ಪಾಲಿ ಉಮ್ರಿಗರ್
ಪಾಲಿ ಉಮ್ರಿಗರ್
ಪಹ್ಲಾನ್ ರತನ್‍ಜಿ ಉಮ್ರಿಗರ್ ಒಬ್ಬ ಶ್ರೇಷ್ಠ ಕ್ರಿಕೆಟಿಗರಾಗಿದ್ದರು. ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ 1948-1962 ಅವಧಿಯಲ್ಲಿ ಆಡಿದರು. ಜೊತೆಗೆ ಬಾಂಬೆ ಮತ್ತು ಗುಜರಾತ್‌ಗಾಗಿ ಪ್ರಥಮ ದರ್ಜೆ ಕ್ರಿಕೆಟ್ ಆಡಿದರು.
ಪಾಲಿ ಉಮ್ರಿಗರ್ 1926ರ ಮಾರ್ಚ್ 28ರಂದು ಜನಿಸಿದರು. ಮುಖ್ಯವಾಗಿ ಅವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಆಡಿದರಲ್ಲದೆ, ಸಾಂದರ್ಭಿಕವಾಗಿ ಮಧ್ಯಮ ವೇಗ ಮತ್ತು ಆಫ್ ಸ್ಪಿನ್ ಬೌಲರ್ ಆಗಿ ಸಹಾ ಕಾರ್ಯನಿರ್ವಹಿಸಿದರು. ಅವರು 1955ರಿಂದ 1958 ರವರೆಗೆ ಅವರು ಎಂಟು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡದ ನಾಯಕರಾಗಿದ್ದರು.
1962ರಲ್ಲಿ ಪಾಲಿ ಉಮ್ರಿಗರ್ ಅವರು ನಿವೃತ್ತರಾದಾಗ, ಅವರು ಎಲ್ಲ ಭಾರತೀಯರಿಗೂ ಮಿಗಿಲಾಗಿ ಹೆಚ್ಚಿನ ಟೆಸ್ಟ್‌ಗಳಲ್ಲಿ (59) ಆಡಿದ್ದರು, ಹೆಚ್ಚಿನ ಟೆಸ್ಟ್ ರನ್‌ಗಳನ್ನು (3,631) ಗಳಿಸಿದ್ದರು ಮತ್ತು ಇತರ ಯಾವುದೇ ಭಾರತೀಯ ಆಟಗಾರರಿಗಿಂತಲೂ ಹೆಚ್ಚು ಟೆಸ್ಟ್ ಶತಕಗಳನ್ನು (12) ದಾಖಲಿಸಿದ್ದರು. ಅವರು ಹೈದರಾಬಾದ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಿದರು. ಇದು ಭಾರತೀಯ ಆಟಗಾರರೊಬ್ಬರ ಪ್ರಥಮ ದ್ವಿಶತಕ ಸಾಧನೆ
ಪಾಲಿ ಉಮ್ರಿಗರ್ 2006ರ ನವೆಂಬರ್ 7ರಂದು ನಿಧನರಾದರು.
On the birth anniversary of first cricketer to score double century for India, Polly Umrigar
ಕಾಮೆಂಟ್‌ಗಳು