ಹೊಸಹಳ್ಳಿ ಕೇಶವಮೂರ್ತಿ
ಎಚ್. ಆರ್. ಕೇಶವಮೂರ್ತಿ
ವಿದ್ವಾನ್ ಎಚ್. ಆರ್. ಕೇಶವಮೂರ್ತಿ ಅವರು ಗಮಕ ಕೋಗಿಲೆ ಎಂದು ಹೆಸರಾಗಿದ್ದವರು. ಇಂದು ಅವರ ಸಂಸ್ಮರಣೆ ದಿನ.
ಎಚ್. ಆರ್. ಕೇಶವಮೂರ್ತಿಗಳ ಗಮಕ ವಾಚನ ಕೇಳಿದಷ್ಟೂ ಮತ್ತಷ್ಟು ಕೇಳಬೇಕು ಎಂಬಂತಿದ್ದಭವ್ಯತೆಯ ಬೆರಗು.
ಕೇಶವ ಮೂರ್ತಿ - ಮತ್ತೂರು ಕೃಷ್ಣಮೂರ್ತಿ ಜೋಡಿಯ ಗಮಕ ವಾಚನ - ವ್ಯಾಖ್ಯಾನವನ್ನುಅದೆಷ್ಟೋ ಬಾರಿ ಭಾರತೀಯ ವಿದ್ಯಾ ಭವನದಲ್ಲಿ ಕೇಳಿ ತನ್ಮಯನಾಗಿ ಬಿಡುತ್ತಿದ್ದೆ. 1990ರಆಸುಪಾಸಿನಲ್ಲಿ ಒಮ್ಮೆ ಹಾಗೆ ಅವರ ಗಮಕವನ್ನು ಕೇಳಿ ಆನಂದಿಸಿ ಕಳೆದು ಹೋಗಿದ್ದ ನನ್ನನ್ನುಹಿರಿಯರೊಬ್ಬರು ಬಳಿ ಬಂದು "ಅದೆಷ್ಟು ತಾದ್ಯಾತ್ಮದಿಂದ ಆಲಿಸುತ್ತೀರಿ ನೀವು" ಎಂದುಬೆನ್ನುತಟ್ಟಿದ್ದರು. ಕೇಶವ ಮೂರ್ತಿಗಳ ಗಮಕ ಅಂದರೆ ನಾನು ಹಾಗೆ ಕಳೆದುಹೋಗುತ್ತಿದ್ದೆ. ಕೆಲವೊಮ್ಮೆ ಅವರ ಗಮಕದ ಸುಶ್ರಾವ್ಯತೆ ಕೇಳಿದಾಗ ವ್ಯಾಖ್ಯಾನ ಕೂಡಾ ಇಲ್ಲದೆ ಹಾಗೇಕೇಳುತ್ತಲೇ ಇರಬೇಕು ಎಂಬ ಪ್ರವಹಿನಿಯ ಆಶಯ ಮೂಡುತ್ತಿತ್ತು. ಅವರು ನಮ್ಮ ಎಚ್‍ಎಮ್‍ಟಿಕನ್ನಡ ಸಂಪದದ ಕಾರ್ಯಕ್ರಮದ ಸಂದರ್ಭವೊಂದರಲ್ಲಿ ವೇದಘೋಷ ಸಹಾ ಮಾಡಿದ್ದರು. ನಮ್ಮ ಎಚ್ಎಮ್‍ಟಿ ಕೈಗಡಿಯಾರ ವಿಭಾಗ ಮತ್ತೂರು ಕೃಷ್ಣಮೂರ್ತಿ - ಹೊಸಹಳ್ಳಿಕೇಶವಮೂರ್ತಿಗಳ ಕಾವ್ಯವಾಚನವನ್ನು ಪ್ರಾಯೋಜಿಸಿದಾಗ ಸಹಾ ನಾನು ಈ ಜೋಡಿಯ ಆಪ್ತಸಾನ್ನಿಧ್ಯ ಅನುಭವಿಸಿದ್ದೆ.
2022ರಲ್ಲಿ ನಮ್ಮ ಎಚ್. ಆರ್. ಕೇಶವಮೂರ್ತಿಗಳಿಗೆ ಅವರು ಬದುಕಿದ್ದಾಗಲೇ ಪದ್ಮಶ್ರೀಕೊಡಬೇಕು ಅಂತ ತೋಚಿತಲ್ಲ ನಿಜಕ್ಕೂ ಹಾಗೆ ತೋಚಿದ ಹೃದಯವೇ ಧನ್ಯ.
ಎಚ್. ಆರ್. ಕೇಶವಮೂರ್ತಿ ಅವರು 1934ರ ಫೆಬ್ರವರಿ 22ರಂದು ಜನಿಸಿದರು. ಶಿವಮೊಗ್ಗ ಸಮೀಪದ ಮತ್ತೂರುಹೊಸಳ್ಳಿ ಅವರ ಊರು. ತಂದೆ ರಾಮಸ್ವಾಮಿ ಶಾಸ್ತ್ರಿ. ತಾಯಿ ಲಕ್ಷ್ಮೀದೇವಮ್ಮ.
ಕೇಶವಮೂರ್ತಿ ಅವರು ಬಾಲ್ಯದಿಂದಲೇ ಗಮಕ ಕಲೆ ಕರಗತ ಮಾಡಿಕೊಂಡಿದ್ದರು.
ತಂದೆ, ತಾಯಿ ರಾಗವಾಗಿ ಹಾಡುತ್ತಿದ್ದ ಪುರಾಣಗಳಿಂದ ಉತ್ತೇಜಿತರಾದ ಅವರು ಹದಿನಾರನೇವಯಸ್ಸಿನಲ್ಲೇ ಗ್ರಾಮದ ವೆಂಕಟೇಶಯ್ಯ ಅವರ ಬಳಿ ಗಮಕ ವಾಚನ ಅಧ್ಯಯನ ಆರಂಭಿಸಿದ್ದರು. ರಾಮಾಯಣ, ಮಹಾಭಾರತ, ಕನ್ನಡ ಹಾಗೂ ಸಂಸ್ಕೃತದ ಕಾವ್ಯಗಳನ್ನು ಹಲವು ರಾಗಗಳಲ್ಲಿವಾಚನ ಮಾಡುವುದನ್ನು ರೂಢಿಸಿಕೊಂಡರು.
ಕೇಶವಮೂರ್ತಿ ಅವರು ನೂರಕ್ಕೂ ಹೆಚ್ಚು ವಿಭಿನ್ನ ರಾಗಗಳಲ್ಲಿ ವಾಚನ ಮಾಡುವ ಮೂಲಕ‘ಶತರಾಗಿ’ ಎಂಬ ಬಿರುದಿಗೂ ಪಾತ್ರರಾದವರು.
ಕೇಶವಮೂರ್ತಿ ಅವರ ಗಮಕ ನಾದದ ಸುಧೆ ರಾಜ್ಯ ಮತ್ತು ದೇಶದ ಅನೇಕ ಕಡೆ ಉಲಿದಿದೆ. ಧ್ವನಿಸುರುಳಿಗಳಲ್ಲಿ ತುಂಬಿ ಹರಿದಿದೆ. ಎಷ್ಟೋ ಹೃದಯಗಳನ್ನು ಮೀಯಿಸಿ ಪುನೀತಗೊಳಿಸಿದೆ. ಅಂತಹ ಭಾಗ್ಯ ನನದೂ ಆಗಿದೆ.
ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ! ಅದು ಕೊಟ್ಟವರ ಮತ್ತು ಅವರಿಗೆ ಬಂತು ಎಂದುಸಂಭ್ರಮಿಸುವ ಹೃದಯಗಳಿಗಾಗಿ. ಕೇಶವಮೂರ್ತಿಗಳ ಆ ಗಮಕ ವಾಚನ ಶ್ರೇಷ್ಠತೆಗೆ ಸಂದಿರುವ'ಕುಮಾರವ್ಯಾಸ ಪ್ರಶಸ್ತಿ’, ‘ರಾಜ್ಯೋತ್ಸವ ಪ್ರಶಸ್ತಿ’ ಮತ್ತು ಪದ್ಮಶ್ರೀ ಪ್ರಶಸ್ತಿಗಳು ನಮ್ಮ ಹೃದಯಗಳಿಗೆಸಂದ ಸಂತಸವಾಗಿತ್ತು. ಈ ಹಕ್ಕಿ 2022ರ ಡಿಸೆಂಬರ್ 21ರಂದು ಹಾಡು ನಿಲ್ಲಿಸಿ ತನ್ನ ಇಹಲೋಕದವ್ಯಾಪರವನ್ನು ಮುಗಿಸಿಬಿಟ್ಟಾಗ ನಮಗಾದ ವ್ಯಥೆ ಅಷ್ಟಿಷ್ಟಲ್ಲ. ಆದರೆ ಅವರು ನಾವಿರುವವರೆಗೂನಮ್ಮ ಹೃದಯದಲ್ಲಿರುತ್ತಾರೆ.
ಜಯಂತಿ ತೇ ಸುಕೃತಿನೋ
ರಸಸಿದ್ದಾಃ ಕವೀಶ್ವರಾಃ |
ನಾಸ್ತಿ ಯೇಷಾಂ ಯಶಃಕಾಯೇ
ಜರಾಮರಣಜಂ ಭಯಮ್ ||
“ಶಾಸ್ತ್ರೀಯ ಧರ್ಮಾನುಷ್ಠಾನಗಳಿಂದ ಪುಣ್ಯಶಾಲಿಗಳಾದ ಕವಿಶ್ರೇಷ್ಠರು, ವಿದ್ವಾಂಸರು, ರಸಸಿದ್ಧರೆನಿಸುವವರು ಲೋಕದಲ್ಲಿ ಶ್ರೇಷ್ಠರಾಗಿರುತ್ತಾರೆ. ಅವರುಗಳ ಕೀರ್ತಿಯೆಂಬ ಶರೀರದಲ್ಲಿಮುಪ್ಪು, ಸಾವುಗಳಿಂದಾಗುವ ಭಯವೆಂಬುದು ಇರುವುದೇ ಇಲ್ಲ.”
ಅವರ ಕಾವ್ಯವಾಚನ ನಮ್ಮ ಕಿವಿಗೂ ಬಿದ್ದಿತ್ತೂ ಎಂಬುದೇ ನಮ್ಮ ಬದುಕಿಗೂ ಸಂದಿದ್ದ ಧನ್ಯತೆ 🌷🙏🌷
H. R. Keshava Murthy
ಕಾಮೆಂಟ್‌ಗಳು