ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರೂಪಶ್ರೀ ಸತೀಶ್

 

ರೂಪಶ್ರೀ ಸತೀಶ್


ರೂಪಶ್ರೀ ಸತೀಶ್ ಮತ್ತು ಅವರ ಕುಟುಂಬವನ್ನು ನೋಡಿದಾಗ ಮನದಲ್ಲಿ ಅಚ್ಚಾಗುವುದು 'ಇದೊಂದು ನಾದಮಯ ಕುಟುಂಬ' ಎಂಬ ಹೃದ್ಭಾವ.

ಕನ್ನಡ ನಾಡಿನ ಮಣ್ಣಿನಲ್ಲಿ ಬೆಳೆದು ವೃತ್ತಿಪರವಾಗಿ ನೆಲೆಸಿರುವ ರೂಪಶ್ರೀ ಮತ್ತು ಅವರ ಪತಿ ಸತೀಶ್ ವೆಂಕೋಬ್ Satish Venkob ಅವರು ಭಾರತೀಯ ಸಂಸ್ಕೃತಿಗಳ ಸಕಲವನ್ನೂ ತಮ್ಮೊಂದಿಗೆ ನಾದಲೀನವಾಗಿಸಿಕೊಂಡಿದ್ದಾರೆ.  ಅವರ ಗಾನಮಾಧುರ್ಯದ ಪೋಸ್ಟುಗಳನ್ನು ನೋಡುವುದೇ ಹಿತಭಾವ ತರುತ್ತದೆ.  ಅದೆಷ್ಟು ತನ್ಮಯತೆಯಿಂದ ಪುರುಷ-ಸ್ತ್ರೀಧ್ವನಿ ಎರಡೂ ಏಕತ್ರ ದೈವಭಾವವಾಗಿ ಇವರ ಧ್ವನಿಯಲ್ಲಿ ಹೊರಹೊಮ್ಮುತ್ತದೆ ಎಂಬ ಸಂತೋಷ ನಮ್ಮಲ್ಲಿ ಮೂಡುತ್ತದೆ.  ಸತೀಶ್ ಅವರು, ಎಸಪಿಬಿ ನಡೆಸುತ್ತಿದ್ದ  ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಲ್ಲಿ ತಮ್ಮ ಗಾನವನ್ನು ವಿಜೃಂಭಿಸಿದವರು. ಕಚೇರಿಗಳಲ್ಲೂ ಇವರ ಸಂಗೀತ ನಲಿದಿದೆ.  ಈ ದಂಪತಿಗಳು ತಮ್ಮ ಸುಪುತ್ರ ವ್ಯಾಸ್ ಸತೀಶನಲ್ಲೂ ಸಂಗೀತ ಪ್ರೀತಿಯನ್ನು ಮೂಡಿಸಿ,  ಆತ ಕೂಡ ಉತ್ತಮ ಗಾಯಕನಾಗುವಂತೆ ಮಾಡಿದ್ದಾರೆ.

ರೂಪಶ್ರೀ-ಸತೀಶ್ ನಾದಮಯ ಕುಟುಂಬಕ್ಕೆ ಶುಭಹಾರೈಸುತ್ತ ಇಂದು ಹುಟ್ಟುಹಬ್ಬ ಆಚರಿಸುತ್ತಿರುವ ರೂಪಶ್ರೀ ಸತೀಶ್ ಅವರಿಗೆ ಹುಟ್ಟುಹಬ್ಬದ ಶುಭಹಾರೈಸೋಣ. ನಮಸ್ಕಾರ.  🌷🙏🌷

Happy birthday Roopashri Satish 🌷🌷🌷



ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ