ಗೋವಿಂದ ಪ್ರಸಾದ್
ಮೈಸೂರು ಗೋವಿಂದ ಪ್ರಸಾದ್
ಇಂದು ಹಿರಿಯರಾದ ಮೈಸೂರು ಗೋವಿಂದ ಪ್ರಸಾದ್ ಅವರ 85ನೇ ಜನ್ಮದಿನ.
ಅಕ್ಟೋಬರ್ 31 ಗೋವಿಂದ ಪ್ರಸಾದರ ಜನ್ಮದಿನ. ಇವರು ವಿಶ್ವಪ್ರಸಿದ್ಧ ತತ್ವಶಾಸ್ತ್ರಜ್ಞರೂ ಮತ್ತು ವಿದ್ವಾಂಸ ಲೇಖಕರೂ ಆದ ಪ್ರೊ. ಎಂ. ಯಾಮುನಾಚಾರ್ಯರ ಸುಪುತ್ರರು. ಗೋವಿಂದ ಪ್ರಸಾದರ ವಿದ್ಯಾಭ್ಯಾಸ ಮೈಸೂರಿನ ಶಾರದಾ ವಿಲಾಸ ಶಾಲೆ ಮತ್ತು ಯುವರಾಜಾ ಕಾಲೇಜುಗಳಲ್ಲಿ ನಡೆಯಿತು.
ಗೋವಿಂದ ಪ್ರಸಾದರು ಗ್ವಾಲಿಯರ್, ಊಟಿ, ದುಬೈ ಮುಂತಾದೆಡೆ ಗಣಿತ ಅಧ್ಯಾಪಕರಾಗಿ ಬೋಧಿಸಿದರು. ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಕ್ರೀಡೆ ಹೀಗೆ ಅವರ ಆಸಕ್ತಿಗಳು ವೈವಿಧ್ಯಪೂರ್ಣ. ಅಂತೆಯೇ ಅವರು ಅಕ್ಕರೆಯಿಂದ ನಮ್ಮಂತವರನ್ನು ಬೆಂಬಲಿಸಿ ಪ್ರೋತ್ಸಾಹಿಸುವ ರೀತಿಯೂ ಅರ್ಥಪೂರ್ಣ.
ಹಿರಿಯರೂ, ಜ್ಞಾನಿಗಳೂ, ಆಪ್ತರೂ ಆದ ಗೋವಿಂದ ಪ್ರಸಾದರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಹಾರೈಕೆಗಳು. ಸಾರ್, ನಿಮ್ಮ ಆಶೀರ್ವಾದ ಭಾಗ್ಯ ಸದಾ ನಮಗಿರಲಿ.
Happy birthday Mysore Govinda Prasad Sir
ಕಾಮೆಂಟ್‌ಗಳು