ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಛಾಯಾ ಮಾನೆ


 ಛಾಯಾ ಮಾನೆ


ಛಾಯಾ ಮಾನೆ ಪ್ರಖ್ಯಾತ ಕಾಸ್ಟ್ಯೂಮ್ ಡಿಸೈನರ್.

ಜನವರಿ 19 ಛಾಯಾ ಅವರ ಜನ್ಮದಿನ.  ಅವರು ಧಾರವಾಡದ ನಿವಾಸಿ.

ಛಾಯಾ ಮಾನೆ ಅವರು ತಮ್ಮ ಶಾಡೋಸ್ ಕ್ರಿಯೇಷನ್ಸ್ ಮೂಲಕ ವರ್ಣರಂಜಿತ ನವನವೀನ ವಸ್ತ್ರ ವಿನ್ಯಾಸಗಳನ್ನು ರೂಪಿಸುವುದರಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಮಕ್ಕಳು ಮತ್ತು ಹಿರಿಯರೆಲ್ಲರಿಗೂ, ವಿವಿಧ ಸಾಂಸ್ಕೃತಿಕ ನೆಲೆಗಳಲ್ಲಿ ಛಾಯಾ ಅವರು ವೇಷಭೂಷಣಗಳನ್ನು ಕಲಾತ್ಮಕವಾಗಿ ಮೂಡಿಸುತ್ತಿದ್ದಾರೆ. ಆ ವೇಷಭೂಷಣಗಳನ್ನು ಧರಿಸಿದ ತಂಡಗಳ ವೇದಿಕೆ ಅಥವಾ ಕಿರುತೆರೆಯ ಕಲಾಪ್ರದರ್ಶನಗಳನ್ನು ಕಾಣುವುದೇ ಛಂದ.  

ಛಾಯಾ ಅವರು 'ಧಾರವಾಡ ಲೇಡೀಸ್ ಕಲ್ಚರಲ್ ಅಕಾಡೆಮಿ' ಎಂಬ ಸಾಂಸ್ಕೃತಿಕ ವೇದಿಕೆಯನ್ನು ಸ್ಥಾಪಿಸಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೆಲೆ ಸಹಾ ಒದಗಿಸಿದ್ದಾರೆ. ಅನೇಕ ಸಾಂಸ್ಕೃತಿಕ ಕಾರ್ಯಕ್ರಮ ಸಂಘಟನೆಗಳಲ್ಲೂ ಅವರು ಸಕ್ರಿಯರಾಗಿದ್ದಾರೆ.

ಛಾಯಾ ಮಾನೆ ಅವರಿಗೆ ಅನೇಕ ಪ್ರಶಸ್ತಿ ಗೌರವ ಪುರಸ್ಕಾರಗಳೂ ಸಂದಿವೆ. 

ಆತ್ಮೀಯ ಪ್ರತಿಭಾನ್ವಿತೆ ಛಾಯಾ ಮಾನೆ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Chaya Mane 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ