ಶೇಷಾದ್ರಿ ಮೋಕ್ಷಗುಂಡಂ
ಶೇಷಾದ್ರಿ ಮೋಕ್ಷಗುಂಡಂ
ಶೇಷಾದ್ರಿ ಮೋಕ್ಷಗುಂಡಂ ಅವರು ಕಲಾವಿದರು, ಕಲಾಪೋಷಕರು ಮತ್ತು ಕಲಾಗುರುಗಳು.
ಶೇಷಾದ್ರಿ ಮೋಕ್ಷಗುಂಡಂ ಅವರು 1949ರ ಮಾರ್ಚ್ 18ರಂದು ಜನಿಸಿದರು. ಇವರು ಸರ್ ಎಂ. ವಿಶ್ವೇಶ್ವರಯ್ಯನವರ ಮೋಕ್ಷಗುಂಡಂ ಕುಟುಂಬಕ್ಕೆ ಸೇರಿದವರು. ಶೇಷಾದ್ರಿ ಅವರು ನ್ಯಾಷನಲ್ ಹೈಸ್ಕೂಲು ವಿದ್ಯಾರ್ಥಿಯಾಗಿದ್ದರು.
ಶೇಷಾದ್ರಿ ಅವರು ಹೈದಾರಬಾದಿನಲ್ಲಿ ನೆಲೆ ಹೊಂದಿದ್ದ ವೈಜ್ಞಾನಿಕ ಉಪಕರಣಗಳ ಸಂಸ್ಥೆಯಲ್ಲಿನ ಮಾರಾಟ ವಿಭಾಗದಲ್ಲಿ ಉದ್ಯೋಗದಲ್ಲಿದ್ದರು. ನಿವೃತ್ತಿಯ ನಂತರದಲ್ಲಿ ಅವರು ತಮ್ಮ ಚಿತ್ರಕಲೆ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದರು. ಜೊತೆಗೆ ಹಳೆಯ ಯುಗದ ಜನಪ್ರಿಯ ಹಿಂದೀ ಚಲನಚಿತ್ರಗೀತೆಗಳ ಆರಾಧಕರಾದ ಅವರು ಅಂತಹ ಗಾಯನ ಕಾರ್ಯಕ್ರಮಗಳನ್ನೂ ಆಯೋಜಿಸುತ್ತಾರೆ.
ಶೇಷಾದ್ರಿ ಮೋಕ್ಷಗುಂಡಂ ಅವರು ಕೆಲಕಾಲ ಡಾ. ಬಿ. ಕೆ. ಎಸ್. ವರ್ಮಾ ಅವರಲ್ಲಿ ಚಿತ್ರಕಲೆಯ ಮಾರ್ಗದರ್ಶನ ಗಳಿಸಿದರು. ಮುಂದೆ ಅವರು ಬೆಂಗಳೂರಿನಲ್ಲಿ ತಮ್ಮದೇ ಆದ ಕಲಾಶಾಲೆ ಆರಂಭಿಸಿ ಅನೇಕ ಕಲಾಸಕ್ತರಿಗೆ ಮಾರ್ಗದರ್ಶನ ಮಾಡಿದರು. ತಮ್ಮ ವಿದ್ಯಾರ್ಥಿಗಳ ಮೂಲಕ ಹಿಂದಿನ ಯುಗದ ಅನೇಕ ಪ್ರಸಿದ್ಧ ಕಲಾವಿದರ ವೈಶಿಷ್ಟ್ಯಪೂರ್ಣ ಚಿತ್ರಗಳನ್ನು ಹೋಲುವ ಚಿತ್ರಗಳನ್ನು ಮೂಡಿಸುವ ಮೂಲಕ ಹಳೆಯ ಯುಗದ ಚಿತ್ರಗಳನ್ನು, ಮುಂದಿನ ಯುಗದ ಜನಮನದಲ್ಲಿ ಮೂಡಿಸುವ ಕೈಂಕರ್ಯವನ್ನು ಮಾಡುತ್ತಿದ್ದಾರೆ. ಇಂತಹ ಚಿತ್ರಗಳು ಇವರ ಫೇಸ್ಬುಕ್ ಪುಟ SheshadrisArtpourri
ಮತ್ತು https://mangalaspotpourri.blogspot.com ಮುಂತಾದ ಕೊಂಡಿಗಳಲ್ಲಿವೆ.
ಹಿರಿಯ ಕಲಾವಿದರೂ ಆತ್ಮೀಯರೂ ಆದ ಶೇಷಾದ್ರಿ ಮೋಕ್ಷಗುಂಡಂ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Sheshadri Mokshagundam Sir 🌷🙏🌷
ಕಾಮೆಂಟ್‌ಗಳು