ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್
ಇಂದ್ರಜಿತ್ ಲಂಕೇಶ್ ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ಪತ್ರಿಕೋದ್ಯಮಿ.
ಇಂದ್ರಜಿತ್ ಶಿವಮೊಗ್ಗದಲ್ಲಿ 1976ರ ಸೆಪ್ಟೆಂಬರ್ 22ರಂದು ಜನಿಸಿದರು. ತಂದೆ ಅಪ್ರತಿಮ ಬರಹಗಾರ ಮತ್ತು ಪತ್ರಿಕೋದ್ಯಮಿಯಾಗಿ ಹೆಸರಾದ ಪಿ.ಲಂಕೇಶ್ ಅವರು. ಇಂದ್ರಜಿತ್ ಬೆಳೆದದ್ದು ಬೆಂಗಳೂರಿನಲ್ಲಿ. ಅವರು ತಮ್ಮ ಶಿಕ್ಷಣವನ್ನು ಬೆಂಗಳೂರಿನ ಕುಮರನ್ಸ್ ಶಾಲೆ ಮತ್ತು ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮಾಡಿದರು.
ಇಂದ್ರಜಿತ್ ಕರ್ನಾಟಕ ರಾಜ್ಯ ಜೂನಿಯರ್ ಮಟ್ಟ ಮತ್ತು ದಕ್ಷಿಣ ವಲಯ ಜೂನಿಯರ್ ಮಟ್ಟದಲ್ಲಿ ಕ್ರಿಕೆಟ್ ಆಡಿ, ಚಾಂಪಿಯನ್ ತಂಡದ ಭಾಗವಾಗಿ ಅತ್ಯುತ್ತಮ ವಿಕೆಟ್-ಕೀಪರ್ ಪ್ರಶಸ್ತಿಯನ್ನು ಗಳಿಸಿದ್ದರು.
ಇಂದ್ರಜಿತ್ 'ಆಲ್‍ರೌಂಡರ್' ಎಂಬ ಪ್ರಸಿದ್ಧ ಕನ್ನಡ ಕ್ರೀಡಾ ಸಾಪ್ತಾಹಿಕವನ್ನು ಪ್ರಾರಂಭಿಸಿದರು. ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕ್ರೀಡಾ ವಾರಪತ್ರಿಕೆಯಾಗಿ ಎಂಬ ಹಿರಿಮೆ ಗಳಿಸಿತ್ತು. ಇಂದ್ರಜಿತ್ 1992-93ರಲ್ಲಿ 'ಲಂಕೇಶ್ ಪತ್ರಿಕೆ'ಯ ಉಪಸಂಪಾದಕರಾದರು. ಮುಂದೆ ಅದರ ವ್ಯವಸ್ಥಾಪಕ ಸಂಪಾದಕರಾದರು.
ಲಂಕೇಶ್ 2001ರಲ್ಲಿ ಚಲನಚಿತ್ರ ನಿರ್ದೇಶಕರಾದರು. ಅವರ ಚೊಚ್ಚಲ ಚಿತ್ರ 'ತುಂಟಾಟ' ಅವರಿಗೆ ನಿರ್ದೇಶಕರಾಗಿ ವಿ. ಶಾಂತಾರಾಮ್ ಪ್ರಶಸ್ತಿ ಮತ್ತು ಶಂಕರನಾಗ್ ಪ್ರಶಸ್ತಿಗಳನ್ನು ತಂದಿತು. ತುಂಟಾಟದ ಯಶಸ್ಸಿನ ನಂತರ, ನೈಜ ಘಟನೆ ಆಧಾರಿತ ಚಿತ್ರ 'ಲಂಕೇಶ್ ಪತ್ರಿಕೆ' ಮೂಡಿಸಿದರು. 2004ರಲ್ಲಿ, ಮೊನಾಲಿಸಾ ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಚಲನಚಿತ್ರಕ್ಕಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. ಮೊನಾಲಿಸಾ ಕರ್ನಾಟಕದಾದ್ಯಂತ 25 ವಾರಗಳ ಯಶಸ್ವಿ ಪ್ರದರ್ಶನ ಕಂಡಿತು. ಮೊನಾಲಿಸಾ ಚಿತ್ರವು ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಡಬ್ ಆಗುವ ಅಪರೂಪದ ಹೆಗ್ಗಳಿಕೆಯನ್ನು ಹೊಂದಿದೆ.
ಇಂದ್ರಜಿತ್ 2006ರಲ್ಲಿ ಉಪೇಂದ್ರ ನಾಯಕನಾಗಿ ನಟಿಸಿದ 'ಐಶ್ವರ್ಯ' ಚಿತ್ರವನ್ನು ನಿರ್ದೇಶಿಸಿದರು. ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರಿಗೆ ಇದು ಚೊಚ್ಚಲ ಚಿತ್ರ. ಲಂಕೇಶ್ ಈ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗೆದ್ದರು. ನಂತರ ಅವರು 'ಹುಡುಗ ಹುಡುಗಿ', 'ದೇವ್, ಸನ್ ಆಫ್ ಮುದ್ದೇಗೌಡ', 'ಲವ್ ಯು ಆಲಿಯಾ' 'ಶಕೀಲಾ' ಮುಂತಾದ ಚಿತ್ರಗಳನ್ನು ಮೂಡಿಸಿದ್ದಾರೆ.
ಇಂದ್ರಜಿತ್ ಲಂಕೇಶ್ ಕಿರುತೆರೆಯ ಪ್ರಖ್ಯಾತ ಹಾಗೂ ದೀರ್ಘಾವಧಿಯ ಕಾರ್ಯಕ್ರ 'ಮಜಾ ಟಾಕೀಸ್'ನ ಖಾಯಂ ಸೆಲೆಬ್ರಿಟಿ ಜಡ್ಜ್ ಆಗಿಯೂ ಉಪಸ್ಥಿತರಿದ್ದರು.
ಇಂದ್ರಜಿತ್ ಲಂಕೇಶ್ ಹಲವಾರು ಜನಪರ ಕಾರ್ಯಗಳು ಮತ್ತು ಸಹಾಯಾರ್ಥ ಕೊಡುಗೆಗಳಿಗೂ ಹೆಸರಾಗಿದ್ದಾರೆ.
Indrajit Lankesh
ಕಾಮೆಂಟ್‌ಗಳು