ಗೌರಿ ಸತ್ಯ
ಗೌರಿ ಸತ್ಯ
ಗೌರಿ ಸತ್ಯ ಎಂಬ ಹೆಸರಿನಲ್ಲಿ ಪತ್ರಿಕೋದ್ಯಮ ಲೋಕದಲ್ಲಿ ಸಾಧನೆ ಮಾಡಿದವರು ಜಿ. ಸತ್ಯನಾರಾಯಣ.
ಜನವರಿ 24, ಗೌರಿ ಸತ್ಯ ಅವರ ಜನ್ಮದಿನ. ಅವರ ವಿದ್ಯಾಭ್ಯಾಸ ಮೈಸೂರಿನಲ್ಲಿ ನೆರವೇರಿತು. ಅವರ ಸಮಸ್ತ ಕುಟುಂಬ ಪತ್ರಿಕೋದ್ಯಮ ಮತ್ತು ಪ್ರವಾಸೋದ್ಯಮಕ್ಕೆ ನೀಡಿದ ಕೊಡುಗೆ ಅಪಾರ. ತಂದೆ ಜಿ. ಎಲ್. ಸ್ವಾಮಿ ಬರಹಗಾರರಾಗಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ದೊಡ್ಡ ಹೆಸರಾಗಿದ್ದವರು.
ಗೌರಿ ಸತ್ಯ ಅವರು ಸಮಾಚಾರ್ ಪತ್ರಿಕೆಯ ಸಂಪಾದಕರಾಗಿ ಅದು ಡಿಜಿಟಲ್ ರೂಪಕ್ಕೆ ಬದಲಾಗುವವವರೆಗೆ ನಲವತ್ತು ವರ್ಷ ಸೇವೆ ಸಲ್ಲಿಸಿದ್ದರು. ಅವರು ನಿರ್ವಹಿಸಿದ ಜವಾಬ್ದಾರಿಗಳು ಅನೇಕ. ಪ್ರಸಕ್ತದಲ್ಲಿ ಅವರು 'ಮೈಸೂರುಸಮಾಚಾರ್.ಕಾಮ್' ಪ್ರಧಾನ ಸಂಪಾದಕರಾಗಿ ಮತ್ತು ಪ್ರಧಾನ ಅಧಿಕಾರಿಗಳಾಗಿದ್ದಾರೆ.
ಗೌರಿ ಸತ್ಯ ಅವರು ರಾಷ್ಟ್ರೀಯ ಪತ್ರಿಕೆಗಳಾದ ಇಂಡಿಯನ್ ಎಕ್ಸ್ಪ್ರೆಸ್, ದ ಟೈಮ್ಸ್ ಆಫ್
ಇಂಡಿಯಾ ಮತ್ತು ಬ್ಯುಸಿನೆಸ್ ಸ್ಟಾಂಡರ್ಡ್ ಅಲ್ಲದೆ ರಾಜ್ಯದ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದರು. ಅವರು ಗೌರಿ ಸತ್ಯ ಹೆಸರಿನಲ್ಲಿ ಅನೇಕ ಲೇಖನಗಳನ್ನು ಮೂಡಿಸುತ್ತ ಬಂದಿದ್ದಾರೆ.
ಗೌರಿ ಸತ್ಯ ಅವರು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರ “Mysuru Memories – the Old City of Mysuru” ಕೃತಿಯನ್ನು 2018ರಲ್ಲಿ ಡಿಪಾರ್ಟ್ಮೆಂಟ್ ಆರ್ಕಿಯಾಲಜಿ, ಮ್ಯೂಸಿಯಮ್ಸ್ ಅಂಡ್ ಹೆರಿಟೇಜ್ ಪ್ರಕಟಿಸಿದೆ.
ಗೌರಿ ಸತ್ಯ ಅವರ ಕನ್ನಡ ಕೃತಿಗಳಲ್ಲಿ ಮುಕ್ತಿ, ಪ್ರಾಪ್ತಿ ಎಂಬ ಕಾದಂಬರಿಗಳು, ಕಾವ್ಯಗಳಲ್ಲಿ ಒಡೆಯರು ಮುಂತಾದವು ಸೇರಿವೆ.
ಗೌರಿ ಸತ್ಯ ಅವರಿಗೆ ಕರ್ನಾಟಕ ಪತ್ರಿಕಾ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಹಿರಿಯ ಸಾಧಕರಾದ ಗೌರಿ ಸತ್ಯ ಅವರಿಗೆ ಜನ್ಮದಿನದ ಹಾರ್ದಿಕ ಶುಭಹಾರೈಕೆಗಳು.
Happy birthday to great journalist and writer Gouri Satya Sir
ಕಾಮೆಂಟ್‌ಗಳು