ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸಮುದ್ಯತಾ ವೆಂಕಟರಾಮು


ಸಮುದ್ಯತಾ ವೆಂಕಟರಾಮು


ಸಮುದ್ಯತಾ ವೆಂಕಟರಾಮು ಅವರು ಗಮಕ ಕಲಾವಿದೆಯಾಗಿ ಮತ್ತು ಬರಹಗಾರ್ತಿಯಾಗಿ ಹೆಸರಾದವರು.

ಫೆಬ್ರುವರಿ 28 ಸಮುದ್ಯತಾ ಅವರ ಜನ್ಮದಿನ.  ಅವರ ತಂದೆ ಮಹಾನ್ ಗಮಕಿಗಳಾಗಿದ್ದ ಸುಬ್ರಾವ್ ಮನೆ ಘಟ್ಟ ಅವರು. ತಂದೆಯವರ ಗಮಕ ವಾಚನ ಕಲೆ ಸಮುದ್ಯತಾ ಅವರ ಮೇಲೂ ಅಪಾರ ಪ್ರಭಾವ ತಂದಿದೆ.  ಇವರದು ಸಾಗರ ಸಮೀಪದ ಶೆಡ್ತೀಗೆರೆ ಗ್ರಾಮದಲ್ಲಿನ  ಕೃಷಿ ಕುಟುಂಬ.  ಬಿ.ಎ ಪದವಿ ಪಡೆದಿರುವ ಇವರು ಗಮಕ ಕಲೆಯ ಜೊತೆಗೆ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲೂ ಆಸಕ್ತಿ ಮೂಡಿಸಿಕೊಂಡವರು.  ಗಮಕ ವಾಚನದ ಅನೇಕ ಕಾರ್ಯಕ್ರಮಗಳನ್ನು ನೀಡಿರುವ ಇವರ ಕಾವ್ಯ ವಾಚನಗಳು ಸೋಷಿಯಲ್ ಮೀಡಿಯಾದಲ್ಲಿ ಕೂಡಾ ಆಸಕ್ತರನ್ನು ಸೆಳೆದಿವೆ.

ಸಮುದ್ಯತಾ ಅವರು ಅಚ್ಚುಕಟ್ಟಾದ ಆಕರ್ಷಕ ಶೈಲಿಯ ಬರಹಗಳಿಂದಲೂ ಗಮನ ಸೆಳೆದಿದ್ದಾರೆ. ಅನೇಕ ನಿಯತಕಾಲಿಕಗಳಲ್ಲಿ ಇವರ ಬರಹಗಳು ಮೂಡಿವೆ. ಕಥಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. ಇವರ ಹವ್ಯಕ ಭಾಷೆಯ ಕಥೆಗೆ ಕೊಡಗಿನ ಗೌರಮ್ಮ ಪ್ರಶಸ್ತಿ ಸಂದಿದೆ.

ಸಮುದ್ಯತಾ ಅವರ ಕವನಗಳು 'ಭಾನುಮತಿಯ ಮುತ್ತುಗಳು' ಮತ್ತು 'ಯೋಜನಗಂಧಿಯ ಸ್ವಗತ' ಎಂಬ ಎರಡು ಕಾವ್ಯ ಸಂಕಲನಗಳಾಗಿ ಪ್ರತಿಷ್ಠಿತ ಅಕ್ಷರ ಪ್ರಕಾಶನದಿಂದ ಪ್ರಕಟಗೊಂಡಿವೆ. ‘Forever Forty ಕರ್ನಲ್ ವಸಂತ್’ ಎಂಬುದು ಸಮುದ್ಯತಾ ಅವರು ಕನ್ನಡಕ್ಕೆ ತಂದಿರುವ ಸುಭಾಷಿಣಿ ವಸಂತ್ ಮತ್ತು ವೀಣಾ ಪ್ರಸಾದ್ ಅವರ ಕೃತಿಯ ಭಾವಾನುವಾದ.

ಸಾಹಿತ್ಯ, ಗಮಕ, ಸಂಗೀತ ಮುಂತಾದ ಸಾಂಸ್ಕೃತಿಕ ಆಸಕ್ತಿಗಳಲ್ಲಿ ನಿರಂತರ ಸಕ್ರಿಯರಾಗಿ ಹಸನ್ಮುಖ ಭಾವದಲ್ಲಿ ಸ್ನೇಹವಲಯದಲ್ಲಿ ಶೋಭಿಸುವ ಸಮುದ್ಯತಾ ವೆಂಕಟರಾಮು ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

Happy birthday Samudyatha Venkataramu

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ