ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕಾಮೇಗೌಡರು


ಕೆರೆಗಳ ನಿರ್ಮಿಸಿದ ಕಾಮೇಗೌಡರು

ಕುರಿಗಾಯಿ ಕಾಮೇಗೌಡರು 16 ಕೆರೆಗಳನ್ನು ನಿರ್ಮಿಸಿದ್ದ  ಮಹಾನುಭಾವ. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. 

ಕಾಮೇಗೌಡರು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಾಸನದೊಡ್ಡಿಯವರು. ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಎಂದು ಕಾಮೇಗೌಡರು ಕೈಯಾರೆ 16 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಳೆಸಿ ಕುರಿ ಕಾಯುವ ಕೆಲಸವನ್ನು ಹವ್ಯಾಸವಾಗಿ ಮಾಡುತ್ತಿದ್ದರು.

ಕಾಮೇಗೌಡರಿಗೆ ಕರ್ನಾಟಕ ಸರ್ಕಾರ  ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಅವರ ಬಗ್ಗೆ ಪ್ರಧಾನಿ ಮೋದಿಯವರು ಸಹ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತಪಡಿಸಿದ್ದರು.

ಕಾಮೇಗೌಡರು 2022ರ ಅಕ್ಟೋಬರ್ 18ರಂದು ತಮ್ಮ 84ನೇ ವಯಸ್ಸಿನಲ್ಲಿ ಈ ಲೋಕವನ್ನಗಲಿದರು. ಬದುಕೆಂಬುದು ಅವಕಾಶ.  ಬದುಕಿದ್ದಾಗ ಏನನ್ನಾದರೂ ಮಾಡಿ ಹೋಗಬೇಕು ಎಂಬುದು ಕಾಮೇಗೌಡರಂತಹ ದಿವ್ಯಜೀವಿಗಳಿಗೆ ಮಾತ್ರವೇ ಹೊಳೆಯುವಂತದ್ದು.  ಮಹಾತ್ಮರು ನಮ್ಮ ಕಾಲದಲ್ಲಿ ಕೂಡಾ ಇರುತ್ತಾರೆ ಎಂದು ನಂಬಿಕೆ ಹುಟ್ಟುವುದೇ ಇಂಥ ಪುಣ್ಯಾತ್ಮರಿಂದ. ಈ ಮಹಾನ್ ಚೇತನಕ್ಕೆ ನಮನ. 🌷🙏 🌷

Great soul Late Kamegowda who created 16 Lakes 

ಕಾಮೆಂಟ್‌ಗಳು

  1. ಚಂದ್ರಶೇಖರ್ ದಾವಣಗೆರೆಅಕ್ಟೋಬರ್ 18, 2024 ರಂದು 11:56 PM ಸಮಯಕ್ಕೆ

    ಕಾಮೇಗೌಡರನ್ಮು ಈ ಕಾಲದ ಭಗೀರಥನ ಸಹೋದರರೆಂದೇ ಎಂದೇ ಹೇಳಬಹುದು ಆ ಕಾಲದ ಭಗೀರಥ ಕೈಲಾಸದ ಶಿವನ ಜಡೆಯಿಂದ ಗಂಗೆಯನ್ನು ಧರೆಗೆ ತಂದರೆ ಈ ನಮ್ಮ ಕಾಮೇಗೌಡರು ಅದು ಭೂಮಿ ಮೇಲೆ ನಿಲ್ಲುವುದಕ್ಕೆ ಅವಕಾಶವನ್ನು ಸೃಷ್ಟಿಸಿದರು ಇದೇ ಅಲ್ಲವೇ ನಿಷ್ಕಾಮ ಕರ್ಮ ಎನ್ನುವುದು ಇಂತಹವರ ಸಂತತಿ ನೂರಾಗಲಿ ಸಾವಿರವಾಗಲಿ ಎಂದು ಆಶಿಸುತ್ತೇನೆ 🙏🏿

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ