ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೀಪಾ ರಾವ್


ದೀಪಾ ರಾವ್


ಅಮೆರಿಕದಲ್ಲಿ ಸಾಫ್ಟ್ವೇರ್ ಕ್ಷೇತ್ರದಲ್ಲಿ ಎರಡು ದಶಕಗಳಿಗೂ ಹೆಚ್ಚು ಸೇವೆ ಸಲ್ಲಿಸಿರುವ  ಕನ್ನಡ ನಾಡಿನ ದೀಪಾ ರಾವ್ ಅವರು, ತಾವಿರುವ ನೆಲೆಯಲ್ಲಿ ಸಮುದಾಯದ ಹಿತಕ್ಕಾಗಿನ ಸ್ವಯಂ ಸೇವಕರಾಗಿ ನಿರಂತರವಾಗಿ ಅಪಾರ ಕೆಲಸ ಮಾಡುತ್ತಿದ್ದು ಅಲ್ಲಿ ಕನ್ನಡದ ದೀಪವನ್ನೂ ಆಪ್ತವಾಗಿ ಬೆಳಗಿಸಿದವರು.

ಡಿಸೆಂಬರ್ 11,  ದೀಪಾ ರಾವ್ ಅವರ ಜನ್ಮದಿನ.  ದೀಪಾ ರಾವ್ ಕನ್ನಡದ ಮಹಾನ್ ಕಥೆಗಾರ್ತಿ ವಾಣಿ ಅವರ ಮೊಮ್ಮಗಳು.  ಮಹಾನ್ ಕಥೆಗಾರ್ತಿಯರಾದ ತ್ರಿವೇಣಿ ಮತ್ತು ಆರ್ಯಾಂಭ ಪಟ್ಟಾಭಿ ಸಹಾ ಈ ಕುಟುಂಬದ ಪರಂಪರೆಯವರೆಂಬುದು ನಮಗೆ ತಿಳಿದ ವಿಚಾರ. ಇವರ ಪತಿ ಅರುಣ್ ರಾವ್ ಮಹಾನ್ ವಿದ್ವಾಂಸ ಮಂಡಿಕಲ್ ರಾಮಾಶಾಸ್ತ್ರಿಗಳ ಮೊಮ್ಮಗ.   ದೀಪಾ ರಾವ್ ತಮ್ಮ ಪತಿ ಅರುಣ್ ರಾವ್, ಅತ್ತೆಯವರಾದ ಪ್ರಮೀಳಾ ರಾವ್ ಹಾಗೂ ಮಗಳು ಅನಿಕಾ ರಾವ್ ಅವರೊಂದಿಗೆ ಓಂಸ್ಟೆಡ್ ಟೌನ್‍ಷಿಪ್ (Olmsted Township) ಎಂಬಲ್ಲಿ ನೆಲೆಸಿದ್ದಾರೆ.

ದೀಪಾ ರಾವ್ ಅವರು 21 ವರ್ಷಗಳ ಕಾಲ 
ಸಾಫ್ಟ್ವೇರ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದರು.  ಟೆಕ್ಸಾಸ್‍ನ, ಸಾನ್ ಆಂಟೋನಿಯಾದಿಂದ ಹನ್ನೊಂದು ವರ್ಷಗಳ ಹಿಂದೆ ಕ್ಲೀವ್‍ಲ್ಯಾಂಡಿಗೆ ಬಂದ ದೀಪಾ ಅವರ ಕುಟುಂಬ,  ಕಳೆದ 10 ವರ್ಷದಿಂದ ಓಂಸ್ಟೆಡ್ ಟೌನ್‍ಷಿಪ್ ಅಲ್ಲಿ ನೆಲೆಸಿದೆ. 

ದೀಪಾ ಅವರು ತಮ್ಮ ಬಿಡುವಿನ ಸಮಯದಲ್ಲಿ ಲಾಭರಹಿತ ಸದುದ್ದೇಶವುಳ್ಳ ಸಂಸ್ಥೆಗಳಲ್ಲಿ ಜನಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.  ಅವರು ಕಸ್ತೂರಿ ಕನ್ನಡ ಸಂಘದ ಹಿಂದಿನ ಅಧ್ಯಕ್ಷರಾಗಿದ್ದರು. Northeast Ohio Women in Technology (NEOWIT) ಸಂಘಟನೆಯ ಹಿಂದಿನ ಅಧ್ಯಕ್ಷರಾಗಿದ್ದ ಇವರು,  ಪ್ರಸಕ್ತ ಅಲ್ಲಿನ ಆಡಳಿತ ಮಂಡಳಿಯ ಸಲಹೆಗಾರರಾಗಿದ್ದಾರೆ. ಕ್ಲೀವ್‍ಲ್ಯಾಂಡ್ ಜನಸಮುದಾಯಕ್ಕೆ ಭಾರತೀಯ ರಾಯಭಾರಿ ಆಗಿದ್ದಾರೆ. Association of Asian Indian Women in Ohio (AAIWO), Leadership Council - Engage Cleveland ಸಂಘಟನೆಯ ಅಧ್ಯಕ್ಷರಾಗಿದ್ದಾರೆ. Federation of Indian Community Associations(FICA) ಕಾರ್ಯದರ್ಶಿಯಾಗಿದ್ದಾರೆ. PTA Olmsted Falls City Middle School ನ ಉಪಾಧ್ಯಕ್ಷರಾಗಿದ್ದಾರೆ. Olmsted Falls School Districtನ ಪ್ರಧಾನ ಸಂವಹನಕಾರರಾಗಿದ್ದಾರೆ.  ಈ ಹಿಂದೆ Evan Miller Trail HOAಗೆ ನಾಲ್ಕು ವರ್ಷಗಳ ಕಾಲ ಕಾರ್ಯದರ್ಶಿಯಾಗಿದ್ದರು. ಕಳೆದ ಎರಡು ವರ್ಷಗಳಿಂದ ಪ್ರತಿಷ್ಠಿತ FICA ಸಂಸ್ಥೆಯ ವಾರ್ತಾಪತ್ರವಾದ 'The Lotus’  ಪ್ರಧಾನ ಸಂಪಾದಕರಾದ ಗೌರವ ಇವರದ್ದಾಗಿದೆ. ಈ ಪತ್ರಿಕೆಯು ಕಳೆದ 58 ವರ್ಷಗಳಿಂದ ಕ್ಲೀವ್‍ಲ್ಯಾಂಡ್ ಸಮುದಾಯಕ್ಕೆ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. Ohio Statewide Family Engagement Centerನ ಸಲಹಾ ಸಮಿತಿಯ ಸದಸ್ಯತ್ವಕ್ಕೂ ತಮ್ಮ ಭಾಗವಹಿಕೆಯನ್ನು ಸಲ್ಲಿಸಿದ್ದಾರೆ. ವಾಷಿಂಗ್ಟನ್ನಿನ USIDHR ಇಂದ ಮಾನವಹಕ್ಕುಗಳ ಸಲಹೆಗಾರರಾಗುವ ನಿಟ್ಟಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ.  2024ರ Marquis Who's Who ಪಟ್ಟಿಯಲ್ಲಿ ನಮೂದನೆಗೊಂಡ ಗೌರವ ದೀಪಾ ರಾವ್ ಅವರದ್ದಾಗಿದೆ. ಕಳೆದ ಹಲವಾರು ವರ್ಷಗಳಿಂದ  Agile, NEOWIT ಮತ್ತು Global Cleveland ಗಳಲ್ಲಿ ಮಹಿಳೆಯರ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿರುವ ದೀಪಾ ಅವರು ಈಗಲೂ ಆ ಸೇವೆಯನ್ನು Global Cleveland ನಲ್ಲಿ ಮುಂದುವರೆಸಿದ್ದಾರೆ. Women in Tech Global Conference (WITCON) ಅಲ್ಲಿ 2024 and 2025ರಲ್ಲಿ ಉಪನ್ಯಾಸ ನೀಡಿದ್ದ ಇವರು, 2025ರಲ್ಲಿ "Mentorship and Sponsorship: Building the Next Generation of Women in Tech." ಎಂಬ ಕುರಿತು ವಿಚಾರ ಮಂಡಿಸಿದ್ದಾರೆ. 

ಅಪಾರ ಓದುಗರಾದ ದೀಪಾ ರಾವ್ ಅವರು ಶಾಸ್ತ್ರೀಯ ನೃತ್ಯವನ್ನು ಕಲಿಯುತ್ತಿದ್ದಾರೆ.

ನಮ್ಮ ಕನ್ನಡತಿ ದೀಪಾ ರಾವ್ ಅವರು ಅಮೆರಿಕದ ನೆಲದಲ್ಲಿ ಸಮಾಜದ ಸ್ವಾಸ್ಥ್ಯ, ಶಿಕ್ಷಣ, ಮಹಿಳೆಯರ ಅಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಪ್ರಕಾಶಿಸುತ್ತಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.  ಆತ್ಮೀಯರಾದ ದೀಪಾ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.  

Happy birthday Deepa Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ