ಆರ್ಕಾಟ್ ಸಹೋದರರು
ಆರ್ಕಾಟ್ ಅವಳಿ ಸಹೋದರರು
ಆರ್ಕಾಟ್ ಅವಳಿ ಸಹೋದರರು ಸ್ವಾತಂತ್ರ್ಯಪೂರ್ವ ಮತ್ತು ಸ್ವಾತಂತ್ರ್ಯಾನಂತರದಲ್ಲಿ ಆಡಳಿತ, ಶಿಕ್ಷಣ ಮತ್ತು ಸಾರ್ವಜನಿಕ ಜೀವನದಲ್ಲಿ ಮಹತ್ಸಾಧನೆ ಮಾಡಿದವರು.
ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ ಮತ್ತು ಆರ್ಕಾಟ್ ಲಕ್ಷ್ಮಣಸ್ವಾಮಿ ಮುದಲಿಯಾರ್ (1887-1974) ಅವರು ಅವಳಿ ಸಹೋದರರಾಗಿ 1887ರ ಅಕ್ಟೋಬರ್ 14ರಂದು ಜನಿಸಿದರು.
ಆರ್ಕಾಟ್‌ನ ಅವಳಿ ತಾರೆಗಳು ಎಂದು ಕರೆಯಲ್ಪಡುವ ಈ ಸಹೋದರರು 50 ವರ್ಷಗಳ ಕಾಲ ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಸಾಧನೆಗಳನ್ನು ಮಾಡಿದದ್ದರು. ಹೊಂದಿದ್ದರು. ಇಬ್ಬರೂ ಶಿಕ್ಷಣ ತಜ್ಞರು ಮತ್ತು ಉಪಕುಲಪತಿಗಳಾಗಿದ್ದರು. ಯಾವುದೇ ಭಾರತೀಯ ವಿಶ್ವವಿದ್ಯಾನಿಲಯದಲ್ಲಿ ಉಪಕುಲಪತಿಗಳಾಗಿ 27 ವರ್ಷಗಳ ಸುದೀರ್ಘ ಅಧಿಕಾರಾವಧಿಯನ್ನು ಹೊಂದಿರುವ ದಾಖಲೆಯನ್ನು ಒಬ್ಬರು ಹೊಂದಿದ್ದರು. ಇಬ್ಬರೂ ಸ್ವಾತಂತ್ರ್ಯದ ಮೊದಲು ಮತ್ತು ನಂತರ ರಾಷ್ಟ್ರೀಯ ಮಟ್ಟದಲ್ಲಿ ಹಲವಾರು ಸ್ಥಾನಗಳನ್ನು ಪಡೆದರು ಮತ್ತು ಅನುಭವಿ ಸಂಸದರಾಗಿದ್ದರು. ಅವರು ಬ್ರಿಟಿಷ್ ಸರ್ಕಾರದಿಂದ ಮತ್ತು ಸ್ವಾತಂತ್ರ್ಯದ ನಂತರದ ಭಾರತೀಯ ಆಡಳಿತದಿಂದ ಗೌರವಗಳನ್ನು ಪಡೆದರು. ರಾಜಕೀಯ ಚಿಂತನೆಯ ಕಾಂಗ್ರೆಸ್ ಶಾಲೆಗೆ ಸೇರದಿದ್ದರೂ, ಅವರು ರಾಷ್ಟ್ರದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅಪಾರ ಕೆಲಸ ಮಾಡಿದರು.
ವೈಷ್ಣವ ಸಂಪ್ರದಾಯವನ್ನು ಅನುಸರಿಸುವ ತಮಿಳು ಮಾತನಾಡುವ ತುಳುವ ವೆಲ್ಲಲರ್ ಕುಟುಂಬದಲ್ಲಿ ಜನಿಸಿದ ಆರ್ಕಾಟ್ ಅವಳಿಗಳು 15 ವಯಸ್ಸು ತುಂಬುವ ಮುಂಚೆಯೇ ತಮ್ಮ ಹೆತ್ತವರನ್ನು ಕಳೆದುಕೊಂಡರು. ತಾವು ಜನಿಸಿದ ಕರ್ನೂಲ್ನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, 1903ರಲ್ಲಿ ಚೆನ್ನೈಗೆ ಬಂದು ಮದ್ರಾಸ್ ಕ್ರಿಶ್ಚಿಯನ್ ಕಾಲೇಜ್ ಸೇರಿದರು. ಮಧ್ಯಂತರ ಕೋರ್ಸ್ ಮುಗಿದ ನಂತರ, ರಾಮಸ್ವಾಮಿ ಮುದಲಿಯಾರ್ ಅದೇ ಕಾಲೇಜಿನಲ್ಲಿ ಬಿ.ಎ. ಓದಿದರೆ ಲಕ್ಷ್ಮಣಸ್ವಾಮಿ
ಮುದಲಿಯಾರ್ ವೈದ್ಯಕೀಯ ಕ್ಷೇತ್ರವನ್ನು ಆರಿಸಿಕೊಂಡು ಮದ್ರಾಸ್ ವೈದ್ಯಕೀಯ ಕಾಲೇಜಿಗೆ ಸೇರಿದರು.
ರಾಮಸ್ವಾಮಿ ಮುದಲಿಯಾರ್ ಕಾನೂನು ಓದಿ ಜಸ್ಟಿಸ್ ಪಾರ್ಟಿ ಎಂದು ಕರೆಯಲ್ಪಡುವ ದಕ್ಷಿಣ ಭಾರತೀಯ ಲಿಬರಲ್ ಫೆಡರೇಶನ್ ಅನ್ನು ಸೇರಿದರು. ಅವರು ಪಕ್ಷದ ಅಂಗವಾದ 'ಜಸ್ಟೀಸ್' ಪತ್ರಿಕೆಯ ಸಂಪಾದಕರಾದರು. 1920ರಲ್ಲಿ, ಅವರು ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್ಗೆ ಆಯ್ಕೆಯಾದರು ಮತ್ತು ಮೂರು ವರ್ಷಗಳ ನಂತರ ಮರು ಆಯ್ಕೆಯಾದರು. 1930 ಮತ್ತು 1934ರ ನಡುವೆ, ಅವರು ಕೌನ್ಸಿಲ್ ಆಫ್ ಸ್ಟೇಟ್ಸ್ ಮತ್ತು ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಯ ಸದಸ್ಯರಾಗಿದ್ದರು. ಅವರು ನವೆಂಬರ್ 1934ರ ಪ್ರಸಿದ್ಧ ಚುನಾವಣಾ ಕದನದಲ್ಲಿ ಮದ್ರಾಸ್ ಕ್ಷೇತ್ರದಿಂದ ಸೆಂಟ್ರಲ್ ಲೆಜಿಸ್ಲೇಟಿವ್ ಅಸೆಂಬ್ಲಿಗೆ ಕಾಂಗ್ರೆಸ್ಸಿನ ಧೀಮಂತ ಎಸ್. ಸತ್ಯಮೂರ್ತಿಯವರ ವಿರುದ್ಧ ಸೋತರು. ಆದರೆ ಬ್ರಿಟಿಷ್ ಸರ್ಕಾರವು, ಸಾರ್ವಜನಿಕ ವ್ಯವಹಾರಗಳ ಜ್ಞಾನ ಮತ್ತು ಉಚ್ಚಾರಣೆಯ ಶಕ್ತಿಗೆ ಹೆಸರುವಾಸಿಯಾಗಿದ್ದ ಅವರ ಸೇವೆಗಳನ್ನು ಅನೇಕ ಸಂದರ್ಭಗಳಲ್ಲಿ ಬಳಸಿಕೊಂಡಿತು.
ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ 1940 ಮತ್ತು 1950ರ ಮೈಸೂರಿನ ದಿವಾನರಾಗಿದ್ದರು. ತಿರುವಾಂಕೂರ್ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದರು. ಅವರು ಸೇತುಸಮುದ್ರಂ ಕಾಲುವೆ ಮತ್ತು ಟುಟಿಕೋರಿನ್ ಹಾರ್ಬರ್ ಯೋಜನೆಗಳನ್ನು ಅಧ್ಯಯನ ಮಾಡಲು ಸಮಿತಿಯ ಮುಖ್ಯಸ್ಥರಾಗಿದ್ದರು.
ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರನ್ನು ಗವರ್ನರ್-ಜನರಲ್ ಕಾರ್ಯಕಾರಿ ಮಂಡಳಿಯ ವಾಣಿಜ್ಯ ಸದಸ್ಯರನ್ನಾಗಿ ಮಾಡಲಾಯಿತು. ನಂತರ ಅವರು ಯೋಜನೆ ಮತ್ತು ಅಭಿವೃದ್ಧಿಯ ಉಸ್ತುವಾರಿ (1942-1946)ಯಲ್ಲಿ ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ರಚನೆಯನ್ನು ಮಾಡಿದರು. ಇದು ಸ್ವಾತಂತ್ರ್ಯದ ನಂತರ, ವಿವಿಧ ರಾಷ್ಟ್ರೀಯ ಪ್ರಯೋಗಾಲಯಗಳ ನ್ಯೂಕ್ಲಿಯಸ್ ಎಂದೆನಿಸಿತು. ಅವರು ಚರ್ಚಿಲ್ ಅವರ ಅಧ್ಯಕ್ಷತೆಯ ಇಂಪೀರಿಯಲ್ ವಾರ್ ಕ್ಯಾಬಿನೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದರು. 1945ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಯುನೈಟೆಡ್ ನೇಷನ್ಸ್ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದರು. ಅವರು ಹಲವಾರು ಯುನೈಟೆಡ್ ನೇಷನ್ಸ್ ಆರ್ಥಿಕ ಮತ್ತು ಸಾಮಾಜಿಕ ಯೋಜನೆಯ ಅಧ್ಯಕ್ಷರಾಗಿ ಮತ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನಲ್ಲಿ ವಕ್ತಾರರಾಗಿ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ ಮುಂದೆ ಟ್ಯೂಬ್ ಇನ್ವೆಸ್ಟ್‌ಮೆಂಟ್ಸ್ ಆಫ್ ಇಂಡಿಯಾ ಮತ್ತು ಅಶೋಕ್ ಲೇಲ್ಯಾಂಡ್‌ನಂತಹ ಕಂಪನಿಗಳನ್ನು ಮುನ್ನಡೆಸಿದರು.
ಆರ್ಕಾಟ್ ಲಕ್ಷ್ಮಣಸ್ವಾಮಿ ಮುದಲಿಯಾರ್ ಅವರು ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದಲ್ಲಿ (O&G) ಪರಿಣತಿ ಪಡೆದಿದ್ದರು. ಅವರು 1939ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯರು. Obstetrics & Gynecology ಕುರಿತು ಅವರ ಪುಸ್ತಕವನ್ನು ಕ್ಲಾಸಿಕ್ ಎಂದು ಪರಿಗಣಿಸಲಾಗಿದ್ದು ವಿದೇಶಗಳಲ್ಲಿಯೂ ಖ್ಯಾತಿ ಗಳಿಸಿದೆ. ಅವರು 1940 ಮತ್ತು 1950ರ ದಶಕಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ವಾರ್ಷಿಕ ಸಮ್ಮೇಳನಗಳಿಗೆ ಭಾರತೀಯ ನಿಯೋಗದ ನಾಯಕರಾಗಿದ್ದರು. ಅವರು 1949-50ರಲ್ಲಿ WHOನ ಕಾರ್ಯನಿರ್ವಾಹಕ ಮಂಡಳಿಯ ಅಧ್ಯಕ್ಷರಾದರು ಮತ್ತು 1954-56ರ ಅವಧಿಯಲ್ಲಿ UNESCOದ ಅಧ್ಯಕ್ಷರಾದರು. 1961ರಲ್ಲಿ 14 ನೇ ವಿಶ್ವ ಆರೋಗ್ಯ ಅಸೆಂಬ್ಲಿಯ ಅಧ್ಯಕ್ಷರಾಗಿದ್ದರು. ಉನ್ನತ ಶಿಕ್ಷಣವು ಅವರ ಇನ್ನೊಂದು ಉತ್ಸಾಹವಾಗಿತ್ತು. ಮದ್ರಾಸ್ ವಿಶ್ವವಿದ್ಯಾನಿಲಯದೊಂದಿಗೆ ಅವರ ಒಡನಾಟವು 45 ವರ್ಷಗಳ ಕಾಲ ನಡೆಯಿತು. 1923ರಲ್ಲಿ ಸೆನೆಟ್ಗೆ ಆಯ್ಕೆಯಾದ ಅವರು 19 ವರ್ಷಗಳ ನಂತರ ಉಪಕುಲಪತಿಯಾಗಿ 27 ವರ್ಷ ಆ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದರು.
1950 ಮತ್ತು 1960ರ ದಶಕದಲ್ಲಿ ತಮಿಳಿನ ಪ್ರಚಾರವನ್ನು ಪ್ರತಿಪಾದಿಸುವ ಪ್ರಬಲ ರಾಜಕೀಯ ಚಳವಳಿಯ ಹೊರಹೊಮ್ಮುವಿಕೆಯ ಮಧ್ಯೆಯೂ, 1969 ರವರೆಗೆ ಉಪಕುಲಪತಿಗಳಾಗಿದ್ದ ಲಕ್ಮಣಸ್ವಾಮಿ ಮುದಲಿಯಾರ್ ಅವರು ಹೆಚ್ಚು ಹೆಚ್ಚು ಜನರಿಗೆ ತಲುಪುವುದಕ್ಕೆ ಇಂಗ್ಲಿಷ್ ಪರವಾಗಿದ್ದರು. ಎಂಜಿನಿಯರಿಂಗ್ ಮತ್ತು ವೈದ್ಯಕೀಯದಂತಹ ವಿಷಯಗಳಲ್ಲಿ ಆಂಗ್ಲ ಭಾಷೆಯಲ್ಲಿನ ಸ್ನಾತಕೋತ್ತರ ಕೋರ್ಸ್‌ಗಳ ಅಗತ್ಯವನ್ನು ಒತ್ತಿಹೇಳಲು ಅವರು ಹೆಸರುವಾಸಿಯಾಗಿದ್ದರು. 1953ರಲ್ಲಿಯೂ ಸಹ, ಅವರು ಎಲ್ಲಾ ಅಧ್ಯಯನಗಳನ್ನು, ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳನ್ನು ಅಂತರರಾಷ್ಟ್ರೀಯ ಮಾನದಂಡಗಳ ಮೂಲಕ ಮಾತ್ರ ನಿರ್ಣಯಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು.
ಆರ್ಕಾಟ್ ಲಕ್ಷ್ಮಣಸ್ವಾಮಿ ಮುದಲಿಯಾರ್ ಅವರು 1947ರಿಂದ 1970ರವರೆಗೆ ವಿಧಾನ ಪರಿಷತ್ತಿನಲ್ಲಿ ಚೆನ್ನೈನ ಪದವೀಧರರ ಕ್ಷೇತ್ರವನ್ನು ಪ್ರತಿನಿಧಿಸಿದರು. ಮೇಲ್ಮನೆಯಲ್ಲಿ ವಾಸ್ತವಿಕವಾಗಿ ವಿರೋಧ ಪಕ್ಷದ ನಾಯಕರಾಗಿದ್ದ ಎ ಎಲ್ ಮುದಲಿಯಾರ್ 1950 ಮತ್ತು 1960ರ ದಶಕದಲ್ಲಿ, ಸಂಸದೀಯ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದಕ್ಕೆ "ಹೊಳಪಿನ ಉದಾಹರಣೆ" ಆಗಿದ್ದರು. ಅವರ ಸ್ಮರಣೆಯನ್ನು ಶಾಶ್ವತಗೊಳಿಸಲು, ವಿಶ್ವವಿದ್ಯಾನಿಲಯದ ಎರಡು ಪೋಸ್ಟ್-ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಬೇಸಿಕ್ ಮೆಡಿಕಲ್ ಸೈನ್ಸಸ್ ಮತ್ತು ಸೆಂಟರ್ ಫಾರ್ ಬೇಸಿಕ್ ಸೈನ್ಸ್ ಡೆವಲಪ್ಮೆಂಟ್ ಶಾಖೆಗಳಿಗೆ ಅವರ ಹೆಸರನ್ನು ಇಡಲಾಗಿದೆ.
ಸಾರ್ವಜನಿಕ ಜೀವನದಲ್ಲಿ ಇರುವವರ ಬಗ್ಗೆ ಸಂದೇಹಗಳೆಂಬುದು ಸದಾ ಶಾಶ್ವತ ಎಂಬ ಮಾತಿದೆ. ಈ ನಿಟ್ಟಿನಲ್ಲಿ ಆರ್ಕಾಟ್ ಅವಳಿಗಳು ರಾಜಕೀಯ ಜಾಣತನ, ಆಡಳಿತಾತ್ಮಕ ಸಾಮರ್ಥ್ಯ, ಮನವರಿಕೆಯ ಧೈರ್ಯ ಮತ್ತು ಸಾಮಾಜಿಕ ನ್ಯಾಯದ ಕಾಳಜಿಯ ಸದ್ಗುಣಗಳ ಸಂಯೋಗವನ್ನು ಸಂಕೇತಿಸುತ್ತಾರೆ.
ಆರ್ಕಾಟ್ ಲಕ್ಷ್ಮಣಸ್ವಾಮಿ ಮುದಲಿಯಾರ್ 1974ರಲ್ಲಿ ನಿಧನರಾದರು. ಆರ್ಕಾಟ್ ರಾಮಸ್ವಾಮಿ ಮುದಲಿಯಾರ್ 1976ರಲ್ಲಿ ನಿಧನರಾದರು.
On the birth Anniversary of the twin stars of Arcot
ಕಾಮೆಂಟ್‌ಗಳು