ಮೊಹಮದ್ ದಿಲವಾರ್
ಮೊಹಮದ್ ದಿಲವಾರ್
ಲೇಖಕಿ: ಸುಪ್ರೀತಾ ಶಾಸ್ತ್ರೀ
ವಿಶ್ವ ಗುಬ್ಬಚ್ಚಿಗಳ ದಿನವನ್ನು ಆರಂಭಿಸಿದ ಕೀರ್ತಿ ನಮ್ಮ ದೇಶದ ಮಹಾರಾಷ್ಟ್ರ ರಾಜ್ಯದ ನಾಸಿಕ್ ಮೂಲದ ಮೊಹಮದ್ ದಿಲವಾರ್ ಅವರಿಗೆ ಸಲ್ಲುತ್ತದೆ. ಕಳೆದ 2006 ರಲ್ಲಿ ಅವರು ಸ್ಥಾಪಿಸಿ ಮುನ್ನಡೆಯಿಸುತ್ತಿರುವ ನೇಚರ್ ಫಾರ್ ಎವರ್ ಸೊಸೈಟಿ ಆಫ್ ಇಂಡಿಯಾ (Nature Forever Society of India) ಸಂಸ್ಥೆಯು ಪ್ರಮುಖವಾಗಿ ಫ್ರಾನ್ಸ್ ನ ಎಕೊ-ಸಿಸ್ ಆಕ್ಷನ್ ಫೌಂಡೇಶನ್ (Eco-Sys Action Foundation of France) ಹಾಗೂ ಮತ್ತಿತರ ಹಲವಾರು ಅಂತರರಾಷ್ಟ್ರೀಯ ಸಂಸ್ಥೆಗಳ ಸಹಯೋಗದೊಡನೆ ವಿಶ್ವ ಗುಬ್ಬಚ್ಚಿಯ ದಿನವನ್ನು ಆರಂಭಿಸಿದೆ.
ಮೊಹಮದ್ ದಿಲವಾರ್ ಅವರು ತಮ್ಮ ಹುಟ್ಟಿದ ದಿನ ಮಾರ್ಚ್ 20 ನೇ ದಿನಾಂಕವನ್ನು ಗುಬ್ಬಚ್ಚಿಗಳ ಸಂರಕ್ಷಣೆಯ ದಿನವನ್ನಾಗಿಸಿದ್ದಾರೆ. ತಮ್ಮ ಹುಟ್ಟನ್ನೇ ಗುಬ್ಬಚ್ಚಿಗಳ ಸಂರಕ್ಷಣೆಗೆ ಮೀಸಲಿಟ್ಟು, ತಮ್ಮ ಜನ್ನ ದಿನವನ್ನು ಗುಬ್ಬಚ್ಚಿಗಳ ದಿನವನ್ನಾಗಿ ಆಚರಿಸುತ್ತಲೇ ಬಂದಿದ್ದು, ಅದೇ ವಿಶ್ವ ಗುಬ್ಬಚ್ಚಿಗಳ ದಿನವಾಗಿದೆ. ಮೊಟ್ಟ ಮೊದಲು 2009ರಲ್ಲಿ ವಿಶ್ವ ಗುಬ್ಬಚ್ಚಿ ದಿನವೆಂದು ಆಚರಿಸಿದರೂ ನಂತರದ ವರ್ಷದಿಂದ ಜಾಗತಿಕವಾಗಿ ಮನ್ನಣೆಗೊಂಡು ಇದೀಗ 30ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತಿದೆ. ನಾಸಿಕ್‌ನ RVK ವಿಜ್ಞಾನ ಕಾಲೇಜಿನಲ್ಲಿ ಇಕಾಲಜಿಯ ಉಪನ್ಯಾಸಕರಾಗಿದ್ದ ಮೊಹಮದ್ 2006ರಲ್ಲಿ ಪಕ್ಷಿಗಳ ಸಂರಕ್ಷಣೆಯ ರಾಯಲ್ ಸೊಸೈಟಿ (Royal Society for the Protection of Birds -RSPB )ಗೆ ಪ್ರಾಜೆಕ್ಟ್ ಒಂದರಲ್ಲಿ ಸೇರಿ 2010ರವರೆಗೂ ಅದರಲ್ಲೇ ಪಕ್ಷಿ ಸಂರಕ್ಷಣೆಯ ಪಾಠಗಳನ್ನು ಕಲಿತವರು. ಅಂದಿನಿಂದಲೂ ಗುಬ್ಬಚ್ಚಿಗಳ/ಪಕ್ಷಿಗಳ ಸಂರಕ್ಷಣೆಯಲ್ಲಿ ಕೃತಕ ಗೂಡು ನಿರ್ಮಾಣವೇ ಮುಂತಾದ ಯೋಜನೆಗಳ ಮೂಲಕ ಇಂದಿಗೂ ಕ್ರಿಯಾಶೀಲರಾಗಿದ್ದಾರೆ. ಅವರನ್ನು ಅಮೆರಿಕದ ಟೈಮ್ ಪತ್ರಿಕೆಯು ಪರಿಸರದ ಹೀರೋ-2008 (“Heroes of the Environment” for 2008) ಎಂದೂ ಗುರುತಿಸಿತ್ತು. ತಮ್ಮದೇ ಸಂಸ್ಥೆಯ ಕಚೇರಿಯಲ್ಲಿ ಒಮ್ಮೆ ಅನೌಪಚಾರಿಕ ಚರ್ಚೆಯಲ್ಲಿ “ವಿಶ್ವ ಗುಬ್ಬಚ್ಚಿ ದಿನ” ಆಚರಣೆಯ ಮಾತು ಬಂದಿದ್ದು ಆಚರಣೆಗೆ ಮೊದಲಾಗಿದೆ. ಪ್ರತೀ ವರ್ಷವೂ ಒಂದೊಂದು ಥೀಮ್ ಗಳಿಂದ ಆಚರಿಸುತ್ತಾ ಬಂದಿರುವ ಗುಬ್ಬಚ್ಚಿಗಳ ಮೇಲಿನ ಪ್ರೀತಿಯು ಈ ವರ್ಷಕ್ಕೆ ““I Love Sparrows” ಎಂಬ ಶೀರ್ಷಿಕೆಯನ್ನೇ ಆಯ್ಕೆ ಮಾಡಿದೆ.
ಲೇಖನ ಕೃಪೆ: ಸುಪ್ರೀತಾ ಶಾಸ್ತ್ರೀ
Credits to: Cfpus.org
Thank you Supreetha Belavadi
Happy birthday Mohammed Dilawar
ಕಾಮೆಂಟ್‌ಗಳು