ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮೆಹಮೂದ್


 ಮೆಹಮೂದ್


ಮೆಹಮೂದ್ ಪ್ರಖ್ಯಾತ ನಟಗಾಯಕನಿರ್ದೇಶಕ ಮತ್ತು ನಿರ್ಮಾಪಕ ಹಿಂದಿ ಚಲನಚಿತ್ರಗಳಲ್ಲಿಹಾಸ್ಯ ಪಾತ್ರಗಳನ್ನು ನಿರ್ವಹಿಸುವಲ್ಲಿ ಹೆಸರುವಾಸಿಯಾಗಿದ್ದವರುನಾಲ್ಕು ದಶಕಗಳಿಗೂ ಹೆಚ್ಚುಕಾಲದ ವೃತ್ತಿಜೀವನದಲ್ಲಿ ಅವರು 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದರು 


ಮೆಹಮೂದ್ ಅಲಿ 1932 ಸೆಪ್ಟೆಂಬರ್ 29ರಂದು ಜನಿಸಿದರು. 1940 ಮತ್ತು 1950ದಶಕದಲ್ಲಿ ಚಿತ್ರರಂಗದ ದೊಡ್ಡ ತಾರೆಯಾಗಿದ್ದ ಲತೀಫುನ್ನಿಸಾ ಮತ್ತು ಚಲನಚಿತ್ರ ಹಾಗೂ ರಂಗಕಲಾವಿದ ಮುಮ್ತಾಜ್ ಅಲಿ ಅವರ ಪುತ್ರರಾದ ಮೆಹಮೂದ್‌ ಅವರಿಗೆ ಒಬ್ಬ ಅಕ್ಕ ಮತ್ತು ಆರುಮಂದಿ ಕಿರಿಯ ಸಹೋದರರಿದ್ದರುಅವರ ಸಹೋದರಿ ಮಿನೂ ಮುಮ್ತಾಜ್ ಬಾಲಿವುಡ್ಚಲನಚಿತ್ರಗಳಲ್ಲಿ ಯಶಸ್ವಿ ನಟಿಯಾಗಿ ನೃತ್ಯಗಳಿಗೆ ಹೆಸರಾಗಿದ್ದರುಅವರ ಕಿರಿಯ ಸಹೋದರಅನ್ವರ್ ಅಲಿ ಕೂಡ ನಟ ಮತ್ತು ನಿರ್ಮಾಪಕರಾಗಿದ್ದರು.


ಬಾಲ್ಯದಲ್ಲಿಮೆಹಮೂದ್ 'ಕಿಸ್ಮತ್ಅಂತಹ ಚಿತ್ರಗಳಲ್ಲಿ ಕೆಲಸ ಮಾಡಿದ್ದರುನಂತರ ಅವರುಹಲವಾರು ವೃತ್ತಿಗಳಲ್ಲಿ ದುಡಿದರು ಕೋಳಿ ಉತ್ಪನ್ನಗಳನ್ನು ಮಾರಾಟ ಮಾಡಿದರು.   ನಿರ್ದೇಶಕಪಿ.ಎಲ್ಸಂತೋಷಿ ಅವರ ಚಾಲಕರಾಗಿ ಕೆಲಸ ಮಾಡಿದರುಮುಂದೆ 1994ರಲ್ಲಿ ಸಂತೋಷಿಅವರ ಮಗ ರಾಜ್‌ಕುಮಾರ್ ಸಂತೋಷಿ ಅವರ ಅಂದಾಜ್ ಅಪ್ನಾ ಅಪ್ನಾ ಚಿತ್ರದಲ್ಲಿ ನಟಿಸಿದರು.


ಮೆಹಮೂದ್ ಅವರು ನಟಿ ಮೀನಾ ಕುಮಾರಿ ಅವರಿಗೆ ಟೇಬಲ್ ಟೆನ್ನಿಸ್ ಕಲಿಸುತ್ತಿದ್ದರಂತೆಮೆಹಮೂದ್ 1950 ದಶಕದ ಆರಂಭದಲ್ಲಿ ನಟಿ ಮೀನಾ ಕುಮಾರಿ ಅವರ ತಂಗಿ ಮಧುಅವರನ್ನು ವಿವಾಹವಾದರು.   C.I.D ಚಿತ್ರದಲ್ಲಿ ಪುಟ್ಟಪಾತ್ರದಲ್ಲಿ ಅಭಿನಯಿಸಿ ಮುಂದೆ ಹೆಚ್ಚುಹೆಚ್ಚು ಚಿತ್ರಗಳಲ್ಲಿ ನಟಿಸಿದರು ದೋ ಬಿಘಾ ಜಮೀನ್ ಮತ್ತು ಪ್ಯಾಸಾದಲ್ಲಿ ಕಡಲೆಕಾಯಿಮಾರಾಟಗಾರನಂತಹ ಚಿತ್ರಗಳಲ್ಲಿ ಸಣ್ಣ  ಪಾತ್ರಗಳನ್ನು ಮಾಡಿದ ಅವರಿಗೆ ಮುಂದೆ ಗಣನೀಯಮತ್ತು ಪ್ರಮುಖ ಪಾತ್ರಗಳು ಸಂದವು.   ಹಾಸ್ಯ ಪಾತ್ರಾಭಿನಯಕ್ಕೆ ಅವರು ಹೆಚ್ಚು ಮೆಚ್ಚುಗೆಪಡೆದರು.  


ಪರ್ವರಿಷ್ಛೋಟಿ ಬಹೆನ್ಸಸುರಾಲ್ದಿಲ್ ತೇರಾ ದೀವಾನಾಜಿದ್ದಿಜಿಂದಗಿಬೇಟಿ ಬೇಟೆಗುಮ್ನಾಮ್ಜೋಹರ್ - ಮೆಹಮೂದ್ ಇನ್ ಗೋವಾಕಾಜಲ್ನೀಲ್ ಆಕಾಶ್ಬಹು ಬೇಟಿಲವ್ ಇನ್ ಟೋಕಿಯೊಪ್ಯಾರ್ ಕಿಯೆ ಜಾಯ್ಪಥ್ಥರ್ ಕೆ ಸನಮ್ಆಂಖೇನ್, ದೋ ಕಲಿಯಾನ್ನೀಲ್ ಕಮಲ್ಪಡೋಸನ್ಇಜ್ಜತ್ಸಾಧು ಔರ್ ಶೈತಾನ್ವಾರಿಸ್ಹಮ್ಜೋಲಿಮೈ ಸುಂದರ್ ಹ್ಞೂಪರಾಸ್ಮೇರೇ ಅಪ್ನೇನಯಾ ಜಮಾನಾಪಾಕೆಟ್ ಮಾರ್ಕುಂವಾರಾಬಾಪ್ಖುದ್ದಾರ್ ಮುಂತಾದ ಅನೇಕ ಚಿತ್ರಗಳಲ್ಲಿ ಮೆಹಮೂದ್ ಅವರ ಅಭಿನಯ ಪ್ರಖ್ಯಾತಿಪಡೆದಿತ್ತು


ಅನೇಕ ಚಲನಚಿತ್ರಗಳ ಅಭಿನಯಕ್ಕೆ ಮೆಹಮೂದ್ ಅವರಿಗೆ ಫಿಲಂಫೇರ್ ಪ್ರಶಸ್ತಿ ಮತ್ತುನಾಮನಿರ್ದೇಶ ಗೌರವಗಳು ಸಂದಿದ್ದವು.


ಹಲವು ವರ್ಷಗಳ ಕಾಲ ಬೆಂಗಳೂರಿನ ನಿವಾಸಿಯಾಗಿದ್ದ ಮೆಹಮೂದ್ ಅವರುಅನಾರೋಗ್ಯದಕಾರಣ ಅಮೆರಿಕದಲ್ಲಿ ಚಿಕಿತ್ಸೆಗಾಗಿ ತೆರಳಿದ್ದಾಗ 2004  ಜುಲೈ 23ರಂದು ನಿಧನರಾದರು.


On the birth anniversary of great comedian Mehmood 






ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ