ಕಟ್ಟೆ ರಾಮಚಂದ್ರ
ಕಟ್ಟೆ ರಾಮಚಂದ್ರ
ಕಟ್ಟೆ ರಾಮಚಂದ್ರ ಕನ್ನಡದ ಹೊಸ ಅಲೆಯ ಚಿತ್ರಗಳಿಗೆ ಜೀವ ತಂದ ಪ್ರತಿಭೆಗಳಲ್ಲಿ ಒಬ್ಬರು.
‘ಅರಿವು’ ಚಿತ್ರಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪಡೆದಿದ್ದ ಕಟ್ಟೆ ರಾಮಚಂದ್ರ 'ವೈಶಾಖದ ದಿನಗಳು' ಚಿತ್ರದ ನಿರ್ದೇಶನ ಮತ್ತು 'ಮಹಾಲಕ್ಷ್ಮಿ' ಚಿತ್ರ ನಿರ್ಮಾಣ ಮಾಡಿದ್ದರು.
ಕಿರು ತೆರೆಯಲ್ಲಿ ಕೂಡ ಸಕ್ರಿಯರಾಗಿದ್ದ ರಾಮಚಂದ್ರ ಅವರಿಗೆ 'ತನು ನಿನ್ನದು ಮನ ನಿನ್ನದು' ಹೆಸರು ತಂದು ಕೊಟ್ಟ ಧಾರಾವಾಹಿ.
ಬಹುತೇಕ ಆರಂಭಿಕ ಎಲ್ಲ ಕಲಾತ್ಮಕ ಚಿತ್ರಗಳಲ್ಲೂ ಒಂದಲ್ಲ ಒಂದು ರೀತಿ ತೊಡಗಿಕೊಂಡಿದ್ದ ಕಟ್ಟೆ ರಾಮಚಂದ್ರರ ಅಪಾರ ಪ್ರತಿಭೆಯನ್ನು ಚಿತ್ರರಂಗ ಅಷ್ಟಾಗಿ ಬಳಸಿ ಕೊಳ್ಳಲಿಲ್ಲ ಎಂಬುದು ತಜ್ಞರ ಅಭಿಪ್ರಾಯ. ಅವರೂ ಪ್ರಚಾರಕ್ಕೆ ಬರುವ ಆಕಾಂಕ್ಷಿಗಳಾಗಿರಲಿಲ್ಲ.
1947ರ ಫೆಬ್ರವರಿ 15 ರಂದು ಜನಿಸಿದ ಕಟ್ಟೆ ರಾಮಚಂದ್ರ, ಕೊನೆಯ ಮೂರು ವರ್ಷ ಅನಾರೋಗ್ಯ ಪೀಡಿತರಾಗಿದ್ದ ತಮ್ಮ ಪತ್ನಿಯ ಸೇವೆಯನ್ನು ಶ್ರದ್ಧೆಯಿಂದ ಮಾಡಿದ್ದರು. 2022 ವರ್ಷದಲ್ಲಿ ರಾಮಚಂದ್ರ ಅವರ ನಿಧನಕ್ಕೆ ಐದು ದಿನಗಳ ಹಿಂದಷ್ಟೇ ಅವರ ಮಡದಿ ಸುಧಾ ಮಣಿ ನಿಧನರಾಗಿದ್ದರು. ಇದರ ಬೆನ್ನ ಹಿಂದೆಯೇ ಕಟ್ಟೆ ರಾಮಚಂದ್ರರೂ ತಮ್ಮ ಕೆಲಸ ಮುಗಿಯಿತು ಎಂಬ ಅರ್ಥದಲ್ಲಿ 2022ರ ಜನವರಿ 28ರಂದು ಹೊರಟು ಬಿಟ್ಟರು.
ಮಾಹಿತಿ ಕೃಪೆ: Sreedhara Murthy Sir
On Remembrance Day of film Director Katte Ramachandra
ಕಾಮೆಂಟ್‌ಗಳು