆಯ ಹೆಸರನ್ನಾಗಲಿ ಶೀರ್ಷಿಕೆಯಲ್ಲಿ ಹಾಕುತ್ತಿಲ್ಲ!  ನಾವು ಅದನ್ನು ನೋಡಿದ ತಕ್ಷಣ ಪೂರ್ವಾಗ್ರಹದಿಂದ ಸಮಸ್ತದ ಅವರ ಬಗ್ಗೆ ಕಾದಂಬರಿ ಕಲ್ಪಿಸಿಕೊಂಡು ಬಿಡುವ ಸಾಧ್ಯತೆ ಇದೆ. ಈಕೆ ಶಾಂತ ಕುಮಾರಿ.  

ಶಾಂತ ಕುಮಾರಿ ಹೆಚ್ಚು ಜನರಿಗೆ ಪರಿಚಯವಿಲ್ಲ.  'ಡಿಸ್ಕೋ ಶಾಂತಿ' ಎಂದರೆ ಅರ್ಥವಾಗುತ್ತೆ.  ಇವರು ಜನಿಸಿದ್ದು 1965ರ ಆಗಸ್ಟ್ 28ರಂದು.  ಈಕೆ ಸುಮಾರು ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದೀ ಮತ್ತು ಒಡಿಯಾ ಭಾಷೆಗಳ ಸುಮಾರು 900 ಚಿತ್ರಗಳಲ್ಲಿ ಐಟಮ್ ನಂಬರ್ ಎನ್ನುವ ಹಾಡುಗಳಿಗೆ ನರ್ತಿಸಿದವವರು.  ಹ್ಞಾ ಇರಿ!  ಮುಖ್ಯವಾದ ವಿಚಾರವಿದೆ. ಇವರು ಮಾಡಿರುವಷ್ಟು ಸಮಾಜ ಸೇವೆಯನ್ನು ಸಮಾಜದಲ್ಲಿ ಪ್ರಖ್ಯಾತರಿಂದ ಆಗಿರುವುದನ್ನು  ನಾವು ಕೇಳಿರುವುದಿಲ್ಲ.

ಶಾಂತ ಕುಮಾರಿ ಅವರ ತಂದೆ ಸಿ. ಎಲ್ .  ಆನಂದನ್ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದರು. ಈಕೆಯ ಸಹೋದರಿ ಲಲಿತ ಕುಮಾರಿ ಜನಪ್ರಿಯ ಕಲಾವಿದೆ. 

ಡಿಸ್ಕೋ ಶಾಂತಿ ತೆಲುಗು ನಟ ಶ್ರೀಹರಿ ಅವರನ್ನು 1995ರ ವರ್ಷ ವಿವಾಹವಾದ ನಂತರ ಚಲನಚಿತ್ರಗಳಲ್ಲಿ ನಟಿಸುವುದನ್ನು ನಿಲ್ಲಿಸಿದರು. ಈ ದಂಪತಿಗಳಿಗೆ ಇಬ್ಬರು ಗಂಡು ಮತ್ತು ಒಂದು ಹೆಣ್ಣು ಮಗು. ಹೆಣ್ಣು ಮಗು ಅಕ್ಷರಾ ನಾಲ್ಕು ತಿಂಗಳು ಮಗುವಾಗಿದ್ದಾಗ ಅಸುನೀಗಿತು. 

ಶಾಂತಿ ಮತ್ತು ಶ್ರೀಹರಿ ದಂಪತಿಗಳು ತಮ್ಮ ಮಗಳ ಹೆಸರಲ್ಲಿ ಅಕ್ಷರಾ ಫೌಂಡೇಷನ್ ಸ್ಥಾಪಿಸಿ ನೂರಾರು ಹಳ್ಳಿಗಳಿಗೆ ಫ್ಲೋರೈಡ್ ರಹಿತ ನೀರಿನ ಪೂರೈಕೆಗೆ ಕ್ರಮ ಕೈಗೊಂಡರು.  ಸಾವಿರಾರು ವಿದ್ಯಾರ್ಥಿಗಳಿಗೆ ಶಾಲಾ ಅಗತ್ಯ ವಸ್ತುಗಳ ಪೂರೈಕೆ ಮಾಡತೊಡಗಿದರು. ಮೆಡ್ಚಲ್ ಪ್ರದೇಶದಲ್ಲಿ ನಾಲ್ಕು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಆ ಹಳ್ಳಿಗಳ ಅಭಿವೃದ್ಧಿಗೆ ಕೆಲಸ ಮಾಡಿದರು. ಈ ಮಧ್ಯೆ ಶ್ವಾಸಕೋಶ ತೊಂದರೆಗೊಳಗಾದ ಶ್ರೀಹರಿ ನಟಿಸುತ್ತಿರವ ಸೆಟ್ನಲ್ಲೇ 2013ರಲ್ಲಿ ನಿಧನರಾದರು.

ಶಾಂತಿ ಅವರು ಉತ್ತಮ ಕೆಲಸಗಳನ್ನು ಮುಂದುವರೆಸಿದ್ದಾರೆ.

ಸಮಾಜ ಕೆಲವು ವ್ಯಕ್ತಿಗಳ ವೃತ್ತಿಗಳನ್ನು ತನ್ನ ಚಪಲಕ್ಕಾಗಿ ದುಡಿಸಿಕೊಳ್ಳುತ್ತಲೇ, ತನ್ನ ಸಭ್ಯತೆಯ ಮುಖವಾಡಕ್ಕೋಸ್ಕರ ಕೀಳ್ತನದಲ್ಲಿ ಕಟುಕಿಯಾಡುತ್ತಾ ವಿಜೃಂಭಿಸುತ್ತದೆ.  ಈ ಸಮಾಜಕ್ಕಿಂತ ಎಂಥದೇ ವೃತ್ತಿ ಮಾಡಿದವರೂ ತಮ್ಮ ಗಳಿಕೆಯಿಂದ ದೀನ ದಲಿತರಿಗಾಗಿ ದುಡಿಯುವುದು ಎಷ್ಟು ಉನ್ನತ ಸಂಗತಿಯಲ್ಲವೆ!

Do you know who this great lady is?

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ