ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಲತಾ ಜೋಶಿ

 

ಲತಾ ಜೋಶಿ

ಲತಾ ಜೋಶಿ ಉತ್ಸಾಹಿ ಬರಹಗಾರ್ತಿ ಹಾಗೂ ಫೇಸ್ಬುಕ್ಕಿನಲ್ಲಿನ 'ಕಥಾಗುಚ್ಛ' ಬಳಗದ ಪ್ರವರ್ತಕರು.

ಏಪ್ರಿಲ್ 8 ಲತಾ ಜೋಶಿ ಅವರ ಜನ್ಮದಿನ.

ಅವರ ಹುಟ್ಟೂರು ರಾಣೆಬೆನ್ನೂರು.   ಬ್ಯಾಡಿಗಿ ಉರಿನ ಸೊಸೆಯಾದ ಅವರು ಮುಂದೆ ನೆಲೆಸಿದ್ದು ಬೆಂಗಳೂರಿನಲ್ಲಿ.  ಕೆಲವು ವರ್ಷ ಶಿಕ್ಷಕಿಯಾಗಿ ಕೆಲಸ ಮಾಡಿದ ಅನುಭವ ಅವರೊಂದಿಗಿದೆ. 

ಅಪಾರ ಓದುವ ಹವ್ಯಾಸವುಳ್ಳ ಲತಾ ಜೋಶಿ ಅವರ ಅನೇಕ ತೆರನಾದ ಬರಹಗಳು ನಿಯತಕಾಲಿಕಗಳಲ್ಲಿ ಹರಿದು ಬಂದಿವೆ. 

ಲತಾ ಜೋಶಿ ಫೇಸ್ಬುಕ್ನಲ್ಲಿ ಕನ್ನಡ ಕಥಾಗುಚ್ಛ ಎಂಬ ಸಾಹಿತ್ಯದ ಗುಂಪನ್ನು ಹುಟ್ಟುಹಾಕಿ ನಿರ್ವಹಿಸುತ್ತಿದ್ದಾರೆ. ಇದು ಅನೇಕ ಉತ್ಸಾಹಿ ಬರಹಗಾರರಿಗೆ ವೇದಿಕೆಯಾಗಿದ್ದು, ಅಲ್ಲಿನ ಕೆಲವು ಬರಹಗಳು ಕೃತಿಗಳಾಗಿಯೂ ಮೂಡಿವೆ. ಪ್ರತಿಭಾನ್ವಿತರಿಗೆ ಬಹುಮಾನಗಳನ್ನೂ ನೀಡಿ ಉತ್ತೇಜನ ನೀಡಲಾಗುತ್ತಿದೆ. 

ಲತಾ ಜೋಶಿ ಅವರ ಕಾದಂಬರಿ 'ಜೀವನ ಜೋಕಾಲಿ' ಓದುಗ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.

ಲತಾ ಜೋಶಿ ಅವರಿಗೆ ಹುಟ್ಟುಹಬ್ಬದ ಶುಭಹಾರೈಕೆಗಳು.


Happy birthday Lata Joshi 🌷🌷🌷 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ